ಹದೀಸ್‌ಗಳ ಪಟ್ಟಿ

“ಯಾರು ಅಲ್ಲಾಹನಿಗಾಗಿ ಹಜ್ಜ್ ನಿರ್ವಹಿಸುತ್ತಾನೋ, ಮತ್ತು (ಹಜ್ಜ್‌ನ ವೇಳೆಯಲ್ಲಿ) ಅಶ್ಲೀಲ ಕೃತ್ಯಗಳನ್ನು ಮತ್ತು ದುಷ್ಕರ್ಮಗಳನ್ನು ಮಾಡುವುದಿಲ್ಲವೋ, ಅವನು ಅವನ ತಾಯಿ ಅವನಿಗೆ ಜನ್ಮ ನೀಡಿದ ದಿನದಂತೆ (ಪಾಪಮುಕ್ತನಾಗಿ) ಹಿಂದಿರುಗುತ್ತಾನೆ.”
عربي ಆಂಗ್ಲ ಉರ್ದು
ರಮದಾನ್ ತಿಂಗಳು ಬಂದರೆ ಉಮ್ರ ನಿರ್ವಹಿಸು. ಏಕೆಂದರೆ, ಅದರಲ್ಲಿ ನಿರ್ವಹಿಸುವ ಉಮ್ರ ಹಜ್ಜ್‌ಗೆ ಸಮಾನವಾಗಿದೆ
عربي ಆಂಗ್ಲ ಉರ್ದು
ಓ ಅಲ್ಲಾಹನ ಸಂದೇಶವಾಹಕರೇ! ನಾವು ಜಿಹಾದ್ ಅನ್ನು ಅತಿಶ್ರೇಷ್ಠ ಕರ್ಮವೆಂದು ಪರಿಗಣಿಸುತ್ತೇವೆ. ನಾವು ಕೂಡ ಜಿಹಾದ್ ಮಾಡಬಾರದೇ?" ಅವರು ಉತ್ತರಿಸಿದರು: "ಬೇಡ, ಬದಲಿಗೆ ಅತಿಶ್ರೇಷ್ಠ ಜಿಹಾದ್ ಎಂದರೆ ಹಜ್ಜ್ ಮಬ್ರೂರ್ (ಸ್ವೀಕೃತ ಹಜ್ಜ್) ಆಗಿದೆ
عربي ಆಂಗ್ಲ ಉರ್ದು
ಹಜ್ ಮತ್ತು ಉಮ್ರಾವನ್ನು ಒಂದರ ನಂತರ ಒಂದರಂತೆ (ನಿರಂತರವಾಗಿ) ಮಾಡುತ್ತಿರಿ. ಏಕೆಂದರೆ, ಅವೆರಡೂ ಕುಲುಮೆಯು ಕಬ್ಬಿಣ, ಚಿನ್ನ ಮತ್ತು ಬೆಳ್ಳಿಯ ಕಲ್ಮಶವನ್ನು (ಕಿಲುಬನ್ನು) ನಿವಾರಿಸುವಂತೆ, ಬಡತನ ಮತ್ತು ಪಾಪಗಳನ್ನು ನಿವಾರಿಸುತ್ತವೆ. 'ಮಬ್ರೂರ್' (ಸ್ವೀಕಾರಾರ್ಹ) ಹಜ್‌ಗೆ ಸ್ವರ್ಗವನ್ನು ಹೊರತುಪಡಿಸಿ ಬೇರೆ ಪ್ರತಿಫಲವಿಲ್ಲ
عربي ಆಂಗ್ಲ ಇಂಡೋನೇಷಿಯನ್