عن سعد بن عبادة رضي الله عنه أنه قال:
يَا رَسُولَ اللَّهِ، إِنَّ أُمَّ سَعْدٍ مَاتَتْ، فَأَيُّ الصَّدَقَةِ أَفْضَلُ؟، قَالَ: «الْمَاءُ»، قَالَ: فَحَفَرَ بِئْرًا، وَقَالَ: هَذِهِ لِأُمِّ سَعْدٍ.
[حسن بمجموع طرقه] - [رواه أبو داود والنسائي وابن ماجه] - [سنن أبي داود: 1681]
المزيــد ...
ಸಅದ್ ಬಿನ್ ಉಬಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಓ ಅಲ್ಲಾಹನ ಸಂದೇಶವಾಹಕರೇ! ಉಮ್ಮು ಸಅದ್ ನಿಧನರಾದರು. ಅವರ ಹೆಸರಲ್ಲಿ ಯಾವ ದಾನಧರ್ಮವು ಶ್ರೇಷ್ಠವಾಗಿದೆ?" ಅವರು ಉತ್ತರಿಸಿದರು: "ನೀರು." ಆಗ ಅವರು ಒಂದು ಬಾವಿ ತೋಡಿದರು. ಮತ್ತು ಹೇಳಿದರು: "ಇದು ಉಮ್ಮು ಸಅದ್‌ರಿಗೆ."
- - [سنن أبي داود - 1681]
ಸಅದ್ ಬಿನ್ ಉಬಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ತಾಯಿ (ಉಮ್ಮು ಸಅದ್) ನಿಧನರಾದರು. ಆಗ ಅವರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತನ್ನ ತಾಯಿ ಹೆಸರಲ್ಲಿ ಯಾವ ದಾನ ಮಾಡುವುದು ಶ್ರೇಷ್ಠವೆಂದು ಕೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೀರು ದಾನ ಮಾಡುವುದು ಶ್ರೇಷ್ಠವೆಂದು ತಿಳಿಸಿದರು. ಅದರಂತೆ ಅವರು ಒಂದು ಬಾವಿಯನ್ನು ತೋಡಿ ಅದನ್ನು ತನ್ನ ತಾಯಿಯ ಹೆಸರಲ್ಲಿ ದಾನ ಮಾಡಿದರು.