عَنْ أَنَسٍ رَضِيَ اللَّهُ عَنْهُ قَالَ:
كُنْتُ سَاقِيَ القَوْمِ فِي مَنْزِلِ أَبِي طَلْحَةَ، وَكَانَ خَمْرُهُمْ يَوْمَئِذٍ الفَضِيخَ، فَأَمَرَ رَسُولُ اللَّهِ صَلَّى اللهُ عَلَيْهِ وَسَلَّمَ مُنَادِيًا يُنَادِي: أَلاَ إِنَّ الخَمْرَ قَدْ حُرِّمَتْ، قَالَ: فَقَالَ لِي أَبُو طَلْحَةَ: اخْرُجْ، فَأَهْرِقْهَا، فَخَرَجْتُ فَهَرَقْتُهَا، فَجَرَتْ فِي سِكَكِ المَدِينَةِ، فَقَالَ بَعْضُ القَوْمِ: قَدْ قُتِلَ قَوْمٌ وَهِيَ فِي بُطُونِهِمْ، فَأَنْزَلَ اللَّهُ: {لَيْسَ عَلَى الَّذِينَ آمَنُوا وَعَمِلُوا الصَّالِحَاتِ جُنَاحٌ فِيمَا طَعِمُوا} [المائدة: 93] الآيَةَ.
[صحيح] - [متفق عليه] - [صحيح البخاري: 2464]
المزيــد ...
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ನಾನು ಅಬೂ ತಲ್ಹಾ ರವರ ಮನೆಯಲ್ಲಿ ಜನರಿಗೆ ಪಾನೀಯವನ್ನು ಬಡಿಸುವವನಾಗಿದ್ದೆ. ಆ ದಿನಗಳಲ್ಲಿ ಅವರ ಮದ್ಯವು 'ಫದೀಖ್' (ಹಸಿ ಮತ್ತು ಹಣ್ಣಾದ ಖರ್ಜೂರಗಳಿಂದ ತಯಾರಿಸಿದ್ದು) ಆಗಿತ್ತು. ಆಗ ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ಘೋಷಣೆ ಮಾಡುವವನಿಗೆ ಹೀಗೆ ಘೋಷಿಸಲು ಆದೇಶಿಸಿದರು: "ತಿಳಿಯಿರಿ! ಖಂಡಿತವಾಗಿಯೂ ಖಮ್ರ್ (ಮದ್ಯ) ವನ್ನು ನಿಷೇಧಿಸಲಾಗಿದೆ". ವರದಿಗಾರ (ಅನಸ್) ಹೇಳುತ್ತಾರೆ: ಆಗ ಅಬೂ ತಲ್ಹಾ ನನಗೆ ಹೇಳಿದರು: "ಹೋಗು, ಅದನ್ನು ಚೆಲ್ಲಿಬಿಡು". ನಾನು ಹೊರಗೆ ಹೋಗಿ ಅದನ್ನು ಚೆಲ್ಲಿದೆನು. ಆಗ ಅದು ಮದೀನಾದ ಕೇರಿಗಳಲ್ಲಿ ಹರಿಯಿತು. ಆಗ ಕೆಲವು ಜನರು ಹೇಳಿದರು: "(ಇದನ್ನು ನಿಷೇಧಿಸುವ ಮೊದಲು) ಕೆಲವರು (ಯುದ್ಧದಲ್ಲಿ) ಹತರಾಗಿದ್ದಾರೆ ಮತ್ತು ಇದು (ಮದ್ಯ) ಅವರ ಹೊಟ್ಟೆಗಳಲ್ಲಿತ್ತು (ಅವರ ಗತಿಯೇನು?)". ಆಗ ಅಲ್ಲಾಹು (ಈ) ವಚನವನ್ನು ಅವತೀರ್ಣಗೊಳಿಸಿದನು: "ಸತ್ಯವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಿಗೆ, ಅವರು (ಹಿಂದೆ) ಸೇವಿಸಿದ್ದರಲ್ಲಿ ಯಾವುದೇ ದೋಷವಿಲ್ಲ..." [ಸೂರ ಮಾಇದಾ: 93].
[صحيح] - [متفق عليه] - [صحيح البخاري - 2464]
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರು ತಮ್ಮ ತಾಯಿಯ ಗಂಡ ಅಬೂ ತಲ್ಹಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಮನೆಯಲ್ಲಿದ್ದವರಿಗೆ ಪಾನೀಯ ಬಡಿಸುವ ಕೆಲಸ ಮಾಡುತ್ತಿದ್ದರು. ಆ ದಿನಗಳಲ್ಲಿ ಅವರ ಮದ್ಯವು ಫದೀಖ್ ಆಗಿತ್ತು, ಅದು ಹಸಿ ಖರ್ಜೂರ (ಬುಸ್ರ್) ಮತ್ತು ಹಣ್ಣಾದ ಖರ್ಜೂರಗಳ ಮಿಶ್ರಣವಾಗಿತ್ತು. ಅಷ್ಟರಲ್ಲಿ ಅಲ್ಲಾಹುವಿನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಘೋಷಕರು ಘೋಷಿಸತೊಡಗಿದರು: ತಿಳಿಯಿರಿ! ಖಂಡಿತವಾಗಿಯೂ ಮದ್ಯವನ್ನು ನಿಷೇಧಿಸಲಾಗಿದೆ. ವರದಿಗಾರ (ಅನಸ್) ಹೇಳುತ್ತಾರೆ: ಆಗ ಅಬೂ ತಲ್ಹಾ ನನಗೆ ಹೇಳಿದರು: ಹೋಗಿ ಅದನ್ನು ಚೆಲ್ಲಿಬಿಡು. ನಾನು ಹೊರಗೆ ಹೋಗಿ ಅದನ್ನು ಸುರಿದು ಚೆಲ್ಲಿದೆನು. ಆಗ ಮದ್ಯವು ಮದೀನಾದ ಕೇರಿಗಳಲ್ಲಿ ಹರಿಯಿತು. ಆಗ ಕೆಲವು ಜನರು ಹೇಳಿದರು: ಇದನ್ನು ನಿಷೇಧಿಸುವ ಮೊದಲು ಕೆಲವು ಸಹಾಬಿಗಳು ಕೊಲ್ಲಲ್ಪಟ್ಟಿದ್ದಾರೆ ಮತ್ತು ಇದು ಅವರ ಹೊಟ್ಟೆಗಳಲ್ಲಿತ್ತು. ಆಗ ಅಲ್ಲಾಹು ಅವತೀರ್ಣಗೊಳಿಸಿದನು:
"ಸತ್ಯವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಿಗೆ, ಅವರು (ಹಿಂದೆ) ಸೇವಿಸಿದ್ದರಲ್ಲಿ ಯಾವುದೇ ದೋಷವಿಲ್ಲ..." [ಸೂರ ಮಾಇದಾ: 93]. ಅಂದರೆ: ಮದ್ಯವನ್ನು ನಿಷೇಧಿಸುವ ಮೊದಲು ಅವರು ಸೇವಿಸಿದ ಮತ್ತು ಕುಡಿದ ಸತ್ಯವಿಶ್ವಾಸಿಗಳಿಗೆ ಅದರಿಂದ ಯಾವುದೇ ಪಾಪವಿಲ್ಲ.