عَنْ عَبْدِ اللهِ بْنِ مَسْعُودٍ قَالَ: قَالَ رَسُولُ اللهِ صَلَّى اللَّهُ عَلَيْهِ وَسَلَّمَ:
«تَابِعُوا بَيْنَ الحَجِّ وَالعُمْرَةِ، فَإِنَّهُمَا يَنْفِيَانِ الفَقْرَ وَالذُّنُوبَ كَمَا يَنْفِي الكِيرُ خَبَثَ الحَدِيدِ، وَالذَّهَبِ، وَالفِضَّةِ، وَلَيْسَ لِلْحَجَّةِ الْمَبْرُورَةِ ثَوَابٌ إِلاَّ الجَنَّةُ».
[صحيح] - [رواه الترمذي والنسائي وأحمد] - [سنن الترمذي: 810]
المزيــد ...
ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಹಜ್ ಮತ್ತು ಉಮ್ರಾವನ್ನು ಒಂದರ ನಂತರ ಒಂದರಂತೆ (ನಿರಂತರವಾಗಿ) ಮಾಡುತ್ತಿರಿ. ಏಕೆಂದರೆ, ಅವೆರಡೂ ಕುಲುಮೆಯು ಕಬ್ಬಿಣ, ಚಿನ್ನ ಮತ್ತು ಬೆಳ್ಳಿಯ ಕಲ್ಮಶವನ್ನು (ಕಿಲುಬನ್ನು) ನಿವಾರಿಸುವಂತೆ, ಬಡತನ ಮತ್ತು ಪಾಪಗಳನ್ನು ನಿವಾರಿಸುತ್ತವೆ. 'ಮಬ್ರೂರ್' (ಸ್ವೀಕಾರಾರ್ಹ) ಹಜ್‌ಗೆ ಸ್ವರ್ಗವನ್ನು ಹೊರತುಪಡಿಸಿ ಬೇರೆ ಪ್ರತಿಫಲವಿಲ್ಲ".
[صحيح] - [رواه الترمذي والنسائي وأحمد] - [سنن الترمذي - 810]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಜ್ ಮತ್ತು ಉಮ್ರಾಗಳನ್ನು ಒಂದರ ನಂತರ ಒಂದರಂತೆ ಮಾಡಲು ಮತ್ತು ಸಾಮರ್ಥ್ಯವಿರುವಾಗ ಅವುಗಳನ್ನು ನಿರ್ವಹಿಸುವುದನ್ನು ನಿಲ್ಲಿಸದಿರಲು ಪ್ರೋತ್ಸಾಹಿಸಿದ್ದಾರೆ. ಏಕೆಂದರೆ, ಅವುಗಳನ್ನು ನಿರ್ವಹಿಸುವುದು ಬಡತನ ಮತ್ತು ಪಾಪಗಳನ್ನು ಹಾಗೂ ಹೃದಯದ ಮೇಲೆ ಪಾಪಗಳ ಪರಿಣಾಮವನ್ನು ಹೋಗಲಾಡಿಸಲು ಕಾರಣವಾಗುತ್ತದೆ; ಹೇಗೆ ಬೆಂಕಿಯನ್ನು ಊದುವುದು (ಕುಲುಮೆ) ಕಬ್ಬಿಣದ ಕೊಳೆಯನ್ನು ಮತ್ತು ಅದರಲ್ಲಿ ಬೆರೆತಿರುವ ಇತರ (ಅನಗತ್ಯ) ಲೋಹಗಳನ್ನು ಹೋಗಲಾಡಿಸಲು ಕಾರಣವಾಗುತ್ತದೆಯೋ ಹಾಗೆ.