عَنْ سَهْلِ بْنِ سَعْدٍ السَّاعِدِيِّ رَضِيَ اللَّهُ عَنْهُ أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«رِبَاطُ يَوْمٍ فِي سَبِيلِ اللَّهِ خَيْرٌ مِنَ الدُّنْيَا وَمَا عَلَيْهَا، وَمَوْضِعُ سَوْطِ أَحَدِكُمْ مِنَ الجَنَّةِ خَيْرٌ مِنَ الدُّنْيَا وَمَا عَلَيْهَا، وَالرَّوْحَةُ يَرُوحُهَا العَبْدُ فِي سَبِيلِ اللَّهِ أَوِ الغَدْوَةُ خَيْرٌ مِنَ الدُّنْيَا وَمَا عَلَيْهَا».
[صحيح] - [متفق عليه] - [صحيح البخاري: 2892]
المزيــد ...
ಸಹ್ಲ್ ಬಿನ್ ಸಅದ್ ಸಾಇದೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಲ್ಲಾಹನ ಮಾರ್ಗದಲ್ಲಿ ಒಂದು ದಿನ 'ರಿಬಾತ್' ಮಾಡುವುದು (ಗಡಿಯಲ್ಲಿ ಕಾವಲು ಕಾಯುವುದು) ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ. ಸ್ವರ್ಗದಲ್ಲಿ ನಿಮ್ಮಲ್ಲೊಬ್ಬನಿಗೆ ದೊರೆಯುವ ಚಾಟಿಯಷ್ಟು (ಅಥವಾ ಚಾಟಿ ಇಡುವಷ್ಟು) ಸ್ಥಳವು ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ. ಅಲ್ಲಾಹನ ಮಾರ್ಗದಲ್ಲಿ ದಾಸನು ಮಾಡುವ ಒಂದು ಸಂಜೆಯ ನಡೆಯುವಿಕೆ (ರೌಹ) ಅಥವಾ ಒಂದು ಮುಂಜಾನೆಯ ನಡೆಯುವಿಕೆ (ಗದ್ವಾ) ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ".
[صحيح] - [متفق عليه] - [صحيح البخاري - 2892]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಮುಸ್ಲಿಮರು ಮತ್ತು ಸತ್ಯನಿಷೇಧಿಗಳ ನಡುವಿನ ಸ್ಥಳದಲ್ಲಿ, ಮುಸ್ಲಿಮರನ್ನು ಅವರಿಂದ ರಕ್ಷಿಸಲು, ಅಲ್ಲಾಹನಿಗಾಗಿ ನಿಷ್ಕಳಂಕತೆಯೊಂದಿಗೆ ಒಂದು ದಿನದ ಮಟ್ಟಿಗೆ ಕಾವಲು ಕಾಯುವುದು, ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ. ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡಲು ಬಳಸುವ ಚಾಟಿಯಷ್ಟು ಸ್ಥಳವು ಸ್ವರ್ಗದಲ್ಲಿ ದೊರೆಯುವುದು, ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ. ಅಲ್ಲಾಹನ ಮಾರ್ಗದಲ್ಲಿ ದಿನದ ಆರಂಭದಿಂದ ಝುಹ್ರ್ ಸಮಯದ ಆರಂಭದವರೆಗಿನ (ಗದ್ವಾ) ಅಥವಾ ಝುಹ್ರ್ ಸಮಯದಿಂದ ರಾತ್ರಿಯವರೆಗಿನ (ರೌಹ) ಸಮಯದಲ್ಲಿ ಒಮ್ಮೆ ನಡೆಯುವುದರ ಪ್ರತಿಫಲ ಮತ್ತು ಪುಣ್ಯವು, ಇಹಲೋಕ ಮತ್ತು ಅದರಲ್ಲಿರುವ ಎಲ್ಲದಕ್ಕಿಂತ ಉತ್ತಮವಾಗಿದೆ.