عَنْ عَبْدِ اللَّهِ بْنِ عَمْرٍو رَضِيَ اللَّهُ عَنْهُمَا:
أَنَّ رَجُلًا سَأَلَ النَّبِيَّ صَلَّى اللهُ عَلَيْهِ وَسَلَّمَ: أَيُّ الإِسْلاَمِ خَيْرٌ؟ قَالَ: «تُطْعِمُ الطَّعَامَ، وَتَقْرَأُ السَّلاَمَ عَلَى مَنْ عَرَفْتَ وَمَنْ لَمْ تَعْرِفْ».
[صحيح] - [متفق عليه] - [صحيح البخاري: 12]
المزيــد ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಒಬ್ಬ ವ್ಯಕ್ತಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು:"ಇಸ್ಲಾಂ ಧರ್ಮದಲ್ಲಿ ಅತಿಶ್ರೇಷ್ಠವಾದುದು ಯಾವುದು?" ಅವರು ಉತ್ತರಿಸಿದರು: "ಜನರಿಗೆ ಆಹಾರ ನೀಡುವುದು ಮತ್ತು ಪರಿಚಯವಿರುವವರಿಗೂ, ಪರಿಚಯವಿಲ್ಲದವರಿಗೂ ಸಲಾಂ ಹೇಳುವುದು."
[صحيح] - [متفق عليه] - [صحيح البخاري - 12]
ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು: ಇಸ್ಲಾಂ ಧರ್ಮದ ಅತಿಶ್ರೇಷ್ಠ ಲಕ್ಷಣಗಳು ಯಾವುವು? ಆಗ ಅವರು ಎರಡು ಲಕ್ಷಣಗಳನ್ನು ತಿಳಿಸಿದರು:
ಒಂದು: ಬಡವರಿಗೆ ಹೆಚ್ಚು ಹೆಚ್ಚಾಗಿ ಆಹಾರ ನೀಡುವುದು. ದಾನಧರ್ಮ, ಉಡುಗೊರೆ, ಆತಿಥ್ಯ, ಔತಣ ಮುಂತಾದವುಗಳು ಇದರಲ್ಲಿ ಒಳಪಡುತ್ತವೆ. ಬರಗಾಲ ಮತ್ತು ಬೆಲೆಯೇರಿಕೆಯ ಸಂದರ್ಭಗಳಲ್ಲಿ ಈ ಶ್ರೇಷ್ಠತೆಯು ಇನ್ನಷ್ಟು ಪ್ರಬಲವಾಗುತ್ತದೆ.
ಎರಡು: ಎಲ್ಲಾ ಮುಸಲ್ಮಾನರಿಗೂ, ಅವರ ಪರಿಚಯವಿದ್ದರೂ ಇಲ್ಲದಿದ್ದರೂ ಸಲಾಂ ಹೇಳುವುದು.