عن عبد الله بن عمرو رضي الله عنهما قال:
لَمْ يَكُنِ النَّبِيُّ صَلَّى اللهُ عَلَيْهِ وَسَلَّمَ فَاحِشًا وَلَا مُتَفَحِّشًا، وَكَانَ يَقُولُ: «إِنَّ مِنْ خِيَارِكُمْ أَحْسَنَكُمْ أَخْلَاقًا».
[صحيح] - [متفق عليه] - [صحيح البخاري: 3559]
المزيــد ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಶ್ಲೀಲವಾಗಿರಲಿಲ್ಲ ಮತ್ತು ಅಶ್ಲೀಲ ಭಾಷೆಯನ್ನು ಬಳಸುತ್ತಿರಲಿಲ್ಲ. ಅವರು ಹೇಳುತ್ತಿದ್ದರು: "ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯುತ್ತಮರು ಉತ್ತಮ ನಡವಳಿಕೆಯನ್ನು ಹೊಂದಿರುವವರು."
[صحيح] - [متفق عليه] - [صحيح البخاري - 3559]
ಅಸಭ್ಯವಾಗಿ ಮಾತನಾಡುವುದು ಅಥವಾ ಅಸಭ್ಯವಾಗಿ ವರ್ತಿಸುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯಾಗಿರಲಿಲ್ಲ. ಅವರು ಅಸಭ್ಯವನ್ನು ಬಯಸುತ್ತಿರಲಿಲ್ಲ ಮತ್ತು ಉದ್ದೇಶಪೂರ್ವಕ ಅಸಭ್ಯವಾಗಿ ವರ್ತಿಸುತ್ತಿರಲಿಲ್ಲ. ಬದಲಿಗೆ, ಅವರು ಅನುಕರಣಾಯೋಗ್ಯವಾದ ಅತ್ಯುತ್ತಮ ಚಾರಿತ್ರ್ಯವನ್ನು ಹೊಂದಿದ್ದರು.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದರು: "ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮಲ್ಲಿ ಅತ್ಯುತ್ತಮರು ಉತ್ತಮ ನಡವಳಿಕೆಯನ್ನು ಹೊಂದಿರುವವರು." ಉತ್ತಮ ನಡವಳಿಕೆ ಎಂದರೆ ಜನರಿಗೆ ಒಳಿತು ಮಾಡುವುದು, ಮಂದಹಾಸ ಬೀರುವುದು, ಜನರಿಗೆ ತೊಂದರೆ ಕೊಡದಿರುವುದು, ಜನರಿಂದ ಉಂಟಾಗುವ ತೊಂದರೆಗಳನ್ನು ಸಹಿಸುವುದು ಮತ್ತು ಜನರೊಡನೆ ಸುಂದರವಾಗಿ ಬೆರೆಯುವುದು.