عن ابن عمر رضي الله عنهما قال: قال رسول الله صلى الله عليه وسلم:
«كل مُسْكِرٍ خَمْرٌ، وكل مُسْكِرٍ حرام، ومن شرِب الخمر في الدنيا فمات وهو يُدْمِنُهَا لَمْ يَتُبْ، لَمْ يَشْرَبْهَا في الآخرة».
[صحيح] - [رواه مسلم وأخرج البخاري الجملة الأخيرة منه] - [صحيح مسلم: 2003]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಎಲ್ಲಾ ಮಾದಕ ದ್ರವ್ಯಗಳು ಮದ್ಯವಾಗಿವೆ ಮತ್ತು ಎಲ್ಲಾ ಮಾದಕ ದ್ರವ್ಯಗಳು ನಿಷಿದ್ಧವಾಗಿವೆ. ಯಾರು ಇಹಲೋಕದಲ್ಲಿ ಮದ್ಯ ಸೇವಿಸುತ್ತಾರೋ, ಮತ್ತು ಅದರ ಚಟಕ್ಕೆ ಬಲಿಯಾಗಿ ಪಶ್ಚಾತ್ತಾಪಪಡದೆ ಸಾಯುತ್ತಾರೋ, ಅವರು ಪರಲೋಕದಲ್ಲಿ ಅದನ್ನು ಕುಡಿಯಲಾರರು."
[صحيح] - - [صحيح مسلم - 2003]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಬುದ್ಧಿಯ ಸ್ತಿಮಿತವನ್ನು ತಪ್ಪಿಸುವ ಎಲ್ಲವೂ ಮಾದಕ ಪದಾರ್ಥವಾದ ಮದ್ಯದಲ್ಲಿ ಸೇರುತ್ತವೆ. ಅವು ಪಾನೀಯಗಳು, ತಿನಿಸುಗಳು, ಮೂಗಿಗೆ ಎಳೆಯುವಂತಹವುಗಳು ಅಥವಾ ಇತರ ಯಾವುದೇ ಆಗಿದ್ದರೂ ಸಹ. ಅಮಲು ಬರಿಸುವ ಮತ್ತು ಬುದ್ಧಿಯ ಸ್ತಿಮಿತವನ್ನು ತಪ್ಪಿಸುವ ಎಲ್ಲವನ್ನೂ ಅಲ್ಲಾಹು ನಿಷೇಧಿಸಿದ್ದಾನೆ ಮತ್ತು ತಡೆದಿದ್ದಾನೆ. ಅವು ಕಡಿಮೆ ಪ್ರಮಾಣದಲ್ಲಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೂ ಸಹ. ಈ ಮಾದಕ ದ್ರವ್ಯಗಳ ಯಾವುದೇ ಒಂದು ವಿಧವನ್ನು ಯಾರು ಸೇವಿಸುತ್ತಾರೋ, ಮತ್ತು ಸಾವಿನ ತನಕ ಪಶ್ಚಾತ್ತಾಪಪಡದೆ ಅದನ್ನು ಸೇವಿಸುತ್ತಲೇ ಇರುತ್ತಾರೋ, ಅವರು ಅಲ್ಲಾಹನ ಶಿಕ್ಷೆಗೆ ಅರ್ಹರಾಗುತ್ತಾರೆ, ಅಂದರೆ ಸ್ವರ್ಗದಲ್ಲಿ ಅವರಿಗೆ ಮದ್ಯ ಸೇವನೆಯನ್ನು ತಡೆಹಿಡಿಯಲಾಗುತ್ತದೆ.