عَنِ النُّعْمَانِ بْنِ بَشِيرٍ رَضيَ اللهُ عنهُما قَالَ:
كُنْتُ عِنْدَ مِنْبَرِ رَسُولِ اللهِ صَلَّى اللهُ عَلَيْهِ وَسَلَّمَ، فَقَالَ رَجُلٌ: مَا أُبَالِي أَلَّا أَعْمَلَ عَمَلًا بَعْدَ الإِسْلَامِ إِلَّا أَنْ أُسْقِيَ الحَاجَّ، وَقَالَ آخَرُ: مَا أُبَالِي أَلَّا أَعْمَلَ عَمَلًا بَعْدَ الإِسْلَامِ إِلَّا أَنْ أَعْمُرَ المَسْجِدَ الحَرَامَ، وَقَالَ آخَرُ: الجِهَادُ فِي سَبِيلِ اللهِ أَفْضَلُ مِمَّا قُلْتُمْ، فَزَجَرَهُمْ عُمَرُ، وَقَالَ: لَا تَرْفَعُوا أَصْوَاتَكُمْ عِنْدَ مِنْبَرِ رَسُولِ اللهِ صَلَّى اللهُ عَلَيْهِ وَسَلَّمَ وَهُوَ يَوْمُ الجُمُعَةِ، وَلَكِنْ إِذَا صَلَّيْتُ الجُمُعَةَ دَخَلْتُ فَاسْتَفْتَيْتُهُ فِيمَا اخْتَلَفْتُمْ فِيهِ، فَأَنْزَلَ اللهُ عَزَّ وَجَلَّ: {أَجَعَلْتُمْ سِقَايَةَ الْحَاجِّ وَعِمَارَةَ الْمَسْجِدِ الْحَرَامِ كَمَنْ آمَنَ بِاللهِ وَالْيَوْمِ الْآخِرِ} [التوبة: 19] الآيَةَ إِلَى آخِرِهَا.
[صحيح] - [رواه مسلم] - [صحيح مسلم: 1879]
المزيــد ...
ನುಅಮಾನ್ ಇಬ್ನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ (ಪ್ರವಚನ ಪೀಠ) ಬಳಿ ಇದ್ದೆ. ಆಗ ಒಬ್ಬ ವ್ಯಕ್ತಿ ಹೇಳಿದರು: "ನಾನು ಇಸ್ಲಾಂ ಸ್ವೀಕರಿಸಿದ ನಂತರ, ಹಾಜಿಗಳಿಗೆ (ಹಜ್ ಯಾತ್ರಿಕರಿಗೆ) ನೀರು ಕುಡಿಸುವ ಸೇವೆಯನ್ನು ಬಿಟ್ಟು ಬೇರೆ ಯಾವ ಕೆಲಸ ಮಾಡದಿದ್ದರೂ ನನಗೇನೂ ಚಿಂತೆಯಿಲ್ಲ (ಅದೇ ಸಾಕು)." ಇನ್ನೊಬ್ಬರು ಹೇಳಿದರು: "ನಾನು ಇಸ್ಲಾಂ ಸ್ವೀಕರಿಸಿದ ನಂತರ, ಮಸ್ಜಿದುಲ್ ಹರಾಮ್‌ನ (ಕಅಬಾ ಮಸೀದಿಯ) ನಿರ್ವಹಣೆ ಮಾಡುವುದನ್ನು ಬಿಟ್ಟು ಬೇರೆ ಯಾವ ಕೆಲಸ ಮಾಡದಿದ್ದರೂ ನನಗೇನೂ ಚಿಂತೆಯಿಲ್ಲ." ಇನ್ನೊಬ್ಬರು ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಜಿಹಾದ್ (ಹೋರಾಟ) ಮಾಡುವುದು ನೀವು ಹೇಳಿದ್ದಕ್ಕಿಂತ ಶ್ರೇಷ್ಠವಾಗಿದೆ." ಆಗ ಉಮರ್ ರವರು ಅವರನ್ನು ಗದರಿಸಿ ಹೇಳಿದರು: "ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ ಬಳಿ ನಿಮ್ಮ ಧ್ವನಿಯನ್ನು ಏರಿಸಬೇಡಿ, ಅದಲ್ಲದೆ ಇದು ಶುಕ್ರವಾರ. ಆದರೂ, ನಾನು ಜುಮುಅ ನಮಾಝ್ ನಿರ್ವಹಿಸಿದ ನಂತರ, ಒಳಗೆ ಹೋಗಿ ನೀವು ಭಿನ್ನಾಭಿಪ್ರಾಯ ಹೊಂದಿದ ವಿಷಯದ ಬಗ್ಗೆ ಅವರಲ್ಲಿ (ಪ್ರವಾದಿಯವರಲ್ಲಿ) ತೀರ್ಪು ಕೇಳುತ್ತೇನೆ." ಆಗ ಸರ್ವಶಕ್ತನಾದ ಅಲ್ಲಾಹು ಈ ವಚನವನ್ನು ಅವತೀರ್ಣಗೊಳಿಸಿದನು: “ಹಾಜಿಗಳಿಗೆ ನೀರು ಕುಡಿಸುವುದನ್ನು ಮತ್ತು ಮಸ್ಜಿದುಲ್ ಹರಾಮ್ ಅನ್ನು ನಿರ್ವಹಿಸುವುದನ್ನು, ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸವಿಟ್ಟವರ (ಕಾರ್ಯಕ್ಕೆ) ನೀವು ಸಮಾನವಾಗಿಸಿದಿರೇನು?…” [ತೌಬಾ: 19] ವಚನದ ಕೊನೆಯವರೆಗೆ.
[صحيح] - [رواه مسلم] - [صحيح مسلم - 1879]
ನುಅಮಾನ್ ಇಬ್ನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು, ತಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ ಬಳಿ ಕುಳಿತಿದ್ದಾಗ ನಡೆದ ಘಟನೆಯನ್ನು ಉಲ್ಲೇಖಿಸಿದ್ದಾರೆ. ಅವರು ಒಬ್ಬ ವ್ಯಕ್ತಿ ಹೀಗೆ ಹೇಳುವುದನ್ನು ಕೇಳಿದರು: "ನಾನು ಇಸ್ಲಾಂ ಸ್ವೀಕರಿಸಿದ ನಂತರ, ಹಾಜಿಗಳಿಗೆ ನೀರು ಕುಡಿಸುವ ಸೇವೆಯನ್ನು ಹೊರತುಪಡಿಸಿ ಬೇರೆ ಯಾವ ಕೆಲಸ ಮಾಡದಿದ್ದರೂ ನಾನು ಚಿಂತಿಸುವುದಿಲ್ಲ." ಮತ್ತೊಬ್ಬರು ಹೇಳಿದರು: "ನಾನು ಇಸ್ಲಾಂ ಸ್ವೀಕರಿಸಿದ ನಂತರ, ಮಸ್ಜಿದುಲ್ ಹರಾಮ್ ಅನ್ನು ನಿರ್ವಹಿಸುವುದನ್ನು (ಅದರ ಸೇವೆ ಮಾಡುವುದನ್ನು) ಹೊರತುಪಡಿಸಿ ಬೇರೆ ಯಾವ ಕೆಲಸ ಮಾಡದಿದ್ದರೂ ನಾನು ಚಿಂತಿಸುವುದಿಲ್ಲ." ಮತ್ತೊಬ್ಬರು ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು ನೀವು ಹೇಳಿದ್ದಕ್ಕಿಂತ ಶ್ರೇಷ್ಠವಾಗಿದೆ." ಆಗ ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ ಬಳಿ ದ್ವನಿ ಏರಿಸಿದ್ದಕ್ಕಾಗಿ ಅವರನ್ನು ಗದರಿಸಿದರು. ಅದು ಶುಕ್ರವಾರದ ಮುಂಜಾನೆಯ ಸಮಯವಾಗಿತ್ತು. ಅವರು ಹೇಳಿದರು: "ಆದರೂ, ನಾನು ಜುಮುಅ ನಮಾಝ್ ನಿರ್ವಹಿಸಿದ ನಂತರ, ಒಳಗೆ ಹೋಗಿ ನೀವು ಭಿನ್ನಾಭಿಪ್ರಾಯ ಹೊಂದಿದ ವಿಷಯದ ಬಗ್ಗೆ ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೀರ್ಪು ಕೇಳುತ್ತೇನೆ." ಆಗ ಅಲ್ಲಾಹು ಈ ವಚನವನ್ನು ಅವತೀರ್ಣಗೊಳಿಸಿದನು:
“ಹಾಜಿಗಳಿಗೆ ನೀರು ಕುಡಿಸುವುದನ್ನು ಮತ್ತು ಮಸ್ಜಿದುಲ್ ಹರಾಮ್ ಅನ್ನು ನಿರ್ವಹಿಸುವುದನ್ನು, ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಟ್ಟು ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡಿದವರಿಗೆ ನೀವು ಸಮಾನವಾಗಿಸಿದಿರೇನು? ಅಲ್ಲಾಹನ ಬಳಿ ಅವರು ಸಮಾನರಲ್ಲ. ಮತ್ತು ಅಲ್ಲಾಹು ಅಕ್ರಮಿಗಳಾದ ಜನರಿಗೆ ಸರಿದಾರಿ ತೋರಿಸುವುದಿಲ್ಲ” [ತೌಬಾ: 19].