ಹದೀಸ್‌ಗಳ ಪಟ್ಟಿ

“ದಾನ ಮಾಡಿದ ಕಾರಣ ಯಾವುದೇ ಆಸ್ತಿ ಕಡಿಮೆಯಾಗಿಲ್ಲ. (ಇತರರನ್ನು) ಮನ್ನಿಸುವ ಗುಣವಿರುವ ದಾಸನಿಗೆ ಅಲ್ಲಾಹು ಗೌರವವನ್ನಲ್ಲದೆ ಬೇರೇನನ್ನೂ ಹೆಚ್ಚಿಸಿಲ್ಲ. ಯಾರು ಅಲ್ಲಾಹನಿಗಾಗಿ ವಿನಯ ತೋರುತ್ತಾನೋ ಅವನನ್ನು ಅಲ್ಲಾಹು ಉನ್ನತಿಗೇರಿಸದೇ ಇರಲಾರ.”
عربي ಆಂಗ್ಲ ಉರ್ದು
ಅಲ್ಲಾಹು ಹೇಳಿದನು: "ಓ ಆದಮನ ಮಗನೇ! ಖರ್ಚು ಮಾಡು. ನಾನು ನಿನಗಾಗಿ ಖರ್ಚು ಮಾಡುತ್ತೇನೆ
عربي ಆಂಗ್ಲ ಉರ್ದು
ಇಸ್ಲಾಂ ಧರ್ಮವನ್ನು ಐದು (ಸ್ತಂಭಗಳ) ಮೇಲೆ ನಿರ್ಮಿಸಲಾಗಿದೆ
عربي ಆಂಗ್ಲ ಉರ್ದು
ದಾಸರು ಬೆಳಗನ್ನು ಪ್ರವೇಶಿಸುವ ಪ್ರತಿ ದಿನವೂ ಎರಡು ದೇವದೂತರುಗಳು ಇಳಿದು ಬರುತ್ತಾರೆ. ಆಗ ಅವರಲ್ಲೊಬ್ಬರು ಹೇಳುವರು: ಓ ಅಲ್ಲಾಹ್! ಖರ್ಚು ಮಾಡುವವರಿಗೆ ಬದಲಿಯನ್ನು ನೀಡು. ಇನ್ನೊಬ್ಬರು ಹೇಳುವರು: ಓ ಅಲ್ಲಾಹ್! (ಖರ್ಚು ಮಾಡದೆ) ತಡೆಹಿಡಿಯುವವರಿಗೆ ಹಾನಿಯನ್ನು ನೀಡು
عربي ಆಂಗ್ಲ ಉರ್ದು
ಚಿನ್ನ ಮತ್ತು ಬೆಳ್ಳಿಯನ್ನು ಹೊಂದಿರುವವನು ಅವುಗಳ ಹಕ್ಕನ್ನು (ಝಕಾತನ್ನು) ನೀಡದಿದ್ದರೆ, ಪುನರುತ್ಥಾನ ದಿನದಂದು ಅವುಗಳನ್ನು ಅಗ್ನಿಯ ಹಾಳೆಗಳಾಗಿ ಪರಿವರ್ತಿಸಿ, ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಲಾಗುವುದು
عربي ಆಂಗ್ಲ ಉರ್ದು
ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಅಲ್ಲಾಹು ನೇರವಾಗಿ ಮಾತನಾಡುವನು. ಅಲ್ಲಾಹು ಮತ್ತು ಅವನ ನಡುವೆ ಯಾವುದೇ ಅನುವಾದಕನು ಇರುವುದಿಲ್ಲ
عربي ಆಂಗ್ಲ ಉರ್ದು
ಕರ್ಮಗಳಲ್ಲಿ ಆರು ವಿಧಗಳಿವೆ. ಮನುಷ್ಯರಲ್ಲಿ ನಾಲ್ಕು ವರ್ಗಗಳಿವೆ. ಕಡ್ಡಾಯಗೊಳಿಸುವ ಎರಡು ಕಾರ್ಯಗಳಿವೆ. ತದ್ರೂಪವಾದ ಒಂದು ವಿಷಯವಿದೆ. ಹತ್ತು ಪಟ್ಟು ಪ್ರತಿಫಲವಿರುವ ಒಳಿತು ಮತ್ತು ಏಳು ನೂರು ಪಟ್ಟು ಪ್ರತಿಫಲವಿರುವ ಒಳಿತು ಇದೆ
عربي ಆಂಗ್ಲ ಉರ್ದು
ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮೊಂದಿಗೆ ಇದ್ದಾಗ, ನಾವು ಚಿಕ್ಕವರು, ದೊಡ್ಡವರು, ಸ್ವತಂತ್ರರು ಮತ್ತು ಗುಲಾಮರು ಹೀಗೆ ಎಲ್ಲರ ಪರವಾಗಿಯೂ, ಒಂದು ಸಾಅ್ ಆಹಾರ, ಅಥವಾ ಒಂದು ಸಾಅ್ ಗಿಣ್ಣು, ಅಥವಾ ಒಂದು ಸಾಅ್ ಬಾರ್ಲಿ, ಅಥವಾ ಒಂದು ಸಾಅ್ ಖರ್ಜೂರ, ಅಥವಾ ಒಂದು ಸಾಅ್ ಒಣದ್ರಾಕ್ಷಿ ಫಿತ್ರ್ ಝಕಾತ್ ನೀಡುತ್ತಿದ್ದೆವು
عربي ಆಂಗ್ಲ ಉರ್ದು
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಿತ್ರ್ ಝಕಾತನ್ನು ಒಂದು ಸಾಅ್ ಖರ್ಜೂರ ಅಥವಾ ಒಂದು ಸಾಅ್ ಬಾರ್ಲಿಯಂತೆ ಗುಲಾಮರು, ಸ್ವತಂತ್ರರು, ಪುರುಷರು, ಸ್ತ್ರೀಯರು, ಕಿರಿಯರು, ಹಿರಿಯರು ಮುಂತಾದ ಎಲ್ಲಾ ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಿದರು. ಜನರು ನಮಾಝ್‌ಗೆ ಹೊರಡುವ ಮೊದಲು ಅದನ್ನು ನೀಡಬೇಕೆಂದು ಅವರು ಆದೇಶಿಸಿದರು
عربي ಆಂಗ್ಲ ಉರ್ದು
ಅಲ್ಲಾಹು ನಿಮಗೆ ದಾನವಾಗಿ ನೀಡಲು ಸಾಧ್ಯವಾಗುವಂತಹದ್ದನ್ನು ಒದಗಿಸಿಲ್ಲವೇ? ಪ್ರತಿ ತಸ್ಬೀಹ್ (ಸುಬ್‌ಹಾನಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಕ್ಬೀರ್ (ಅಲ್ಲಾಹು ಅಕ್ಬರ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಹ್ಮೀದ್ (ಅಲ್‌ಹಮ್ದುಲಿಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಮತ್ತು ಪ್ರತಿ ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳುವುದು) ದಾನವಾಗಿದೆ. ಒಳಿತನ್ನು ಆದೇಶಿಸುವುದು ದಾನವಾಗಿದೆ, ಕೆಡುಕನ್ನು ತಡೆಯುವುದು ದಾನವಾಗಿದೆ, ಮತ್ತು ನಿಮ್ಮಲ್ಲಿ ಒಬ್ಬರು ಲೈಂಗಿಕ ಬಯಕೆಯನ್ನು ಪೂರೈಸುವುದರಲ್ಲಿ ಸಹ ದಾನವಿದೆ
عربي ಆಂಗ್ಲ ಉರ್ದು