عَنِ ابْنِ عَبَّاسٍ رَضيَ اللهُ عنهما قَالَ:
قَالَ رَسُولُ اللهِ صَلَّى اللهُ عَلَيْهِ وَسَلَّمَ لِلْأَشَجِّ أَشَجِّ عَبْدِ الْقَيْسِ: «إِنَّ فِيكَ خَصْلَتَيْنِ يُحِبُّهُمَا اللهُ: الْحِلْمُ، وَالْأَنَاةُ».
[صحيح] - [رواه مسلم] - [صحيح مسلم: 17]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬ್ದುಲ್ ಖೈಸ್ ಗೋತ್ರದ ಅಶಜ್ಜ್ ರಿಗೆ ಹೇಳಿದರು: "ಖಂಡಿತವಾಗಿಯೂ ನಿನ್ನಲ್ಲಿ ಅಲ್ಲಾಹು ಪ್ರೀತಿಸುವ ಎರಡು ಗುಣಲಕ್ಷಣಗಳಿವೆ: 'ಹಿಲ್ಮ್' (ಸಹನಶೀಲತೆ), ಮತ್ತು 'ಅನಾತ್' (ತಾಳ್ಮೆ ಮತ್ತು ನಿಧಾನವಾಗಿ ಯೋಚಿಸಿ ಕಾರ್ಯನಿರ್ವಹಿಸುವುದು)".
[صحيح] - [رواه مسلم] - [صحيح مسلم - 17]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬ್ದುಲ್ ಖೈಸ್ ಗೋತ್ರದ ನಾಯಕ, ಅಲ್-ಮುಂದಿರ್ ಇಬ್ನ್ ಆಇದ್ ಅಶಜ್ಜ್ ರಿಗೆ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಖಂಡಿತವಾಗಿಯೂ ನಿನ್ನಲ್ಲಿ ಅಲ್ಲಾಹು ಪ್ರೀತಿಸುವ ಎರಡು ಗುಣಲಕ್ಷಣಗಳಿವೆ, ಅವು: ಬುದ್ಧಿವಂತಿಕೆ ಮತ್ತು ದೃಢತೆ, ಗಾಂಭೀರ್ಯ ಹಾಗೂ ಆತುರಪಡದಿರುವುದು.