عَنْ أَبِي الحَوْرَاءِ السَّعْدِيِّ قَالَ: قُلْتُ لِلْحَسَنِ بْنِ عَلِيٍّ رضي الله عنهما: مَا حَفِظْتَ مِنْ رَسُولِ اللهِ صَلَّى اللَّهُ عَلَيْهِ وَسَلَّمَ؟ قَالَ: حَفِظْتُ مِنْ رَسُولِ اللهِ صَلَّى اللَّهُ عَلَيْهِ وَسَلَّمَ:
«دَعْ مَا يَرِيبُكَ إِلَى مَا لاَ يَرِيبُكَ، فَإِنَّ الصِّدْقَ طُمَأْنِينَةٌ، وَإِنَّ الكَذِبَ رِيبَةٌ».
[صحيح] - [رواه الترمذي والنسائي وأحمد] - [سنن الترمذي: 2518]
المزيــد ...
ಅಬೂ ಹೌರಾ ಸಅದಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಹಸನ್ ಬಿನ್ ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಕೇಳಿದೆ: "ನೀವು ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏನು ಕಂಠಪಾಠ ಮಾಡಿದ್ದೀರಿ?" ಅವರು ಹೇಳಿದರು: "ನಾನು ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಮಾತನ್ನು ಕಂಠಪಾಠ ಮಾಡಿದ್ದೇನೆ:
ಸಂಶಯವಿರುವ ವಿಷಯಗಳನ್ನು ಬಿಟ್ಟು ಸಂಶಯವಿಲ್ಲದ ವಿಷಯಗಳನ್ನು ಸ್ವೀಕರಿಸಿರಿ. ಏಕೆಂದರೆ, ಸತ್ಯವು ನಿಶ್ಚಿಂತೆಯಾಗಿದೆ ಮತ್ತು ಸುಳ್ಳು ಸಂಶಯವಾಗಿದೆ."
[صحيح] - - [سنن الترمذي - 2518]
ಮಾತು ಮತ್ತು ಕರ್ಮಗಳ ಪೈಕಿ ನಿಷೇಧಿಸಲಾಗಿದೆಯೋ ಇಲ್ಲವೋ, ಧರ್ಮನಿಷಿದ್ಧವೋ ಅಥವಾ ಧರ್ಮಸಮ್ಮತವೋ ಎಂಬ ಸಂಶಯವಿರುವವುಗಳನ್ನು ಬಿಟ್ಟು, ಉತ್ತಮ ಮತ್ತು ಧರ್ಮಸಮ್ಮತವೆಂದು ದೃಢವಾಗಿ ತಿಳಿದಿರುವವುಗಳನ್ನು ಮಾಡಿರಿ ಎಂದು ಪ್ರವಾದಿಯವರು ಇಲ್ಲಿ ಆಜ್ಞಾಪಿಸುತ್ತಿದ್ದಾರೆ. ಏಕೆಂದರೆ, ಇಂತಹ ವಿಷಯಗಳನ್ನು ಮಾಡುವಾಗ ಹೃದಯವು ನಿಶ್ಚಿಂತ ಮತ್ತು ಶಾಂತವಾಗಿರುತ್ತದೆ. ಆದರೆ ಸಂಶಯವಿರುವ ಕಾರ್ಯಗಳನ್ನು ಮಾಡುವಾಗ, ಹೃದಯದಲ್ಲಿ ಆತಂಕ ಮತ್ತು ಹಿಂಜರಿಕೆಯಿರುತ್ತದೆ.