عَنْ أُمِّ عَطِيَّةَ رَضيَ اللهُ عنها قَالَتْ:
تُوُفِّيَتْ إِحْدَى بَنَاتِ النَّبِيِّ صَلَّى اللهُ عَلَيْهِ وَسَلَّمَ، فَخَرَجَ النَّبِيُّ صَلَّى اللهُ عَلَيْهِ وَسَلَّمَ فَقَالَ: «اغْسِلْنَهَا ثَلاَثًا، أَوْ خَمْسًا أَوْ أَكْثَرَ مِنْ ذَلِكَ، إِنْ رَأَيْتُنَّ بِمَاءٍ وَسِدْرٍ، وَاجْعَلْنَ فِي الآخِرَةِ كَافُورًا -أَوْ شَيْئًا مِنْ كَافُورٍ-، فَإِذَا فَرَغْتُنَّ فَآذِنَّنِي»، قَالَتْ: فَلَمَّا فَرَغْنَا آذَنَّاهُ، فَأَلْقَى إِلَيْنَا حِقْوَهُ، فَقَالَ: «أَشْعِرْنَهَا إِيَّاهُ»، وَقَالَتْ: وَجَعَلْنَا رَأْسَهَا ثَلاَثَةَ قُرُونٍ.
[صحيح] - [متفق عليه] - [صحيح البخاري: 1258]
المزيــد ...
ಉಮ್ಮ್ ಅತಿಯ್ಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುತ್ರಿಯರಲ್ಲಿ ಒಬ್ಬರು (ಝೈನಬ್) ಮರಣ ಹೊಂದಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ನಮ್ಮ ಬಳಿಗೆ) ಬಂದು ಹೇಳಿದರು: 'ಅವಳನ್ನು ಮೂರು ಬಾರಿ, ಅಥವಾ ಐದು ಬಾರಿ, ಅಥವಾ ನಿಮಗೇನಾದರೂ (ಅಗತ್ಯವೆಂದು) ಕಂಡರೆ ಅದಕ್ಕಿಂತ ಹೆಚ್ಚು ಬಾರಿ, ನೀರು ಮತ್ತು 'ಸಿದ್ರ್' (ಬೋರೆ ಮರದ ಎಲೆ) ನಿಂದ ಸ್ನಾನ ಮಾಡಿಸಿರಿ. ಕೊನೆಯದರಲ್ಲಿ (ಕೊನೆಯ ಬಾರಿ ತೊಳೆಯುವಾಗ) ಕರ್ಪೂರವನ್ನು — ಅಥವಾ ಸ್ವಲ್ಪ ಕರ್ಪೂರವನ್ನು — ಹಾಕಿರಿ. ನೀವು (ಸ್ನಾನ ಮಾಡಿಸಿ) ಮುಗಿಸಿದಾಗ ನನಗೆ ತಿಳಿಸಿರಿ'. ಅವರು (ಉಮ್ಮ್ ಅತಿಯ್ಯಾ) ಹೇಳುತ್ತಾರೆ: ನಾವು (ಸ್ನಾನ) ಮುಗಿಸಿದಾಗ ಅವರಿಗೆ ತಿಳಿಸಿದೆವು. ಆಗ ಅವರು ತಮ್ಮ 'ಹಖ್ವ' (ಸೊಂಟದ ವಸ್ತ್ರ/ಲುಂಗಿ) ವನ್ನು ನಮಗೆ ನೀಡಿ ಹೇಳಿದರು: 'ಇದನ್ನು ಅವಳ ದೇಹಕ್ಕೆ ತಗಲುವಂತೆ ಧರಿಸಿಬಿಡಿ'. ಅವರು (ಉಮ್ಮ್ ಅತಿಯ್ಯಾ) ಹೇಳುತ್ತಾರೆ: ನಾವು ಅವಳ ತಲೆಯನ್ನು (ಕೂದಲನ್ನು) ಮೂರು ಜಡೆಗಳನ್ನಾಗಿ (ಮಾಡಿ ಹಿಂದಕ್ಕೆ) ಹಾಕಿದೆವು".
[صحيح] - [متفق عليه] - [صحيح البخاري - 1258]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುತ್ರಿ ಝೈನಬ್ ಮರಣ ಹೊಂದಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವಳನ್ನು ಸ್ನಾನ ಮಾಡಿಸಲಿರುವ ಮಹಿಳೆಯರ ಬಳಿಗೆ ಬಂದು ಹೇಳಿದರು: ಅವಳನ್ನು ನೀರು ಮತ್ತು ಸಿದ್ರ್‌ನಿಂದ ಬೆಸ ಸಂಖ್ಯೆಯಲ್ಲಿ ಮೂರು ಬಾರಿ, ಅಥವಾ ಐದು ಬಾರಿ, ಅಥವಾ ಅಗತ್ಯವಿದ್ದರೆ ಅದಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡಿಸಿರಿ. ಕೊನೆಯ ಬಾರಿ ತೊಳೆಯುವಾಗ ಸ್ವಲ್ಪ ಕರ್ಪೂರವನ್ನು ಹಾಕಿರಿ. ನೀವು (ಸ್ನಾನ) ಮುಗಿಸಿದಾಗ ನನಗೆ ತಿಳಿಸಿರಿ. ಅವರು ಅವಳನ್ನು ಸ್ನಾನ ಮಾಡಿಸಿ ಮುಗಿಸಿದಾಗ ಅವರಿಗೆ ತಿಳಿಸಿದರು. ಆಗ ಅವರು ಸ್ನಾನ ಮಾಡಿಸಿದವರಿಗೆ ತಮ್ಮ 'ಇಝಾರ್' (ಧೋತಿ) ಅನ್ನು ನೀಡಿ ಹೇಳಿದರು: ಇದನ್ನು ಅವಳಿಗೆ ಸುತ್ತಿರಿ ಮತ್ತು ಇದು ಅವಳ ದೇಹಕ್ಕೆ ತಗಲುವ (ಮೊದಲ) ವಸ್ತ್ರವನ್ನಾಗಿ ಮಾಡಿರಿ. ನಂತರ ಅವಳ ತಲೆಯ ಕೂದಲನ್ನು ಮೂರು ಜಡೆಗಳನ್ನಾಗಿ ಮಾಡಲಾಯಿತು.