عن أبي مسعود رضي الله عنه عن النبي صلى الله عليه وسلم قال:
«إِذَا أَنْفَقَ الرَّجُلُ عَلَى أَهْلِهِ يَحْتَسِبُهَا فَهُوَ لَهُ صَدَقَةٌ».
[صحيح] - [متفق عليه] - [صحيح البخاري: 55]
المزيــد ...
ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಬ್ಬ ವ್ಯಕ್ತಿ ಅಲ್ಲಾಹನಿಂದ ಪ್ರತಿಫಲವನ್ನು ಅಪೇಕ್ಷಿಸುತ್ತಾ ತನ್ನ ಕುಟುಂಬಕ್ಕೆ ಖರ್ಚು ಮಾಡುವುದೆಲ್ಲವೂ ದಾನವಾಗಿವೆ."
[صحيح] - [متفق عليه] - [صحيح البخاري - 55]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ತನ್ನ ಪೋಷಣೆಯಲ್ಲಿರುವ ಪತ್ನಿ, ತಂದೆ-ತಾಯಿ, ಮಕ್ಕಳು ಮುಂತಾದವರಿಗೆ ಹಣವನ್ನು ಖರ್ಚು ಮಾಡುವಾಗ, ಅದರ ಮೂಲಕ ಅಲ್ಲಾಹನ ಸಾಮೀಪ್ಯ ಮತ್ತು ಅವನ ಪ್ರತಿಫಲವನ್ನು ಬಯಸುವುದಾದರೆ, ಅವನಿಗೆ ಆ ಹಣವನ್ನು ದಾನ ಮಾಡಿದ ಪ್ರತಿಫಲವಿದೆ.