عَنْ أَبِي مُحَمَّدٍ عَبْدِ اللَّهِ بْنِ عَمْرِو بْنِ العَاصِ رَضِيَ اللَّهُ عَنْهُمَا، قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«لَا يُؤْمِنُ أَحَدُكُمْ حَتَّى يَكُونَ هَوَاهُ تَبَعًا لِمَا جِئْتُ بِهِ».
[قال النووي: حديث صحيح] - [رويناه في كتاب الحجة بإسناد صحيح] - [الأربعون النووية: 41]
المزيــد ...
ಅಬೂ ಮುಹಮ್ಮದ್ ಅಬ್ದುಲ್ಲಾ ಇಬ್ನ್ ಅಮ್ರ್ ಇಬ್ನುಲ್-ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲೊಬ್ಬನು, ಅವನ ಮನದ ಇಚ್ಛೆಯು ನಾನು ತಂದಿರುವುದನ್ನು (ಶರೀಅತ್) ಅನುಸರಿಸುವವರೆಗೆ (ಪೂರ್ಣ) ಸತ್ಯವಿಶ್ವಾಸಿಯಾಗುವುದಿಲ್ಲ".
[قال النووي: حديث صحيح] - [رويناه في كتاب الحجة بإسناد صحيح] - [الأربعون النووية - 41]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಂದಿರುವ ಆದೇಶಗಳು, ನಿಷೇಧಗಳು ಮತ್ತು ಇತರ ವಿಷಯಗಳನ್ನು ಪ್ರೀತಿಸಿ ಅವುಗಳನ್ನು ಅನುಸರಿಸುವವರೆಗೆ ಯಾರೂ ಕಡ್ಡಾಯವಾದ ಪರಿಪೂರ್ಣ ಈಮಾನ್ (ವಿಶ್ವಾಸ) ಅನ್ನು ಹೊಂದಿದ ಸತ್ಯವಿಶ್ವಾಸಿಯಾಗುವುದಿಲ್ಲ. ಆದ್ದರಿಂದ, ಅವರು (ಪ್ರವಾದಿ) ಆದೇಶಿಸಿದ್ದನ್ನು ಅವನು ಪ್ರೀತಿಸಬೇಕು, ಮತ್ತು ಅವರು ನಿಷೇಧಿಸಿದ್ದನ್ನು ಅವನು ದ್ವೇಷಿಸಬೇಕು.