عَنْ أَبِي هُرَيْرَةَ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«إِنَّ اللهَ إِذَا أَحَبَّ عَبْدًا دَعَا جِبْرِيلَ فَقَالَ: إِنِّي أُحِبُّ فُلَانًا فَأَحِبَّهُ، قَالَ: فَيُحِبُّهُ جِبْرِيلُ، ثُمَّ يُنَادِي فِي السَّمَاءِ فَيَقُولُ: إِنَّ اللهَ يُحِبُّ فُلَانًا فَأَحِبُّوهُ، فَيُحِبُّهُ أَهْلُ السَّمَاءِ، قَالَ ثُمَّ يُوضَعُ لَهُ الْقَبُولُ فِي الْأَرْضِ، وَإِذَا أَبْغَضَ عَبْدًا دَعَا جِبْرِيلَ فَيَقُولُ: إِنِّي أُبْغِضُ فُلَانًا فَأَبْغِضْهُ، قَالَ فَيُبْغِضُهُ جِبْرِيلُ، ثُمَّ يُنَادِي فِي أَهْلِ السَّمَاءِ إِنَّ اللهَ يُبْغِضُ فُلَانًا فَأَبْغِضُوهُ، قَالَ: فَيُبْغِضُونَهُ، ثُمَّ تُوضَعُ لَهُ الْبَغْضَاءُ فِي الْأَرْضِ».
[صحيح] - [صحيح مسلم] - [صحيح مسلم: 2637]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಅಲ್ಲಾಹು ಒಬ್ಬ ದಾಸನನ್ನು ಪ್ರೀತಿಸಿದಾಗ, ಅವನು ಜಿಬ್ರೀಲ್ ರನ್ನು ಕರೆದು ಹೇಳುತ್ತಾನೆ: 'ಖಂಡಿತವಾಗಿಯೂ ನಾನು ಇಂಥವನನ್ನು ಪ್ರೀತಿಸುತ್ತೇನೆ, ಆದ್ದರಿಂದ ನೀನೂ ಅವನನ್ನು ಪ್ರೀತಿಸು'. ಅವರು (ಪ್ರವಾದಿ) ಹೇಳಿದರು: ಆಗ ಜಿಬ್ರೀಲ್ ಅವನನ್ನು ಪ್ರೀತಿಸುತ್ತಾರೆ. ನಂತರ ಅವರು (ಜಿಬ್ರೀಲ್) ಆಕಾಶದಲ್ಲಿ ಕೂಗಿ ಹೇಳುತ್ತಾರೆ: 'ಖಂಡಿತವಾಗಿಯೂ ಅಲ್ಲಾಹು ಇಂಥವನನ್ನು ಪ್ರೀತಿಸುತ್ತಾನೆ, ಆದ್ದರಿಂದ ನೀವೂ ಅವನನ್ನು ಪ್ರೀತಿಸಿರಿ'. ಆಗ ಆಕಾಶದ ನಿವಾಸಿಗಳು (ದೇವದೂತರುಗಳು) ಅವನನ್ನು ಪ್ರೀತಿಸುತ್ತಾರೆ. ಅವರು (ಪ್ರವಾದಿ) ಹೇಳಿದರು: ನಂತರ ಭೂಮಿಯಲ್ಲಿ ಅವನಿಗಾಗಿ ಸ್ವೀಕಾರವನ್ನು ಇರಿಸಲಾಗುತ್ತದೆ. ಅವನು (ಅಲ್ಲಾಹು) ಒಬ್ಬ ದಾಸನನ್ನು ದ್ವೇಷಿಸಿದಾಗ, ಅವನು ಜಿಬ್ರೀಲ್ ಅವರನ್ನು ಕರೆದು ಹೇಳುತ್ತಾನೆ: 'ಖಂಡಿತವಾಗಿಯೂ ನಾನು ಇಂಥವನನ್ನು ದ್ವೇಷಿಸುತ್ತೇನೆ, ಆದ್ದರಿಂದ ನೀನೂ ಅವನನ್ನು ದ್ವೇಷಿಸು'. ಅವರು (ಪ್ರವಾದಿ) ಹೇಳಿದರು: ಆಗ ಜಿಬ್ರೀಲ್ ಅವನನ್ನು ದ್ವೇಷಿಸುತ್ತಾರೆ. ನಂತರ ಅವರು (ಜಿಬ್ರೀಲ್) ಆಕಾಶದ ನಿವಾಸಿಗಳಲ್ಲಿ ಕೂಗಿ ಹೇಳುತ್ತಾರೆ: 'ಖಂಡಿತವಾಗಿಯೂ ಅಲ್ಲಾಹು ಇಂಥವನನ್ನು ದ್ವೇಷಿಸುತ್ತಾನೆ, ಆದ್ದರಿಂದ ನೀವೂ ಅವನನ್ನು ದ್ವೇಷಿಸಿರಿ'. ಅವರು (ಪ್ರವಾದಿ) ಹೇಳಿದರು: ಆಗ ಅವರು (ಆಕಾಶದ ನಿವಾಸಿಗಳು) ಅವನನ್ನು ದ್ವೇಷಿಸುತ್ತಾರೆ. ನಂತರ ಭೂಮಿಯಲ್ಲಿ ಅವನಿಗಾಗಿ ದ್ವೇಷವನ್ನು ಇರಿಸಲಾಗುತ್ತದೆ".
[صحيح] - [صحيح مسلم] - [صحيح مسلم - 2637]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅಲ್ಲಾಹು ಅವನ ಆದೇಶಗಳನ್ನು ಪಾಲಿಸುವ ಮತ್ತು ಅವನ ನಿಷೇಧಗಳಿಂದ ದೂರವಿರುವ ಸತ್ಯವಿಶ್ವಾಸಿ ದಾಸನನ್ನು ಪ್ರೀತಿಸಿದರೆ, ಜಿಬ್ರೀಲ್ ರನ್ನು ಕರೆದು ಹೇಳುತ್ತಾನೆ: ಸರ್ವಶಕ್ತನಾದ ಅಲ್ಲಾಹು ಇಂಥವನನ್ನು ಪ್ರೀತಿಸುತ್ತಾನೆ, ಆದ್ದರಿಂದ ನೀನೂ ಅವನನ್ನು ಪ್ರೀತಿಸು. ಆಗ ದೇವದೂತರುಗಳ ನಾಯಕರಾದ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಅವನನ್ನು ಪ್ರೀತಿಸುತ್ತಾರೆ. ನಂತರ ಜಿಬ್ರೀಲ್ ಆಕಾಶದ ದೇವದೂತರುಗಳನ್ನು ಕೂಗಿ ಕರೆದು ಹೇಳುತ್ತಾರೆ: ಖಂಡಿತವಾಗಿಯೂ ನಿಮ್ಮ ಪರಿಪಾಲಕನು ಇಂಥವನನ್ನು ಪ್ರೀತಿಸುತ್ತಾನೆ, ಆದ್ದರಿಂದ ನೀವೂ ಅವನನ್ನು ಪ್ರೀತಿಸಿರಿ. ಆಗ ಆಕಾಶದ ನಿವಾಸಿಗಳು ಅವನನ್ನು ಪ್ರೀತಿಸುತ್ತಾರೆ. ನಂತರ ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಅವನಿಗಾಗಿ ಪ್ರೀತಿ, ಅವನ ಕಡೆಗೆ ಒಲವು ಮತ್ತು ಅವನ ಬಗ್ಗೆ ಸಂತೃಪ್ತಿ ಮೂಡಿಸುವ ಮೂಲಕ ಸ್ವೀಕಾರವನ್ನು ಇರಿಸಲಾಗುತ್ತದೆ. ಮತ್ತು ಅಲ್ಲಾಹು ಒಬ್ಬ ದಾಸನನ್ನು ದ್ವೇಷಿಸಿದಾಗ, ಅವನು ಜಿಬ್ರೀಲ್ ರನ್ನು ಕರೆದು ಹೇಳುತ್ತಾನೆ: ನಾನು ಇಂಥವನನ್ನು ದ್ವೇಷಿಸುತ್ತೇನೆ, ಆದ್ದರಿಂದ ನೀನೂ ಅವನನ್ನು ದ್ವೇಷಿಸು. ಆಗ ಜಿಬ್ರೀಲ್ ಅವನನ್ನು ದ್ವೇಷಿಸುತ್ತಾರೆ. ನಂತರ ಜಿಬ್ರೀಲ್ ಆಕಾಶದ ನಿವಾಸಿಗಳನ್ನು ಕೂಗಿ ಕರೆದು ಹೇಳುತ್ತಾರೆ: ಖಂಡಿತವಾಗಿಯೂ ನಿಮ್ಮ ಪರಿಪಾಲಕನು ಇಂಥವನನ್ನು ದ್ವೇಷಿಸುತ್ತಾನೆ, ಆದ್ದರಿಂದ ನೀವೂ ಅವನನ್ನು ದ್ವೇಷಿಸಿರಿ. ಆಗ ಅವರು ಅವನನ್ನು ದ್ವೇಷಿಸುತ್ತಾರೆ. ನಂತರ ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಅವನಿಗಾಗಿ ದ್ವೇಷ ಮತ್ತು ಅಸಹ್ಯವನ್ನು ಇರಿಸಲಾಗುತ್ತದೆ.