+ -

عَنِ ابْنِ عَبَّاسٍ رضي الله عنهما قَالَ:
قَالَ رَسُولُ اللهِ صَلَّى اللهُ عَلَيْهِ وَسَلَّمَ لِامْرَأَةٍ مِنَ الْأَنْصَارِ سَمَّاهَا ابْنُ عَبَّاسٍ فَنَسِيتُ اسْمَهَا: «مَا مَنَعَكِ أَنْ تَحُجِّي مَعَنَا؟» قَالَتْ: لَمْ يَكُنْ لَنَا إِلَّا نَاضِحَانِ فَحَجَّ أَبُو وَلَدِهَا وَابْنُهَا عَلَى نَاضِحٍ وَتَرَكَ لَنَا نَاضِحًا نَنْضِحُ عَلَيْهِ، قَالَ: «فَإِذَا جَاءَ رَمَضَانُ فَاعْتَمِرِي، فَإِنَّ عُمْرَةً فِيهِ تَعْدِلُ حَجَّةً».

[صحيح] - [متفق عليه] - [صحيح مسلم: 1256]
المزيــد ...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅನ್ಸಾರ್‌ಗಳಲ್ಲಿ ಸೇರಿದ ಒಬ್ಬ ಮಹಿಳೆಯೊಂದಿಗೆ—ಇಬ್ನ್ ಅಬ್ಬಾಸ್ ಆಕೆಯ ಹೆಸರು ಹೇಳಿದ್ದರು ಆದರೆ ನಾನು ಅದನ್ನು ಮರೆತುಬಿಟ್ಟೆ— ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಮ್ಮೊಂದಿಗೆ ಹಜ್ಜ್ ನಿರ್ವಹಿಸದಂತೆ ನಿನ್ನನ್ನು ತಡೆದದ್ದೇನು?" ಅವಳು ಉತ್ತರಿಸಿದಳು: "ನಮ್ಮಲ್ಲಿರುವುದು ಎರಡು ಒಂಟೆಗಳು ಮಾತ್ರ. ಒಂದು ಒಂಟೆಯ ಮೇಲೆ ಅವಳ ಮಗನ ತಂದೆ ಮತ್ತು ಅವಳ ಮಗ ಹಜ್ಜ್ ನಿರ್ವಹಿಸಲು ಹೋದರು ಮತ್ತು ಇನ್ನೊಂದು ಒಂಟೆಯನ್ನು ಅವರು ನೀರು ಸಾಗಿಸಲು ನಮ್ಮಲ್ಲಿ ಬಿಟ್ಟರು." ಅವರು (ಪ್ರವಾದಿ) ಹೇಳಿದರು: "ರಮದಾನ್ ತಿಂಗಳು ಬಂದರೆ ಉಮ್ರ ನಿರ್ವಹಿಸು. ಏಕೆಂದರೆ, ಅದರಲ್ಲಿ ನಿರ್ವಹಿಸುವ ಉಮ್ರ ಹಜ್ಜ್‌ಗೆ ಸಮಾನವಾಗಿದೆ."

[صحيح] - [متفق عليه] - [صحيح مسلم - 1256]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿದಾಯದ ಹಜ್ಜ್ ನಿರ್ವಹಿಸಿ ಮರಳಿ ಬಂದಾಗ, ಹಜ್ಜ್ ನಿರ್ವಹಿಸಲು ಬಂದಿರದ ಅನ್ಸಾರ್ ಮಹಿಳೆಯೊಡನೆ ಕೇಳಿದರು: "ನಮ್ಮೊಂದಿಗೆ ಹಜ್ಜ್ ಮಾಡದಿರಲು ನಿನಗೆ ತಡೆಯಾದುದೇನು?"
ಆಗ ಅವಳು ಅದರ ಕಾರಣವನ್ನು ತಿಳಿಸುತ್ತಾ, ಅವರಲ್ಲಿ ಎರಡು ಒಂಟೆಗಳು ಮಾತ್ರವಿದ್ದು, ಒಂದು ಒಂಟೆಯಲ್ಲಿ ಅವಳ ಗಂಡ ಮತ್ತು ಮಗ ಹಜ್ಜ್‌ಗೆ ತೆರಳಿದರು ಮತ್ತು ಇನ್ನೊಂದು ಒಂಟೆಯನ್ನು ಬಾವಿಯಿಂದ ನೀರು ಸಾಗಿಸಲು ಬಿಟ್ಟು ಹೋದರು ಎಂದು ಹೇಳಿದಳು.
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ರಮದಾನ್ ತಿಂಗಳಲ್ಲಿ ಉಮ್ರ ನಿರ್ವಹಿಸಿದರೆ ಅದರ ಪ್ರತಿಫಲವು ಹಜ್ಜ್ ನಿರ್ವಹಿಸಿದ ಪ್ರತಿಫಲಕ್ಕೆ ಸಮಾನವಾಗಿದೆ ಎಂದು ಆಕೆಗೆ ತಿಳಿಸಿದರು.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الدرية الصربية الصومالية الكينياروندا الرومانية المالاجاشية الأورومو الولوف
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ರಮದಾನ್ ತಿಂಗಳಲ್ಲಿ ಉಮ್ರ ನಿರ್ವಹಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
  2. ರಮದಾನ್ ತಿಂಗಳಲ್ಲಿ ನಿರ್ವಹಿಸುವ ಉಮ್ರ ಪ್ರತಿಫಲದಲ್ಲಿ ಹಜ್ಜ್‌ಗೆ ಸಮಾನವಾಗುತ್ತದೆಯೇ ವಿನಾ ಹಜ್ಜ್‌ನ ಕಡ್ಡಾಯತೆಗೆ ವಿನಾಯಿತಿ ನೀಡುವುದಿಲ್ಲ.
  3. ಸಮಯದ ಶ್ರೇಷ್ಠತೆಯು ಹೆಚ್ಚಾಗುವುದಕ್ಕೆ ಅನುಗುಣವಾಗಿ ಕರ್ಮಗಳ ಪ್ರತಿಫಲವು ಹೆಚ್ಚಾಗುತ್ತದೆ. ರಮದಾನ್ ತಿಂಗಳಲ್ಲಿ ನಿರ್ವಹಿಸುವ ಕರ್ಮಗಳು ಇದಕ್ಕೊಂದು ಉದಾಹರಣೆಯಾಗಿದೆ.