عَنْ إِبرَاهِيمَ النَّخَعِيِّ عَنْ هَمَّامِ بنِ الحَارِثِ قَالَ:
بَالَ جَرِيرٌ، ثُمَّ تَوَضَّأَ، وَمَسَحَ عَلَى خُفَّيْهِ، فَقِيلَ: تَفْعَلُ هَذَا؟ فَقَالَ: نَعَمْ، رَأَيْتُ رَسُولَ اللهِ صَلَّى اللهُ عَلَيْهِ وَسَلَّمَ بَالَ، ثُمَّ تَوَضَّأَ وَمَسَحَ عَلَى خُفَّيْهِ. قَالَ الأَعْمَشُ: قَالَ إِبْرَاهِيمُ: كَانَ يُعْجِبُهُمْ هَذَا الحَدِيثُ؛ لِأَنَّ إِسْلَامَ جَرِيرٍ، كَانَ بَعْدَ نُزُولِ المَائِدَةِ.
[صحيح] - [متفق عليه] - [صحيح مسلم: 272]
المزيــد ...
ಇಬ್ರಾಹೀಮ್ ಅನ್ನಖಈ ರಿಂದ, ಅವರು ಹಮ್ಮಾಮ್ ಇಬ್ನುಲ್-ಹಾರಿಸ್ ರಿಂದ ವರದಿ: ಅವರು ಹೇಳಿದರು:
"ಜರೀರ್ ರವರು ಮೂತ್ರವಿಸರ್ಜನೆ ಮಾಡಿದರು. ನಂತರ ವುಧೂ ಮಾಡಿದರು ಮತ್ತು ತಮ್ಮ ಚರ್ಮದ ಪಾದರಕ್ಷೆಗಳ (ಖುಫ್ಫ್) ಮೇಲೆ (ಒದ್ದೆ ಕೈಯಿಂದ) ಸವರಿದರು. ಆಗ (ಅವರಲ್ಲಿ) ಕೇಳಲಾಯಿತು: 'ನೀವು ಹೀಗೆ ಮಾಡುತ್ತೀರಾ?' ಅವರು ಹೇಳಿದರು: 'ಹೌದು, ನಾನು ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದ್ದೇನೆ; ಅವರು ಮೂತ್ರವಿಸರ್ಜನೆ ಮಾಡಿ, ನಂತರ ವುಧೂ ಮಾಡಿದರು ಮತ್ತು ತಮ್ಮ ಚರ್ಮದ ಪಾದರಕ್ಷೆಗಳ ಮೇಲೆ ಸವರಿದರು'." ಅಲ್-ಅಅಮಶ್ ಹೇಳುತ್ತಾರೆ: ಇಬ್ರಾಹೀಮ್ ಹೇಳಿದರು: "ಅವರಿಗೆ (ವಿದ್ವಾಂಸರಿಗೆ) ಈ ಹದೀಸ್ ಬಹಳ ಇಷ್ಟವಾಗುತ್ತಿತ್ತು. ಏಕೆಂದರೆ ಜರೀರ್ ಅವರ ಇಸ್ಲಾಂ ಸ್ವೀಕಾರವು 'ಅಲ್-ಮಾಯಿದ' (ಅಧ್ಯಾಯವು) ಅವತೀರ್ಣವಾದ ನಂತರವಾಗಿತ್ತು".
[صحيح] - [متفق عليه] - [صحيح مسلم - 272]
ಜರೀರ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮೂತ್ರವಿಸರ್ಜನೆ ಮಾಡಿದರು, ನಂತರ ವುಧೂ ಮಾಡಿದರು. ಅವರು ತಮ್ಮ ಚರ್ಮದ ಪಾದರಕ್ಷೆಗಳ (ಖುಫ್ಫ್) ಮೇಲೆ ಸವರುವುದಕ್ಕೆ ಸಾಕು ಮಾಡಿದರು ಮತ್ತು ತಮ್ಮ ಕಾಲುಗಳನ್ನು ತೊಳೆಯಲಿಲ್ಲ. ಆಗ ಅವರ ಸುತ್ತಲಿದ್ದವರು ಅವರಿಗೆ, "ನೀವು ಹೀಗೆ ಮಾಡುತ್ತೀರಾ?!" ಎಂದು (ಆಶ್ಚರ್ಯದಿಂದ) ಕೇಳಿದರು. ಅವರು ಹೇಳಿದರು: "ಹೌದು, ನಾನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೂತ್ರವಿಸರ್ಜನೆ ಮಾಡುವುದನ್ನು, ನಂತರ ವುಧೂ ಮಾಡಿ ತಮ್ಮ ಚರ್ಮದ ಪಾದರಕ್ಷೆಗಳ ಮೇಲೆ ಸವರುವುದನ್ನು ನೋಡಿದ್ದೇನೆ." ಜರೀರ್ ಅವರು ತಡವಾಗಿ, ಅಂದರೆ ವುಧೂವಿನ ವಚನ ಇರುವ 'ಸೂರ ಅಲ್-ಮಾಯಿದಃ' ಅವತೀರ್ಣವಾದ ನಂತರ ಇಸ್ಲಾಂ ಸ್ವೀಕರಿಸಿದ್ದರು. (ಇದನ್ನು ಹೇಳುವ ಮೂಲಕ) ಚರ್ಮದ ಪಾದರಕ್ಷೆಗಳ ಮೇಲೆ ಸವರುವ ವಿಧಿಯು ಆ ವಚನದಿಂದ ರದ್ದುಗೊಂಡಿಲ್ಲ ಎಂಬುದನ್ನು ಅವರು ಸೂಚಿಸಿದರು.