عَنْ مُعَاذٍ رَضِيَ اللَّهُ عَنْهُ:
أَنَّ النَّبِيَّ صَلَّى اللهُ عَلَيْهِ وَسَلَّمَ لَمَّا وَجَّهَهُ إِلَى الْيَمَنِ أَمَرَهُ أَنْ يَأْخُذَ مِنَ الْبَقَرِ مِنْ كُلِّ ثَلَاثِينَ تَبِيعًا أَوْ تَبِيعَةً، وَمِنْ كُلِّ أَرْبَعِينَ مُسِنَّةً، وَمِنْ كُلِّ حَالِمٍ -يَعْنِي مُحْتَلِمًا- دِينَارًا أَوْ عَدْلَهُ مِنَ المَعَافِرِ، ثِيَابٌ تَكُونُ بِالْيَمَنِ.
[صحيح بشواهده] - [رواه أبو داود والترمذي والنسائي وابن ماجه وأحمد] - [سنن أبي داود: 1576]
المزيــد ...
ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು (ಮುಆದ್ ರನ್ನು) ಯಮನ್‌ಗೆ ಕಳುಹಿಸಿದಾಗ, ಹಸುಗಳ ಝಕಾತ್ ಆಗಿ, ಪ್ರತಿ ಮೂವತ್ತು ಹಸುಗಳಿಗೆ ಒಂದು ಗಂಡು ಅಥವಾ ಹೆಣ್ಣು ಕರುವನ್ನು (ಒಂದು ವರ್ಷ ಪ್ರಾಯದ್ದು), ಮತ್ತು ಪ್ರತಿ ನಲ್ವತ್ತು ಹಸುಗಳಿಗೆ ಒಂದು ಹಸುವನ್ನು (ಎರಡು ವರ್ಷ ಪ್ರಾಯದ್ದು) ತೆಗೆದುಕೊಳ್ಳಲು ಆದೇಶಿಸಿದರು. ಮತ್ತು (ತೆರಿಗೆಯ ವಿಷಯದಲ್ಲಿ) ಪ್ರತಿಯೊಬ್ಬ ಪ್ರೌಢಾವಸ್ಥೆಗೆ ತಲುಪಿದವನಿಂದ ಒಂದು ದೀನಾರ್, ಅಥವಾ ಅದಕ್ಕೆ ಸಮನಾದ ಮೌಲ್ಯದ ಯಮನ್‌ನ ಬಟ್ಟೆಯಾದ 'ಮಆಫಿರ್' ಅನ್ನು ತೆಗೆದುಕೊಳ್ಳಲು ಆದೇಶಿಸಿದರು.
[صحيح بشواهده] - [رواه أبو داود والترمذي والنسائي وابن ماجه وأحمد] - [سنن أبي داود - 1576]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಆದ್ ಇಬ್ನ್ ಜಬಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ಜನರಿಗೆ ಕಲಿಸಲು ಮತ್ತು ಇಸ್ಲಾಂ ಧರ್ಮಕ್ಕೆ ಆಹ್ವಾನ ನೀಡಲು ಯಮನ್‌ಗೆ ಕಳುಹಿಸಿದರು. ಅವರು ಅವರಿಗೆ ಆದೇಶಿಸಿದ ವಿಷಯಗಳಲ್ಲಿ ಇದೂ ಒಂದಾಗಿತ್ತು: ಅವರು ಮುಸ್ಲಿಮರಿಂದ ಅವರ ಹಸುಗಳ ಝಕಾತ್ ಅನ್ನು ತೆಗೆದುಕೊಳ್ಳಬೇಕು. ಪ್ರತಿ ಮೂವತ್ತು ಹಸುಗಳಿಗೆ ಒಂದು ಗಂಡು ಕರು ಅಥವಾ ಹೆಣ್ಣು ಕರುವನ್ನು ತೆಗೆದುಕೊಳ್ಳಬೇಕು; ಅದು ಒಂದು ವರ್ಷ ಪೂರೈಸಿದ ಕರುವಾಗಿರಬೇಕು. ಮತ್ತು ಪ್ರತಿ ನಲ್ವತ್ತು ಹಸುಗಳಿಗೆ ಒಂದು ಹಸುವನ್ನು ತೆಗೆದುಕೊಳ್ಳಬೇಕು; ಅದು ಎರಡು ವರ್ಷ ಪೂರೈಸಿದ ಹಸುವಾಗಿರಬೇಕು. ಅವರು 'ಅಹ್ಲುಲ್ ಕಿತಾಬ್' ಗಳಾದ ಯಹೂದಿಗಳು ಮತ್ತು ಕ್ರೈಸ್ತರಿಂದ ಜಿಝ್ಯಾ (ತೆರಿಗೆ) ವನ್ನು, ಪ್ರತಿಯೊಬ್ಬ ಪ್ರೌಢಾವಸ್ಥೆಗೆ ತಲುಪಿದ ಪುರುಷನಿಂದ ಒಂದು ದೀನಾರ್, ಅಥವಾ ಒಂದು ದೀನಾರ್‌ಗೆ ಸಮನಾದ 'ಮಆಫಿರಿ' ಎಂದು ಕರೆಯಲಾಗುವ ಯಮನ್‌ನ ಬಟ್ಟೆಯನ್ನು ತೆಗೆದುಕೊಳ್ಳಬೇಕು ಎಂದು ಆದೇಶಿಸಿದರು.