عَنْ عَائِشَةَ أُمِّ المؤْمنينَ رَضيَ اللهُ عنها قَالَت:
دَخَلَتْ هِنْدٌ بِنْتُ عُتْبَةَ امْرَأَةُ أَبِي سُفْيَانَ عَلَى رَسُولِ اللهِ صَلَّى اللهُ عَلَيْهِ وَسَلَّمَ، فَقَالَتْ: يَا رَسُولَ اللهِ، إِنَّ أَبَا سُفْيَانَ رَجُلٌ شَحِيحٌ، لَا يُعْطِينِي مِنَ النَّفَقَةِ مَا يَكْفِينِي وَيَكْفِي بَنِيَّ إِلَّا مَا أَخَذْتُ مِنْ مَالِهِ بِغَيْرِ عِلْمِهِ، فَهَلْ عَلَيَّ فِي ذَلِكَ مِنْ جُنَاحٍ؟ فَقَالَ رَسُولُ اللهِ صَلَّى اللهُ عَلَيْهِ وَسَلَّمَ: «خُذِي مِنْ مَالِهِ بِالْمَعْرُوفِ مَا يَكْفِيكِ وَيَكْفِي بَنِيكِ».
[صحيح] - [متفق عليه] - [صحيح مسلم: 1714]
المزيــد ...
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಬೂ ಸುಫ್ಯಾನ್‌ರ ಪತ್ನಿ ಹಿಂದ್ ಬಿಂತ್ ಉತ್ಬಾ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಅವರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಖಂಡಿತವಾಗಿಯೂ ಅಬೂ ಸುಫ್ಯಾನ್ ಒಬ್ಬ ಜಿಪುಣ. ಅವನು ನನಗೆ ಮತ್ತು ನನ್ನ ಮಕ್ಕಳಿಗೆ ಸಾಕಾಗುವಷ್ಟು ಖರ್ಚು ವೆಚ್ಚವನ್ನು ನೀಡುವುದಿಲ್ಲ. ಆದರೆ ನಾನು ಅವನಿಗೆ ತಿಳಿಯದಂತೆ ಅವನ ಸಂಪತ್ತಿನಿಂದ ತೆಗೆದುಕೊಳ್ಳುತ್ತೇನೆ. ಹಾಗೆ ಮಾಡುವುದರಲ್ಲಿ ನನ್ನ ಮೇಲೆ ಪಾಪವಿದೆಯೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನ ಸಂಪತ್ತಿನಿಂದ ನ್ಯಾಯಯುತವಾದ ರೀತಿಯಲ್ಲಿ ನಿನಗೆ ಮತ್ತು ನಿನ್ನ ಮಕ್ಕಳಿಗೆ ಸಾಕಾಗುವಷ್ಟನ್ನು ತೆಗೆದುಕೋ".
[صحيح] - [متفق عليه] - [صحيح مسلم - 1714]
ಹಿಂದ್ ಬಿಂತ್ ಉತ್ಬಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತನ್ನ ಪತಿ ಅಬೂ ಸುಫ್ಯಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರ ಬಗ್ಗೆ ಫತ್ವಾ (ಧಾರ್ಮಿಕ ತೀರ್ಪು) ಕೇಳಿದರು. ಅವರು (ಅಬೂ ಸುಫ್ಯಾನ್) ಜಿಪುಣ ಮತ್ತು ತನ್ನ ಸಂಪತ್ತಿನ ಬಗ್ಗೆ ಅತಿಯಾದ ದುರಾಸೆ ಉಳ್ಳವರಾಗಿದ್ದಾರೆ. ಅವರು ತನಗೆ ಮತ್ತು ತನ್ನ ಮಕ್ಕಳಿಗೆ ಸಾಕಾಗುವಷ್ಟು ಖರ್ಚುವೆಚ್ಚವನ್ನು ನೀಡುವುದಿಲ್ಲ. ಆದರೆ ತಾನು ಅವರಿಗೆ ತಿಳಿಯದಂತೆ ರಹಸ್ಯವಾಗಿ ಅವರ ಸಂಪತ್ತಿನಿಂದ ತೆಗೆದುಕೊಂಡರೆ ಮಾತ್ರ ಸಾಕಾಗುತ್ತದೆ. ಹಾಗೆ ಮಾಡುವುದರಲ್ಲಿ ತನಗೆ ಪಾಪವಿದೆಯೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಿನಗಾಗಿ ಮತ್ತು ನಿನ್ನ ಮಕ್ಕಳಿಗಾಗಿ ಅವನ ಸಂಪತ್ತಿನಿಂದ, ಸಾಮಾನ್ಯವಾಗಿ ಸಾಕು ಎಂದು ತಿಳಿಯಲಾದಷ್ಟು ಪ್ರಮಾಣವನ್ನು, ಅವನಿಗೆ ತಿಳಿಯದೆಯಾದರೂ ಸಹ, ತೆಗೆದುಕೋ.