عَنْ زِرِّ بْنِ حُبَيْشٍ قَالَ:
أَتَيْتُ صَفْوَانَ بْنَ عَسَّالٍ المُرَادِيَّ، أَسْأَلُهُ عَنِ المَسْحِ عَلَى الخُفَّيْنِ، فَقَالَ: مَا جَاءَ بِكَ يَا زِرُّ؟ فَقُلْتُ: ابْتِغَاءَ العِلْمِ، فَقَالَ: إِنَّ المَلاَئِكَةَ لَتَضَعُ أَجْنِحَتَهَا لِطَالِبِ العِلْمِ؛ رِضًا بِمَا يَطْلُبُ، فَقُلْتُ: إِنَّهُ حَكَّ فِي صَدْرِي المَسْحُ عَلَى الخُفَّيْنِ بَعْدَ الغَائِطِ وَالبَوْلِ، وَكُنْتَ امْرَأً مِنْ أَصْحَابِ النَّبِيِّ صَلَّى اللَّهُ عَلَيْهِ وَسَلَّمَ، فَجِئْتُ أَسْأَلُكَ: هَلْ سَمِعْتَهُ يَذْكُرُ فِي ذَلِكَ شَيْئًا؟ قَالَ: نَعَمْ، كَانَ يَأْمُرُنَا إِذَا كُنَّا سَفْرًا أَوْ مُسَافِرِينَ أَلَّا نَنْزِعَ خِفَافَنَا ثَلاَثَةَ أَيَّامٍ وَلَيَالِيهِنَّ إِلَّا مِنْ جَنَابَةٍ، لَكِنْ مِنْ غَائِطٍ وَبَوْلٍ وَنَوْمٍ، فَقُلْتُ: هَلْ سَمِعْتَهُ يَذْكُرُ فِي الهَوَى شَيْئًا؟ قَالَ: نَعَمْ، كُنَّا مَعَ النَّبِيِّ صَلَّى اللَّهُ عَلَيْهِ وَسَلَّمَ فِي سَفَرٍ فَبَيْنَا نَحْنُ عِنْدَهُ إِذْ نَادَاهُ أَعْرَابِيٌّ بِصَوْتٍ لَهُ جَهْوَرِيٍّ: يَا مُحَمَّدُ، فَأَجَابَهُ رَسُولُ اللهِ صَلَّى اللَّهُ عَلَيْهِ وَسَلَّمَ عَلَى نَحْوٍ مِنْ صَوْتِهِ: «هَاؤُمُ» وَقُلْنَا لَهُ: وَيْحَكَ اغْضُضْ مِنْ صَوْتِكَ، فَإِنَّكَ عِنْدَ النَّبِيِّ صَلَّى اللَّهُ عَلَيْهِ وَسَلَّمَ، وَقَدْ نُهِيتَ عَنْ هَذَا، فَقَالَ: وَاللَّهِ لاَ أَغْضُضُ، قَالَ الأَعْرَابِيُّ: المَرْءُ يُحِبُّ القَوْمَ وَلَمَّا يَلْحَقْ بِهِمْ، قَالَ النَّبِيُّ صَلَّى اللَّهُ عَلَيْهِ وَسَلَّمَ: «المَرْءُ مَعَ مَنْ أَحَبَّ يَوْمَ القِيَامَةِ»، فَمَا زَالَ يُحَدِّثُنَا حَتَّى ذَكَرَ بَابًا مِنْ قِبَلِ المَغْرِبِ مَسِيرَةُ عَرْضِهِ، أَوْ يَسِيرُ الرَّاكِبُ فِي عَرْضِهِ أَرْبَعِينَ أَوْ سَبْعِينَ عَامًا.
[صحيح] - [رواه الترمذي وابن ماجه وأحمد] - [سنن الترمذي: 3535]
المزيــد ...
ಝಿರ್ ಇಬ್ನ್ ಹುಬೈಶ್ ರಿಂದ ವರದಿ: ಅವರು ಹೇಳಿದರು:
ನಾನು ಸಫ್ವಾನ್ ಇಬ್ನ್ ಅಸ್ಸಾಲ್ ಅಲ್-ಮುರಾದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಗೆ, ಚರ್ಮದ ಪಾದರಕ್ಷೆಗಳ (ಖುಫ್ಫ್) ಮೇಲೆ ಒದ್ದೆ ಕೈಯಿಂದ ಸವರುವುದರ ಬಗ್ಗೆ ಕೇಳಲು ಬಂದೆನು. ಅವರು ಕೇಳಿದರು: "ಓ ಝಿರ್, ನೀನು ಇಲ್ಲಿಗೆ ಬರಲು ಕಾರಣವೇನು?". ನಾನು ಹೇಳಿದೆ: "ಜ್ಞಾನವನ್ನು ಅರಸಿ ಬಂದಿದ್ದೇನೆ". ಅವರು ಹೇಳಿದರು: "ಖಂಡಿತವಾಗಿಯೂ ಮಲಕ್‌ಗಳು (ದೇವದೂತರು) ಜ್ಞಾನವನ್ನು ಅರಸುವವನಿಗೆ, ಅವನು ಅರಸುವುದನ್ನು ಮೆಚ್ಚಿಕೊಂಡು ತಮ್ಮ ರೆಕ್ಕೆಗಳನ್ನು ತಗ್ಗಿಸುತ್ತಾರೆ". ನಾನು ಹೇಳಿದೆ: "ಮಲಮೂತ್ರ ವಿಸರ್ಜನೆಯ ನಂತರ 'ಖುಫ್ಫ್'ಗಳ ಮೇಲೆ ಸವರುವುದರ ಬಗ್ಗೆ ನನ್ನ ಮನಸ್ಸಿನಲ್ಲಿ ಸಂಶಯವುಂಟಾಗಿದೆ (ಅಥವಾ ತಿಳಿಯುವ ಕುತೂಹಲವುಂಟಾಗಿದೆ). ನೀವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳಲ್ಲಿ ಒಬ್ಬರಾಗಿದ್ದೀರಿ, ಆದ್ದರಿಂದ ನಾನು ನಿಮ್ಮಲ್ಲಿ ಕೇಳಲು ಬಂದಿದ್ದೇನೆ. ಅವರು ಆ ವಿಷಯದಲ್ಲಿ ಹೇಳುವುದನ್ನು ನೀವು ಕೇಳಿದ್ದೀರಾ?" ಅವರು ಹೇಳಿದರು: "ಹೌದು. ನಾವು ಪ್ರಯಾಣದಲ್ಲಿದ್ದಾಗ ಅಥವಾ ಪ್ರಯಾಣಿಕರಾಗಿದ್ದಾಗ, ಜನಾಬತ್ (ದೊಡ್ಡ ಅಶುದ್ಧಿ) ಹೊರತುಪಡಿಸಿ, ಮಲ, ಮೂತ್ರ ಮತ್ತು ನಿದ್ರೆಯಂತಹ (ಸಣ್ಣ ಅಶುದ್ಧಿ) ಗಳಿಗಾಗಿ ಮೂರು ಹಗಲು ಮತ್ತು ರಾತ್ರಿಗಳವರೆಗೆ (72 ತಾಸು) ನಮ್ಮ ಪಾದರಕ್ಷೆಗಳನ್ನು ಕಳಚಬಾರದೆಂದು ಅವರು ನಮಗೆ ಆದೇಶಿಸುತ್ತಿದ್ದರು". ನಾನು ಕೇಳಿದೆ: "ಸ್ವೇಚ್ಛೆಯ(ಹವಾ) ವಿಷಯದಲ್ಲಿ ಅವರು ಏನನ್ನಾದರೂ ಹೇಳುವುದನ್ನು ನೀವು ಕೇಳಿದ್ದೀರಾ?" ಅವರು ಹೇಳಿದರು: "ಹೌದು. ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದೆವು. ನಾವು ಅವರ ಬಳಿ ಇದ್ದಾಗ, ಒಬ್ಬ ಗ್ರಾಮೀಣ ವ್ಯಕ್ತಿ ಗಟ್ಟಿಯಾದ ಧ್ವನಿಯಲ್ಲಿ ಕೂಗುತ್ತಾ, 'ಓ ಮುಹಮ್ಮದ್!' ಎಂದು ಕರೆದನು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನ ಧ್ವನಿಯಂತೆಯೇ (ಗಟ್ಟಿಯಾಗಿ) ಉತ್ತರಿಸಿದರು: ‘ನಾನು ಇಲ್ಲಿದ್ದೇನೆ’. ನಾವು ಅವನಿಗೆ ಹೇಳಿದೆವು: 'ನಿನಗೆ ವಿನಾಶ ಕಾದಿದೆ! ನಿನ್ನ ಧ್ವನಿಯನ್ನು ತಗ್ಗಿಸು, ಏಕೆಂದರೆ ನೀನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಇದ್ದೀಯಾ. ನಿನಗೆ ಹೀಗೆ ಮಾಡುವುದನ್ನು ನಿಷೇಧಿಸಲಾಗಿದೆ'. ಅವನು ಹೇಳಿದನು: 'ಅಲ್ಲಾಹನಾಣೆ, ನಾನು (ಧ್ವನಿಯನ್ನು) ತಗ್ಗಿಸುವುದಿಲ್ಲ'. (ನಂತರ) ಆ ಗ್ರಾಮೀಣ ವ್ಯಕ್ತಿ ಹೇಳಿದನು: 'ಒಬ್ಬ ವ್ಯಕ್ತಿಯು ಒಂದು ಜನಸಮುದಾಯವನ್ನು ಪ್ರೀತಿಸುತ್ತಾನೆ. ಆದರೆ (ಕರ್ಮಗಳಲ್ಲಿ) ಅವರನ್ನು ತಲುಪಲು ಅವನಿಗೆ ಸಾಧ್ಯವಾಗಿರುವುದಿಲ್ಲ (ಅವನ ಗತಿಯೇನು?)'. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: 'ಆ ವ್ಯಕ್ತಿಯು ಪುನರುತ್ಥಾನ ದಿನದಂದು ತಾನು ಪ್ರೀತಿಸಿದವರೊಂದಿಗೆ ಇರುತ್ತಾನೆ' ". (ಝಿರ್ ಹೇಳುತ್ತಾರೆ): ನಂತರ ಅವರು (ಸಫ್ವಾನ್) ಮಾತನಾಡುತ್ತಲೇ ಇದ್ದರು. ಕೊನೆಗೆ ಅವರು ಪಶ್ಚಿಮ ದಿಕ್ಕಿನ ಒಂದು ಬಾಗಿಲಿನ ಬಗ್ಗೆ ಉಲ್ಲೇಖಿಸಿದರು. ಅದರ ಅಗಲವು (ಅಥವಾ ಅದರ ಅಗಲದಲ್ಲಿ ಸವಾರನು ಪ್ರಯಾಣಿಸಿದರೆ) ನಲವತ್ತು ಅಥವಾ ಎಪ್ಪತ್ತು ವರ್ಷಗಳ ದಾರಿಯಷ್ಟಿದೆ.
[صحيح] - [رواه الترمذي وابن ماجه وأحمد] - [سنن الترمذي - 3535]
ಝಿರ್ ಇಬ್ನ್ ಹುಬೈಶ್ ರವರು ಸಫ್ವಾನ್ ಇಬ್ನ್ ಅಸ್ಸಾಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಗೆ 'ಖುಫ್ಫ್'ಗಳ (ಪಾದರಕ್ಷೆಗಳ) ಮೇಲೆ ಸವರುವ ಬಗ್ಗೆ ಕೇಳಲು ಬಂದರು. ಆಗ ಸಫ್ವಾನ್ ಕೇಳಿದರು: ಓ ಝಿರ್, ನೀನು ಇಲ್ಲಿಗೆ ಬರಲು ಕಾರಣವೇನು? ಝಿರ್ ಹೇಳಿದರು: ಜ್ಞಾನವನ್ನು ಅರಸಿ ಬಂದಿದ್ದೇನೆ. ಸಫ್ವಾನ್ ಹೇಳಿದರು: ಖಂಡಿತವಾಗಿಯೂ ಮಲಕ್‌ಗಳು (ದೇವದೂತರು) ಜ್ಞಾನವನ್ನು ಅರಸುವವನಿಗಾಗಿ, ಅವನು ಮಾಡುತ್ತಿರುವುದನ್ನು ಮೆಚ್ಚಿಕೊಂಡು ಮತ್ತು ಗೌರವದಿಂದ ತಮ್ಮ ರೆಕ್ಕೆಗಳನ್ನು ಹಾಸುತ್ತಾರೆ. ಆಗ ಝಿರ್ ಹೇಳಿದರು: ಮಲಮೂತ್ರ ವಿಸರ್ಜನೆಯ ನಂತರ 'ಖುಫ್ಫ್'ಗಳ (ಪಾದರಕ್ಷೆಗಳ) ಮೇಲೆ ಸವರುವುದರ ಬಗ್ಗೆ ನನ್ನ ಮನಸ್ಸಿನಲ್ಲಿ ಗೊಂದಲವಿದೆ. ನೀವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳಲ್ಲಿ ಒಬ್ಬರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ವಿಷಯದಲ್ಲಿ ಏನನ್ನಾದರೂ ಹೇಳುವುದನ್ನು ನೀವು ಕೇಳಿದ್ದೀರಾ ಎಂದು ವಿಚಾರಿಸಲು ನಾನು ಬಂದಿದ್ದೇನೆ. ಸಫ್ವಾನ್ ಹೇಳಿದರು: ಹೌದು. ನಾವು ಪ್ರಯಾಣಿಕರಾಗಿದ್ದಾಗ, ಮಲ, ಮೂತ್ರ ಮತ್ತು ನಿದ್ರೆಯಂತಹ ಸಣ್ಣ ಅಶುದ್ಧಿಗಳಿಂದ (ಶುದ್ಧೀಕರಿಸಿಕೊಳ್ಳಲು) ಮೂರು ಹಗಲು ಮತ್ತು ರಾತ್ರಿಗಳವರೆಗೆ ನಮ್ಮ ಪಾದರಕ್ಷೆಗಳನ್ನು ಕಳಚಬಾರದೆಂದು ಅವರು ನಮಗೆ ಆದೇಶಿಸುತ್ತಿದ್ದರು. ಆದರೆ ಜನಾಬತ್ (ಸಂಭೋಗ ಅಥವಾ ಸ್ಖಲನದಿಂದ ಉಂಟಾಗುವ ದೊಡ್ಡ ಅಶುದ್ಧಿ) ಉಂಟಾದರೆ, ಆಗ ಕಳಚುವುದು ಕಡ್ಡಾಯವಾಗಿದೆ. ನಾನು (ಝಿರ್) ಕೇಳಿದೆನು: ಪ್ರೀತಿಯ ವಿಷಯದಲ್ಲಿ ಅವರು ಏನನ್ನಾದರೂ ಹೇಳುವುದನ್ನು ನೀವು ಕೇಳಿದ್ದೀರಾ? ಅವರು (ಸಫ್ವಾನ್) ಹೇಳಿದರು: ಹೌದು. ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಯಾಣದಲ್ಲಿದ್ದೆವು. ನಾವು ಅವರ ಬಳಿ ಇದ್ದಾಗ ಒಬ್ಬ ಗ್ರಾಮೀಣ ಅರಬ್ಬ ಜೋರು ಧ್ವನಿಯಲ್ಲಿ: 'ಓ ಮುಹಮ್ಮದ್' ಎಂದು ಕರೆದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನ ಧ್ವನಿಯಂತೆಯೇ ಜೋರು ಧ್ವನಿಯಲ್ಲಿ: 'ಬನ್ನಿ' ಎಂದು ಉತ್ತರಿಸಿದರು. ನಾವು ಅವನಿಗೆ ಹೇಳಿದೆವು: ನಿನಗೆ ವಿನಾಶ ಕಾದಿದೆ, ನಿನ್ನ ಧ್ವನಿಯನ್ನು ತಗ್ಗಿಸು, ಏಕೆಂದರೆ ನೀನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಇದ್ದೀಯಾ. ಅವರ ಸನ್ನಿಧಿಯಲ್ಲಿ ಧ್ವನಿ ಏರಿಸುವುದನ್ನು ನಿಷೇಧಿಸಲಾಗಿದೆ. ಆದರೆ ಅವನು ತನ್ನ ಒರಟು ಸ್ವಭಾವದಿಂದಾಗಿ: 'ಅಲ್ಲಾಹನಾಣೆ, ನಾನು ಧ್ವನಿಯನ್ನು ತಗ್ಗಿಸುವುದಿಲ್ಲ' ಎಂದು ಹೇಳಿದನು. ಆ ಗ್ರಾಮೀಣ ವ್ಯಕ್ತಿ ಕೇಳಿದನು: ಓ ಅಲ್ಲಾಹನ ಸಂದೇಶವಾಹಕರೇ, ಒಬ್ಬ ವ್ಯಕ್ತಿಯು ಸಜ್ಜನರನ್ನು (ಸಾಲಿಹೀನ್) ಪ್ರೀತಿಸುತ್ತಾನೆ. ಆದರೆ ಅವರ ಕಾರ್ಯಗಳಂತಹ ಕಾರ್ಯಗಳನ್ನು ಮಾಡಲು ಅವನಿಗೆ ಸಾಧ್ಯವಾಗಿಲ್ಲ (ಅವನ ಗತಿಯೇನು)? ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಆ ವ್ಯಕ್ತಿಯು ಪುನರುತ್ಥಾನ ದಿನದಂದು ತಾನು ಪ್ರೀತಿಸಿದವರೊಂದಿಗೆ ಇರುತ್ತಾನೆ. ಝಿರ್ ಹೇಳುತ್ತಾರೆ: ನಂತರ ಸಫ್ವಾನ್ ಮಾತನಾಡುತ್ತಲೇ ಇದ್ದರು. ಕೊನೆಗೆ ಅವರು ಶಾಮ್ (ಸಿರಿಯಾ) ದಿಕ್ಕಿನಲ್ಲಿರುವ ತೌಬಾ (ಪಶ್ಚಾತ್ತಾಪ)ದ ಬಾಗಿಲಿನ ಬಗ್ಗೆ ಉಲ್ಲೇಖಿಸಿದರು. ಅಲ್ಲಾಹು ಆಕಾಶಗಳು ಮತ್ತು ಭೂಮಿಯನ್ನು ಸೃಷ್ಟಿಸಿದ ದಿನವೇ ಅದನ್ನು ಸೃಷ್ಟಿಸಿದ್ದಾನೆ. ಸವಾರನು ಅದರ ಅಗಲದಲ್ಲಿ ನಲವತ್ತು ಅಥವಾ ಎಪ್ಪತ್ತು ವರ್ಷಗಳ ಕಾಲ ಪ್ರಯಾಣಿಸಬಹುದು.ಸೂರ್ಯನು ಪಶ್ಚಿಮದಿಂದ ಉದಯಿಸುವವರೆಗೆ ಅದು ಮುಚ್ಚಲ್ಪಡುವುದಿಲ್ಲ.