عَنْ المُغِيرَةِ رضي الله عنه قَالَ:
كُنْتُ مَعَ النَّبِيِّ صَلَّى اللهُ عَلَيْهِ وَسَلَّمَ فِي سَفَرٍ، فَأَهْوَيْتُ لِأَنْزِعَ خُفَّيْهِ، فَقَالَ: «دَعْهُمَا، فَإِنِّي أَدْخَلْتُهُمَا طَاهِرَتَيْنِ» فَمَسَحَ عَلَيْهِمَا.
[صحيح] - [متفق عليه] - [صحيح البخاري: 206]
المزيــد ...
ಮುಗೀರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಒಮ್ಮೆ ಒಂದು ಯಾತ್ರೆಯಲ್ಲಿ ನಾನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದೆ. ಆಗ ನಾನು ಅವರ ಪಾದರಕ್ಷೆಗಳನ್ನು ಕಳಚಲು ಮುಂದಾದೆ. ಆಗ ಅವರು ಹೇಳಿದರು: "ಅವುಗಳನ್ನು ಬಿಟ್ಟುಬಿಡಿ. ನಾವು ಅವುಗಳನ್ನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಧರಿಸಿದ್ದೆ." ನಂತರ ಅವರು ಅವುಗಳ ಮೇಲೆ ಸವರಿದರು.
[صحيح] - [متفق عليه] - [صحيح البخاري - 206]
ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಯಾತ್ರೆಯಲ್ಲಿದ್ದಾಗ ವುದೂ (ಅಂಗಸ್ನಾನ) ನಿರ್ವಹಿಸಿದರು. ಅವರು ಕಾಲು ತೊಳೆಯುವ ಹಂತಕ್ಕೆ ತಲುಪಿದಾಗ, ಅವರು ಕಾಲು ತೊಳೆಯುವುದಕ್ಕಾಗಿ ಅವರ ಕಾಲಲ್ಲಿದ್ದ ಪಾದರಕ್ಷೆಯನ್ನು ಕಳಚಲು ಮುಗೀರ ಬಿನ್ ಶುಅಬ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಕೈ ಚಾಚಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವುಗಳನ್ನು ಬಿಟ್ಟುಬಿಡಿ, ಕಳಚಬೇಡಿ. ನಾನು ಶುದ್ಧಿಯಲ್ಲಿದ್ದ ಸ್ಥಿತಿಯಲ್ಲಿ ಕಾಲುಗಳಿಗೆ ಪಾದರಕ್ಷೆಗಳನ್ನು ಧರಿಸಿದ್ದೆ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲುಗಳನ್ನು ತೊಳೆಯುವ ಬದಲು ಪಾದರಕ್ಷೆಗಳ ಮೇಲೆ ಸವರಿದರು.