عَن عَائِشَةَ أُمِّ المؤْمِنين رضي الله عنها زَوْجَ النَّبِيِّ صَلَّى اللهُ عَلَيْهِ وَسَلَّمَ حَدَّثَتْهُ قَالَتْ:
جَاءَتْنِي امْرَأَةٌ مَعَهَا ابْنَتَانِ تَسْأَلُنِي، فَلَمْ تَجِدْ عِنْدِي غَيْرَ تَمْرَةٍ وَاحِدَةٍ، فَأَعْطَيْتُهَا فَقَسَمَتْهَا بَيْنَ ابْنَتَيْهَا، ثُمَّ قَامَتْ فَخَرَجَتْ، فَدَخَلَ النَّبِيُّ صَلَّى اللهُ عَلَيْهِ وَسَلَّمَ فَحَدَّثْتُهُ، فَقَالَ: «مَنْ يَلِي مِنْ هَذِهِ البَنَاتِ شَيْئًا، فَأَحْسَنَ إِلَيْهِنَّ، كُنَّ لَهُ سِتْرًا مِنَ النَّارِ».
[صحيح] - [متفق عليه] - [صحيح البخاري: 5995]
المزيــد ...
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಹಾಗೂ ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಒಬ್ಬ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನನ್ನ ಬಳಿಗೆ (ಸಹಾಯ) ಕೇಳಲು ಬಂದಳು. ಆಗ ನನ್ನ ಬಳಿ ಒಂದು ಖರ್ಜೂರವನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ. ನಾನು ಅದನ್ನು ಅವಳಿಗೆ ಕೊಟ್ಟೆನು. ಅವಳು ಅದನ್ನು ತನ್ನ ಇಬ್ಬರು ಹೆಣ್ಣು ಮಕ್ಕಳ ನಡುವೆ ಹಂಚಿದಳು (ತಾನು ತಿನ್ನಲಿಲ್ಲ). ನಂತರ ಅವಳು ಎದ್ದು ಹೊರಟುಹೋದಳು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಮನೆಗೆ) ಪ್ರವೇಶಿಸಿದರು. ನಾನು ಅವರಿಗೆ (ನಡೆದದ್ದನ್ನು) ತಿಳಿಸಿದೆನು. ಆಗ ಅವರು ಹೇಳಿದರು: "ಯಾರು ಈ ಹೆಣ್ಣು ಮಕ್ಕಳ ಜವಾಬ್ದಾರಿಯನ್ನು ವಹಿಸುತ್ತಾನೋ ಮತ್ತು ಅವರಿಗೆ ಉತ್ತಮವಾಗಿ ಉಪಚರಿಸುತ್ತಾನೋ, ಅವರು (ಹೆಣ್ಣು ಮಕ್ಕಳು) ಅವನಿಗೆ ನರಕಕ್ಕೆ (ಹೋಗದಂತೆ) ಒಂದು ತಡೆಯಾಗುತ್ತಾರೆ".
[صحيح] - [متفق عليه] - [صحيح البخاري - 5995]
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಒಮ್ಮೆ ಒಬ್ಬ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಅವರ ಬಳಿಗೆ ಬಂದು ತಿನ್ನಲು ಏನಾದರೂ ಕೊಡಿ ಎಂದು ಕೇಳಿದಳು. ಆಯಿಷಾ ರವರ ಬಳಿ ಒಂದು ಖರ್ಜೂರವನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ. ಅವರು ಅದನ್ನು ಅವಳಿಗೆ ಕೊಟ್ಟರು. ಆಗ ಆ ಮಹಿಳೆ ಖರ್ಜೂರವನ್ನು ತನ್ನ ಇಬ್ಬರು ಹೆಣ್ಣು ಮಕ್ಕಳ ನಡುವೆ ಹಂಚಿದಳು ಮತ್ತು ಅದರಿಂದ ತಾನು ಏನನ್ನೂ ತಿನ್ನಲಿಲ್ಲ. ನಂತರ ಅವಳು ಎದ್ದು ಹೊರಟುಹೋದಳು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಮನೆಗೆ) ಪ್ರವೇಶಿಸಿದಾಗ, ಆಯಿಷಾ ಅವರಿಗೆ (ನಡೆದದ್ದನ್ನು) ತಿಳಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಯಾರು ಈ ಹೆಣ್ಣು ಮಕ್ಕಳ ಜವಾಬ್ದಾರಿಯನ್ನು ವಹಿಸಿ, ಅವರಿಗೆ ಉತ್ತಮವಾಗಿ ಉಪಚರಿಸುತ್ತಾನೋ, ಅವರಿಗೆ ಶಿಷ್ಟಾಚಾರ ಕಲಿಸುತ್ತಾನೋ, ಅವರಿಗೆ ಉಣ್ಣಲು-ಕುಡಿಯಲು ಕೊಡುತ್ತಾನೋ, ಅವರಿಗೆ ಬಟ್ಟೆ-ಬರೆಗಳನ್ನು ನೀಡುತ್ತಾನೋ ಮತ್ತು ಅವರ ವಿಷಯದಲ್ಲಿ ತಾಳ್ಮೆಯಿಂದಿರುತ್ತಾನೋ, ಅವರು (ಹೆಣ್ಣು ಮಕ್ಕಳು) ಅವನಿಗೆ ನರಕಕ್ಕೆ (ಹೋಗದಂತೆ) ಒಂದು ತಡೆ ಮತ್ತು ರಕ್ಷಾಕವಚವಾಗುತ್ತಾರೆ.