ವರ್ಗ:
+ -

عَنْ أَبِي بُرْدَةَ، عَنْ أَبِيهِ أَبِي مُوسَى الأَشْعَريِّ رَضِيَ اللَّهُ عَنْهُ:
أَنَّ النَّبِيَّ صَلَّى اللَّهُ عَلَيْهِ وَسَلَّمَ بَعَثَهُ إِلَى اليَمَنِ، فَسَأَلَهُ عَنْ أَشْرِبَةٍ تُصْنَعُ بِهَا، فَقَالَ: وَمَا هِيَ؟، قَالَ: «البِتْعُ وَالمِزْرُ»، فَقِيلَ لِأَبِي بُرْدَةَ: مَا البِتْعُ؟ قَالَ: نَبِيذُ العَسَلِ، وَالمِزْرُ: نَبِيذُ الشَّعِيرِ، فَقَالَ: «كُلُّ مُسْكِرٍ حَرَامٌ» خرجه البخاري. وَخَرَّجَهُ مُسْلِمٌ وَلَفْظُهُ: قَالَ: بَعَثَنِي رَسُولُ اَلله أَنَا وَمُعَاذٌ إِلَى اَليَمَنِ، فَقُلْتُ: يَا رَسُولُ اَللَّهِ! إِنَّ شَرَابًا يُصْنَعُ بِأَرْضِنَا يُقَال لَهُ: المِزَرُ مِنَ الشَّعِيرِ، وَشَرَابٌ يُقَالُ لَهُ: البِتْعُ مِنَ العَسَلِ، فَقَالَ: «كُلُّ مُسْكِرٍ حَرَامٌ». وَفِي رِوَايَةٍ لِمُسْلِمٍ: «فَقَالَ: كُلُّ مَا أَسْكَرَ عَنِ الصَّلَاةِ فَهُوَ حَرَامٌ». وَفِي رِوَايَةٍ لَهُ: «وَكَانَ رَسُولُ الله قَدْ أُعْطِيَ جَوَامِعَ الكَلِمِ بِخَوَاتِمِهِ، فَقَالَ: أَنْهَى عَنْ كُلِّ مُسْكِرٍ أَسْكَرَ عَنْ الصَّلَاةِ».

[صحيح] - [رواه البخاري ومسلم] - [الأربعون النووية: 46]
المزيــد ...

ಅಬೂ ಬುರ್ದಾ ರಿಂದ, ಅವರ ತಂದೆ ಅಬೂ ಮೂಸಾ ಅಲ್-ಅಶ್'ಅರೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಯಮನ್‌ಗೆ ಕಳುಹಿಸಿದರು. ಆಗ ಅವರು (ಅಬೂ ಮೂಸಾ) ಅಲ್ಲಿ ತಯಾರಿಸಲಾಗುವ ಕೆಲವು ಪಾನೀಯಗಳ ಬಗ್ಗೆ ಅವರಲ್ಲಿ (ಪ್ರವಾದಿಯವರನ್ನು) ಕೇಳಿದರು. ಅವರು (ಪ್ರವಾದಿ) ಕೇಳಿದರು: "ಅವು ಯಾವುವು?" ಅವರು (ಅಬೂ ಮೂಸಾ) ಹೇಳಿದರು: "ಅಲ್-ಬಿತ್'ಅ ಮತ್ತು ಅಲ್-ಮಿಝ್ರ್". (ವರದಿಗಾರರು ಹೇಳುತ್ತಾರೆ:) ಆಗ ಅಬೂ ಬುರ್ದಾ ರಲ್ಲಿ ಕೇಳಲಾಯಿತು: "ಅಲ್-ಬಿತ್'ಅ ಎಂದರೇನು?" ಅವರು ಹೇಳಿದರು: "ಜೇನುತುಪ್ಪದಿಂದ ಮಾಡಿದ ಪಾನೀಯ". "ಮತ್ತು ಅಲ್-ಮಿಝ್ರ್ (ಎಂದರೇನು?)": "ಬಾರ್ಲಿಯಿಂದ ಮಾಡಿದ ಪಾನೀಯ". ಆಗ ಅವರು (ಪ್ರವಾದಿ) ಹೇಳಿದರು: "ಪ್ರತಿಯೊಂದು ಅಮಲೇರಿಸುವ ವಸ್ತುವೂ ಹರಾಮ್ (ನಿಷಿದ್ಧ) ಆಗಿದೆ".

[صحيح] - [رواه البخاري ومسلم] - [الأربعون النووية - 46]

ವಿವರಣೆ

ಅಬೂ ಮೂಸಾ ಅಲ್-ಅಶ್‌ಅರೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಯಮನ್‌ಗೆ ಕಳುಹಿಸಿದರು. ಆಗ ಅವರು ಅಲ್ಲಿ ತಯಾರಿಸಲಾಗುವ ಕೆಲವು ಪಾನೀಯಗಳ ಬಗ್ಗೆ, ಅವು ಹರಾಮ್ ಆಗಿವೆಯೇ ಎಂದು ಪ್ರವಾದಿಯವರನ್ನು ಕೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವುಗಳ ಬಗ್ಗೆ ವಿಚಾರಿಸಿದರು. ಆಗ ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಅವು 'ಅಲ್-ಬಿತ್'ಅ (ಜೇನುತುಪ್ಪದ ಪಾನೀಯ), ಮತ್ತು 'ಅಲ್-ಮಿಝ್ರ್' (ಬಾರ್ಲಿಯ ಪಾನೀಯ). ಆಗ 'ಜವಾಮಿಉಲ್-ಕಲಿಮ್' ನೀಡಲ್ಪಟ್ಟಿದ್ದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪ್ರತಿಯೊಂದು ಅಮಲೇರಿಸುವ ವಸ್ತುವೂ ಹರಾಮ್ ಆಗಿದೆ".

ಹದೀಸಿನ ಪ್ರಯೋಜನಗಳು

  1. ನಬೀದ್ (ಪಾನೀಯ): ಇದು ನೀರಿನಲ್ಲಿ ಖರ್ಜೂರ, ಜೇನುತುಪ್ಪ, ಬಾರ್ಲಿ ಮುಂತಾದವುಗಳನ್ನು ಹಾಕಿ, ಅವುಗಳಿಂದ ಸಿಹಿ ಪಾನೀಯನ್ನು ತಯಾರಿಸುವುದು. ಕೆಲವೊಮ್ಮೆ ಅದು ನಂತರ ಹುಳಿಯಾಗಿ ಅಮಲೇರಿಸುವ ವಸ್ತುವಾಗುತ್ತದೆ.
  2. ಈ ಹದೀಸ್ ಖಮ್ರ್ (ಮದ್ಯ), ಹಶೀಶ್ ಮುಂತಾದ ಎಲ್ಲಾ ರೀತಿಯ ಅಮಲೇರಿಸುವ ವಸ್ತುಗಳನ್ನು ನಿಷೇಧಿಸುವಲ್ಲಿ ಒಂದು ಮೂಲಭೂತ ನಿಯಮವಾಗಿದೆ.
  3. ಮುಸ್ಲಿಂ ವ್ಯಕ್ತಿಗೆ ಅಗತ್ಯವಿರುವ ವಿಷಯದ ಬಗ್ಗೆ ಕೇಳುವುದರ ಮಹತ್ವವನ್ನು ತಿಳಿಸಲಾಗಿದೆ.
  4. ಮದ್ಯವನ್ನು ಮೊದಲು ನಮಾಝ್‌ನ ಸಮಯ ಹತ್ತಿರವಾದಾಗ ಕುಡಿಯಬಾರದೆಂದು ನಿಷೇಧಿಸಲಾಗಿತ್ತು. ಕೆಲವು ಮುಹಾಜಿರ್‌ಗಳು ನಮಾಝ್ ಮಾಡಿದಾಗ, ತಪ್ಪು ತಪ್ಪಾಗಿ ಕುರ್‌ಆನ್ ಪಠಿಸಿದರು. ಆಗ ಅಲ್ಲಾಹು ಈ ವಚನವನ್ನು ಅವತೀರ್ಣಗೊಳಿಸಿದನು: "ಓ ಸತ್ಯವಿಶ್ವಾಸಿಗಳೇ, ನೀವು ಅಮಲಿನ ಸ್ಥಿತಿಯಲ್ಲಿರುವಾಗ ನಮಾಝ್‌ಗೆ ಸಮೀಪಿಸಬೇಡಿ, ನೀವು ಏನು ಹೇಳುತ್ತಿದ್ದೀರಿ ಎಂದು ನಿಮಗೆ ತಿಳಿಯುವವರೆಗೆ." [ಸೂರಃ ಅನ್ನಿಸಾ: 43]. ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಘೋಷಕರು ಕೂಗಿ ಹೇಳುತ್ತಿದ್ದರು: ಅಮಲಿನ ಸ್ಥಿತಿಯಲ್ಲಿರುವವನು ನಮಾಝ್‌ಗೆ ಸಮೀಪಿಸಬಾರದು. ನಂತರ ಅಲ್ಲಾಹು ಅದನ್ನು ತನ್ನ ಈ ವಚನದ ಮೂಲಕ ಸಂಪೂರ್ಣವಾಗಿ ನಿಷೇಧಿಸಿದನು: "ಓ ಸತ್ಯವಿಶ್ವಾಸಿಗಳೇ, ಖಂಡಿತವಾಗಿಯೂ ಮದ್ಯ, ಜೂಜು, ವಿಗ್ರಹ ಪೀಠಗಳು ಮತ್ತು (ಭವಿಷ್ಯ ನುಡಿಯುವ) ಬಾಣಗಳು ಶೈತಾನನ ಕಾರ್ಯಗಳಿಂದಾದ ಹೊಲಸಾಗಿವೆ, ಆದ್ದರಿಂದ ಅದರಿಂದ ದೂರವಿರಿ, ನೀವು ಯಶಸ್ವಿಯಾಗಬಹುದು. ಖಂಡಿತವಾಗಿಯೂ ಶೈತಾನನು ಮದ್ಯ ಮತ್ತು ಜೂಜಿನ ಮೂಲಕ ನಿಮ್ಮ ನಡುವೆ ದ್ವೇಷ ಮತ್ತು ವೈಷಮ್ಯವನ್ನು ಉಂಟುಮಾಡಲು ಮತ್ತು ನಿಮ್ಮನ್ನು ಅಲ್ಲಾಹನ ಸ್ಮರಣೆಯಿಂದ ಹಾಗೂ ನಮಾಝ್‌ನಿಂದ ತಡೆಯಲು ಬಯಸುತ್ತಾನೆ. ಆದ್ದರಿಂದ, ನೀವು (ಈಗಲಾದರೂ ಅದರಿಂದ) ದೂರವಿರುವಿರಲ್ಲವೇ?} [ಸೂರಃ ಅಲ್-ಮಾಇದಾ: 90, 91].
  5. ಅಲ್ಲಾಹು ಮದ್ಯವನ್ನು ಅದರಲ್ಲಿರುವ ದೊಡ್ಡ ಹಾನಿಗಳು ಮತ್ತು ದುಷ್ಪರಿಣಾಮಗಳ ಕಾರಣದಿಂದಾಗಿ ನಿಷೇಧಿಸಿದ್ದಾನೆ.
  6. ಮದ್ಯನಿಷೇಧಕ್ಕೆ ಮುಖ್ಯ ಕಾರಣ ಅದರಲ್ಲಿರುವ ಅಮಲೇರಿಸುವ ಗುಣ. ನಬೀದ್‌ (ಪಾನೀಯ) ನಲ್ಲಿ ಅಮಲೇರಿಸುವ ಗುಣವಿದ್ದರೆ ಅದು ನಿಷಿದ್ಧವಾಗಿದೆ. ಅದರಲ್ಲಿ ಅಮಲೇರಿಸುವ ಗುಣವಿಲ್ಲದಿದ್ದರೆ ಅದು ಅನುಮತಿಸಲ್ಪಟ್ಟಿದೆ.
ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಬಂಗಾಳಿ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ ಜರ್ಮನ್ ಪಶ್ತೋ الأسامية الألبانية الأمهرية الغوجاراتية القيرقيزية النيبالية الليتوانية الدرية الصربية الطاجيكية الكينياروندا المجرية التشيكية الموري الولوف الأذربيجانية الأوزبكية الأوكرانية الجورجية المقدونية الخميرية
ಅನುವಾದಗಳನ್ನು ತೋರಿಸಿ
ವರ್ಗಗಳು
ಇನ್ನಷ್ಟು