عن أنس رضي الله عنه أن النبي صلى الله عليه وسلم قال:
«جَاهِدُوا المشركين بأموالكم وأنفسكم وألسنتكم».
[صحيح] - [رواه أبو داود والنسائي وأحمد] - [سنن أبي داود: 2504]
المزيــد ...
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀವು ಮುಶ್ರಿಕರೊಡನೆ ನಿಮ್ಮ ಸಂಪತ್ತು, ನಿಮ್ಮ ಪ್ರಾಣ ಮತ್ತು ನಿಮ್ಮ ನಾಲಿಗೆಯಿಂದ ಜಿಹಾದ್ ಮಾಡಿರಿ."
[صحيح] - - [سنن أبي داود - 2504]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯನಿಷೇಧಿಗಳೊಡನೆ ಜಿಹಾದ್ ಮಾಡಲು ಮತ್ತು ಅಲ್ಲಾಹನ ವಚನವು ಅತ್ಯುನ್ನತವಾಗಬೇಕೆಂಬ ಉದ್ದೇಶದಿಂದ ಅವರನ್ನು ಎದುರಿಸಲು ಸಾಧ್ಯವಿರುವ ಎಲ್ಲ ವಿಧಾನಗಳಿಂದಲೂ ಪರಿಶ್ರಮಿಸಬೇಕೆಂದು ಆದೇಶಿಸಿದರು. ಅವುಗಳಲ್ಲಿ ಕೆಲವು ಹೀಗಿವೆ:
ಮೊದಲನೆಯದಾಗಿ: ಅವರೊಡನೆ ಜಿಹಾದ್ ಮಾಡಲು ಸಂಪತ್ತನ್ನು ಖರ್ಚು ಮಾಡುವುದು. ಉದಾಹರಣೆಗೆ, ಶಸ್ತ್ರಾಸ್ತ್ರಗಳನ್ನು ಖರೀದಿಸುವುದು, ಜಿಹಾದ್ ಮಾಡುವವರ ವೆಚ್ಚ ಭರಿಸುವುದು ಇತ್ಯಾದಿ.
ಎರಡನೆಯದಾಗಿ: ಅವರನ್ನು ಎದುರಿಸಲು ಮತ್ತು ಅವರನ್ನು ತಡೆಯಲು ಪ್ರಾಣ ಮತ್ತು ದೇಹದೊಂದಿಗೆ ಸ್ವತಃ ಹೊರಡುವುದು.
ಮೂರನೆಯದಾಗಿ: ಅವರನ್ನು ನಾಲಿಗೆಯ ಮೂಲಕ ಈ ಧರ್ಮಕ್ಕೆ ಆಹ್ವಾನಿಸುವುದು, ಅವರ ಮೇಲೆ ಪುರಾವೆಗಳನ್ನು ಸ್ಥಾಪಿಸುವುದು, ಮತ್ತು ಅವರನ್ನು ಖಂಡಿಸುವುದು ಮತ್ತು ಅವರಿಗೆ ಪ್ರತ್ಯುತ್ತರ ನೀಡುವುದು.