عن عبد الله بن عمرو رضي الله عنهما عن النبي صلى الله عليه وسلم قال:
«مَنْ قَتَلَ مُعَاهَدًا لَمْ يَرَحْ رَائِحَةَ الْجَنَّةِ، وَإِنَّ رِيحَهَا تُوجَدُ مِنْ مَسِيرَةِ أَرْبَعِينَ عَامًا».
[صحيح] - [رواه البخاري] - [صحيح البخاري: 3166]
المزيــد ...
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"(ಮುಸಲ್ಮಾನರೊಂದಿಗೆ) ಒಪ್ಪಂದದಲ್ಲಿರುವ ವ್ಯಕ್ತಿಯನ್ನು ಯಾರಾದರೂ ಕೊಂದರೆ ಅವನು ಸ್ವರ್ಗದ ಪರಿಮಳವನ್ನು ಕೂಡ ಅನುಭವಿಸಲಾರ. ಅದರ ಪರಿಮಳವನ್ನು ನಲ್ವತ್ತು ವರ್ಷಗಳ ದೂರದಿಂದಲೇ ಅನುಭವಿಸಬಹುದಾಗಿದೆ."
[صحيح] - [رواه البخاري] - [صحيح البخاري - 3166]
ಮುಸಲ್ಮಾನರೊಂದಿಗೆ ಒಪ್ಪಂದದಲ್ಲಿರುವವರನ್ನು—ಅಂದರೆ ಭದ್ರತೆ ಮತ್ತು ಸುರಕ್ಷತೆಯನ್ನು ನೀಡುವ ವಾಗ್ದಾನದ ಮೂಲಕ ಮುಸ್ಲಿಂ ದೇಶಕ್ಕೆ ಬರುವ ಮುಸ್ಲಿಮೇತರರನ್ನು) ಯಾರಾದರೂ ಕೊಂದರೆ, ನಲ್ವತ್ತು ವರ್ಷಗಳ ದೂರದಿಂದ ಅನುಭವಿಸಬಹುದಾದ ಸ್ವರ್ಗದ ಪರಿಮಳವನ್ನು ಕೂಡ ಅವರು ಅನುಭವಿಸಲಾರರು ಎಂಬ ತೀವ್ರ ಮತ್ತು ಕಠೋರ ಎಚ್ಚರಿಕೆಯನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಿದ್ದಾರೆ.