+ -

عَنْ عَبْدِ اللَّهِ بْنِ مَسْعُودٍ رَضِيَ اللَّهُ عَنْهُ رَفَعَهُ:
فِي قَوْلِ اللَّهِ عَزَّ وَجَلَّ: {وَمَنْ يُرِدْ فِيهِ بِإِلْحَادٍ بِظُلْمٍ نُذِقْهُ مِنْ عَذَابٍ أَلِيمٍ} [الحج: 25] قَالَ: «لَوْ أَنَّ رَجُلًا هَمَّ فِيهِ بِإِلْحَادٍ وَهُوَ بِعَدَنِ أَبْيَنَ لَأَذَاقَهُ اللَّهُ عَذَابًا أَلِيمًا».

[صحيح] - [رواه أحمد والحاكم] - [المستدرك على الصحيحين: 3461]
المزيــد ...

ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದಾಗಿ ಸೂಚಿಸುತ್ತಾ ಹೇಳಿದರು:
ಸರ್ವಶಕ್ತನಾದ ಅಲ್ಲಾಹನ ಈ ವಚನದ ಬಗ್ಗೆ: “ಮತ್ತು ಯಾರೇ ಆಗಲಿ ಅದರಲ್ಲಿ (ಹರಮ್‌ನಲ್ಲಿ) ಅನ್ಯಾಯದ ಮೂಲಕ ಮಾರ್ಗಭ್ರಷ್ಟತೆಯನ್ನು (ಅಧರ್ಮವನ್ನು) ಉದ್ದೇಶಿಸುತ್ತಾನೋ, ನಾವು ಅವನಿಗೆ ಯಾತನಾಮಯ ಶಿಕ್ಷೆಯನ್ನು ಸವಿಯುವಂತೆ ಮಾಡುವೆವು.” [ಸೂರಃ ಅಲ್-ಹಜ್ಜ್: 25] ಅವರು (ಪ್ರವಾದಿ) ಹೇಳಿದರು: "ಒಂದು ವೇಳೆ ಒಬ್ಬ ವ್ಯಕ್ತಿಯು, ತಾನು 'ಅದನ್ ಅಬ್ಯನ್' (ಯಮನ್‌ನ ಒಂದು ದೂರದ ಸ್ಥಳ) ನಲ್ಲಿದ್ದರೂ ಸಹ, ಅದರಲ್ಲಿ (ಹರಮ್‌ನಲ್ಲಿ) ಅಧರ್ಮವನ್ನು (ಎಸಗಲು) ಉದ್ದೇಶಿಸಿದರೆ, ಅಲ್ಲಾಹು ಅವನಿಗೆ ಯಾತನಾಮಯ ಶಿಕ್ಷೆಯನ್ನು ಸವಿಯುವಂತೆ ಮಾಡುವನು".

[صحيح] - [رواه أحمد والحاكم] - [المستدرك على الصحيحين - 3461]

ವಿವರಣೆ

ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಸರ್ವಶಕ್ತನಾದ ಅಲ್ಲಾಹನ ಈ ವಚನವನ್ನು ಉಲ್ಲೇಖಿಸಿದರು: “ಮತ್ತು ಯಾರೇ ಆಗಲಿ ಅದರಲ್ಲಿ ಅನ್ಯಾಯದ ಮೂಲಕ ಮಾರ್ಗಭ್ರಷ್ಟತೆಯನ್ನು (ಅಧರ್ಮವನ್ನು) ಉದ್ದೇಶಿಸುತ್ತಾನೋ, ನಾವು ಅವನಿಗೆ ಯಾತನಾಮಯ ಶಿಕ್ಷೆಯನ್ನು ಸವಿಯುವಂತೆ ಮಾಡುವೆವು.” ಅವರು ಹೇಳಿದರು: ಜನರಲ್ಲಿ ಯಾರಾದರೂ ಮಕ್ಕಾದ ಹರಮ್‌ನಲ್ಲಿ ಒಂದು ಕೆಟ್ಟ ಕೆಲಸವನ್ನು ಮಾಡಲು ಮನಸ್ಸು ಮಾಡಿ ದೃಢ ಸಂಕಲ್ಪ ಮಾಡಿದರೆ – ಅಂದರೆ, ಅದರಲ್ಲಿ ಅಲ್ಲಾಹು ನಿಷೇಧಿಸಿರುವುದನ್ನು, ಉದಾಹರಣೆಗೆ (ಕೆಟ್ಟ) ಮಾತು ಅಥವಾ ಉದ್ದೇಶಪೂರ್ವಕ ಹತ್ಯೆಯಂತಹ ಅನ್ಯಾಯವನ್ನು (ಮಾಡುವ ಮೂಲಕ ಹರಮ್‌ನ ಪಾವಿತ್ರ್ಯತೆಯನ್ನು) ಉಲ್ಲಂಘಿಸಲು ಬಯಸಿದರೆ – ಅವನು ಯಮನ್‌ನ ಅದನ್ ನಗರದಲ್ಲಿದ್ದರೂ ಸಹ, ಆ ಕಾರಣಕ್ಕಾಗಿ ಅಲ್ಲಾಹು ಅವನಿಗೆ ಯಾತನಾಮಯ ಶಿಕ್ಷೆಯನ್ನು ನೀಡುವುದು ಅವನಿಗೆ ಅರ್ಹವಾಗುತ್ತದೆ. ಅವನು ಅದನ್ನು (ವಾಸ್ತವದಲ್ಲಿ) ಮಾಡದಿದ್ದರೂ ಸಹ; ಆ ವಿಷಯದಲ್ಲಿ ಕೇವಲ ದೃಢ ಸಂಕಲ್ಪ ಮಾಡುವುದೇ (ಶಿಕ್ಷೆ ದೊರೆಯಲು) ಸಾಕಾಗುತ್ತದೆ.

ಹದೀಸಿನ ಪ್ರಯೋಜನಗಳು

  1. ಹರಮ್‌ನ (ಮಕ್ಕಾದ ಪವಿತ್ರ ಕ್ಷೇತ್ರ) ವಿಶೇಷತೆಯನ್ನು ಮತ್ತು ಅದರ ಗೌರವವನ್ನು ವಿವರಿಸಲಾಗಿದೆ.
  2. ಸಅದಿ ಹೇಳುತ್ತಾರೆ: ಹರಮ್ ಅನ್ನು ಗೌರವಿಸುವುದು ಕಡ್ಡಾಯವಾಗಿದೆ, ಅದನ್ನು ಅತಿಯಾಗಿ ಗೌರವಿಸಬೇಕಾಗಿದೆ ಮತ್ತು ಅದರಲ್ಲಿ ಪಾಪಗಳನ್ನು ಮಾಡಲು ಉದ್ದೇಶಿಸುವುದು ಮತ್ತು ಪಾಪ ಮಾಡುವುದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಈ ಪವಿತ್ರ ವಚನದಲ್ಲಿ ತಿಳಿಸಲಾಗಿದೆ.
  3. ದಹ್ಹಾಕ್ ಹೇಳುತ್ತಾರೆ: ಖಂಡಿತವಾಗಿಯೂ ಒಬ್ಬ ವ್ಯಕ್ತಿಯು ಬೇರೆ ನಾಡಿನಲ್ಲಿದ್ದರೂ ಮಕ್ಕಾದಲ್ಲಿ ಪಾಪ ಮಾಡಲು ಉದ್ದೇಶಿಸಿದರೆ, ಅವನು ಅದನ್ನು ಮಾಡದಿದ್ದರೂ (ಕಾರ್ಯರೂಪಕ್ಕೆ ತರದಿದ್ದರೂ) ಸಹ ಅದು ಅವನ ವಿರುದ್ಧ ಲಿಖಿತಗೊಳಿಸಲಾಗುತ್ತದೆ.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಸಿಂಹಳೀಯ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ