عن أبي هريرة رضي الله عنه أن رسول الله صلى الله عليه وسلم قال:
«قَالَ اللهُ: أَنْفِقْ يَا ابْنَ آدَمَ أُنْفِقْ عَلَيْكَ».
[صحيح] - [متفق عليه] - [صحيح البخاري: 5352]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
ಅಲ್ಲಾಹು ಹೇಳಿದನು: "ಓ ಆದಮನ ಮಗನೇ! ಖರ್ಚು ಮಾಡು. ನಾನು ನಿನಗಾಗಿ ಖರ್ಚು ಮಾಡುತ್ತೇನೆ."
[صحيح] - [متفق عليه] - [صحيح البخاري - 5352]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಓ ಆದಮನ ಮಗನೇ! ಕಡ್ಡಾಯ ಮತ್ತು ಅಪೇಕ್ಷಣೀಯವಾದ ಎಲ್ಲಾ ಖರ್ಚುಗಳನ್ನು ಮಾಡು. ನೀನು ಖರ್ಚು ಮಾಡಿದರೆ ನಾನು ನಿನ್ನ ಜೀವನೋಪಾಯವನ್ನು ವಿಶಾಲಗೊಳಿಸುತ್ತೇನೆ. ನೀನು ಖರ್ಚು ಮಾಡಿದ್ದಕ್ಕೆ ಬದಲಿಯನ್ನು ನೀಡುತ್ತೇನೆ ಮತ್ತು ನಿನ್ನ ಆಸ್ತಿಯಲ್ಲಿ ಸಮೃದ್ಧಿಯನ್ನು ಹರಿಸುತ್ತೇನೆ.