عن عبد الله بن عُمر وأبي هريرة رضي الله عنهما أنهما سمعا رسول الله صلى الله عليه وسلم، يقول على أعواد منبره:
«لَيَنْتَهِيَنَّ أَقْوَامٌ عَنْ وَدْعِهِمُ الْجُمُعَاتِ أَوْ لَيَخْتِمَنَّ اللهُ عَلَى قُلُوبِهِمْ، ثُمَّ لَيَكُونُنَّ مِنَ الْغَافِلِينَ».
[صحيح] - [رواه مسلم] - [صحيح مسلم: 865]
المزيــد ...
ಅಬ್ದುಲ್ಲಾ ಇಬ್ನ್ ಉಮರ್ ಮತ್ತು ಅಬೂ ಹುರೈರಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರಿಬ್ಬರು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮಿಂಬರ್ (ಪ್ರವಚನ ಪೀಠ) ನ ಮರದ ಮೆಟ್ಟಿಲುಗಳ ಮೇಲೆ (ನಿಂತು) ಹೇಳುತ್ತಿರುವುದನ್ನು ಕೇಳಿದರು:
"ಜನರು ಜುಮುಅ (ಶುಕ್ರವಾರದ) ನಮಾಝ್‌ಗಳನ್ನು ಬಿಡುವುದನ್ನು ಖಂಡಿತವಾಗಿಯೂ ನಿಲ್ಲಿಸಬೇಕು. ಇಲ್ಲದಿದ್ದರೆ, ಅಲ್ಲಾಹು ಅವರ ಹೃದಯಗಳ ಮೇಲೆ ಖಂಡಿತವಾಗಿಯೂ ಮೊಹರು ಹಾಕುವನು. ನಂತರ ಅವರು ಖಂಡಿತವಾಗಿಯೂ ನಿರ್ಲಕ್ಷ್ಯರಾಗಿ ಬಿಡುವರು".
[صحيح] - [رواه مسلم] - [صحيح مسلم - 865]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) - ತಮ್ಮ ಮಿಂಬರ್ ಮೇಲೆ ನಿಂತು - ಯಾವುದೇ ಕಾರಣವಿಲ್ಲದೆ, ಉದಾಸೀನತೆ ಮತ್ತು ಸೋಮಾರಿತನದಿಂದ ಜುಮುಅ ನಮಾಝ್ ಗೆ ಬರದಿರುವವರ ಬಗ್ಗೆ ಎಚ್ಚರಿಸಿದರು. (ಅವರು ಜುಮುಅಗೆ ಬರದಿದ್ದರೆ) ಅಲ್ಲಾಹು ಅವರ ಹೃದಯಗಳ ಮೇಲೆ ಮುದ್ರೆ ಒತ್ತುತ್ತಾನೆ ಮತ್ತು ಅವುಗಳನ್ನು ಮುಚ್ಚಿಬಿಡುತ್ತಾನೆ, ಹಾಗೂ ಅವು ಸತ್ಯವನ್ನು ಅನುಸರಿಸದಂತೆ ಅವುಗಳ ಮೇಲೆ ಒಂದು ತಡೆಯನ್ನು ಮಾಡುತ್ತಾನೆ. ನಂತರ ಅವರು ಒಳಿತಿನ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯರಾಗುತ್ತಾರೆ, ಮತ್ತು ಅವರ ಮನಸ್ಸುಗಳು ವಿಧೇಯತೆಯ ಕಾರ್ಯಗಳಿಂದ ವಿಮುಖವಾಗುತ್ತವೆ ಎಂದು ತಿಳಿಸಿದರು.