عَنْ سَفِينَةَ رَضيَ اللهُ عَنْهُ قَالَ:
كَانَ رَسُولُ اللهِ صَلَّى اللهُ عَلَيْهِ وَسَلَّمَ يُغَسِّلُهُ الصَّاعُ مِنَ المَاءِ مِنَ الجَنَابَةِ، وَيُوَضِّئُهُ المُدُّ.
[صحيح] - [رواه مسلم] - [صحيح مسلم: 326]
المزيــد ...
ಸಫೀನಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ಜನಾಬತ್' (ದೊಡ್ಡ ಅಶುದ್ಧಿ) ಸ್ನಾನ ಮಾಡಲು ಒಂದು 'ಸಾಅ್' ನೀರನ್ನು, ಮತ್ತು ವುಧೂ ಮಾಡಲು ಒಂದು 'ಮುದ್ದ್' ನೀರನ್ನು ಬಳಸುತ್ತಿದ್ದರು."
[صحيح] - [رواه مسلم] - [صحيح مسلم - 326]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನಾಬತ್ ಸ್ನಾನಕ್ಕಾಗಿ ಒಂದು 'ಸಾಅ್' ಮತ್ತು ವುಧೂಗಾಗಿ ಒಂದು 'ಮುದ್ದ್' ಪ್ರಮಾಣದ ನೀರನ್ನು ಬಳಸುತ್ತಿದ್ದರು. 'ಸಾಅ್' ಎಂದರೆ, ನಾಲ್ಕು 'ಮುದ್ದ್'ಗಳು. 'ಮುದ್ದ್' ಎಂದರೆ, ಸಾಧಾರಣ ಮೈಕಟ್ಟು ಇರುವ ಮನುಷ್ಯನ ಎರಡೂ ಬೊಗಸೆ ತುಂಬುವಷ್ಟು ಪ್ರಮಾಣ.