ಹದೀಸ್‌ಗಳ ಪಟ್ಟಿ

ಶುಕ್ರವಾರ ಇಮಾಮರು ಪ್ರವಚನ ನಿರ್ವಹಿಸುತ್ತಿರುವಾಗ, ನೀನು ನಿನ್ನ ಬಳಿಯಿರುವವನಿಗೆ "ಮೌನವಾಗಿರು" ಎಂದು ಹೇಳಿದರೆ ನೀನು ಅನಗತ್ಯವಾದುದನ್ನು ಮಾಡಿದೆ
عربي الإنجليزية الأوردية
ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ
عربي الإنجليزية الأوردية
ನಿಮ್ಮಲ್ಲಿ ಯಾರಾದರೂ ಜುಮಾ ನಮಾಝ್‌ಗೆ ಬಂದರೆ ಸ್ನಾನ ಮಾಡಿ ಬರಲಿ
عربي الإنجليزية الأوردية
ಯಾರು ಉತ್ತಮ ರೀತಿಯಲ್ಲಿ ವುದೂ ನಿರ್ವಹಿಸಿ, ನಂತರ ಜುಮಾ ನಮಾಝಿಗೆ ಬಂದು, (ಪ್ರವಚನವನ್ನು) ಕಿವಿಗೊಟ್ಟು ಕೇಳಿ, ಮೌನವಾಗಿರುತ್ತಾನೋ, ಆ ಜುಮಾ ಮತ್ತು ಮುಂದಿನ ಜುಮಾದ ತನಕವಿರುವ ಮತ್ತು ಮೂರು ದಿನ ಹೆಚ್ಚುವರಿಯಾಗಿ, ಅವನ ಎಲ್ಲಾ ಪಾಪಗಳನ್ನು ಕ್ಷಮಿಸಲಾಗುವುದು
عربي الإنجليزية الأوردية
ಹರೆಯ ತಲುಪಿದ ಎಲ್ಲರಿಗೂ ಶುಕ್ರವಾರ ಸ್ನಾನ ಮಾಡುವುದು, ಹಲ್ಲು ಸ್ವಚ್ಛ ಮಾಡುವುದು ಮತ್ತು ಲಭ್ಯವಿದ್ದರೆ ಸುಗಂಧ ದ್ರವ್ಯವನ್ನು ಹಚ್ಚುವುದು ಕಡ್ಡಾಯವಾಗಿದೆ
عربي الإنجليزية الأوردية
“ಹಾಜಿಗಳಿಗೆ ನೀರು ಕುಡಿಸುವುದನ್ನು ಮತ್ತು ಮಸ್ಜಿದುಲ್ ಹರಾಮ್ ಅನ್ನು ನಿರ್ವಹಿಸುವುದನ್ನು, ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸವಿಟ್ಟವರ (ಕಾರ್ಯಕ್ಕೆ) ನೀವು ಸಮಾನವಾಗಿಸಿದಿರೇನು?…” [ತೌಬಾ: 19] ವಚನದ ಕೊನೆಯವರೆಗೆ
عربي الإنجليزية الأوردية
ಜನರು ಜುಮುಅ (ಶುಕ್ರವಾರದ) ನಮಾಝ್‌ಗಳನ್ನು ಬಿಡುವುದನ್ನು ಖಂಡಿತವಾಗಿಯೂ ನಿಲ್ಲಿಸಬೇಕು. ಇಲ್ಲದಿದ್ದರೆ, ಅಲ್ಲಾಹು ಅವರ ಹೃದಯಗಳ ಮೇಲೆ ಖಂಡಿತವಾಗಿಯೂ ಮೊಹರು ಹಾಕುವನು. ನಂತರ ಅವರು ಖಂಡಿತವಾಗಿಯೂ ನಿರ್ಲಕ್ಷ್ಯರಾಗಿ ಬಿಡುವರು
عربي الإنجليزية الإندونيسية
ಯಾರು ಉದಾಸೀನತೆಯಿಂದ ಮೂರು ಜುಮುಅ (ಶುಕ್ರವಾರದ ನಮಾಝ್) ಗಳನ್ನು ಬಿಡುತ್ತಾರೋ, ಅಲ್ಲಾಹು ಅವರ ಹೃದಯದ ಮೇಲೆ ಮೊಹರು ಹಾಕುತ್ತಾನೆ
عربي الإنجليزية الإندونيسية