عَنْ أَبِي سَعِيدٍ الْخُدْرِيِّ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«لَتَتَّبِعُنَّ سَنَنَ الَّذِينَ مِنْ قَبْلِكُمْ، شِبْرًا بِشِبْرٍ، وَذِرَاعًا بِذِرَاعٍ، حَتَّى لَوْ دَخَلُوا فِي جُحْرِ ضَبٍّ لَاتَّبَعْتُمُوهُمْ» قُلْنَا: يَا رَسُولَ اللهِ آلْيَهُودَ وَالنَّصَارَى؟ قَالَ: «فَمَنْ؟».
[صحيح] - [متفق عليه] - [صحيح مسلم: 2669]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಶ್ಚಯವಾಗಿಯೂ ನೀವು ನಿಮಗಿಂತ ಮೊದಲಿನವರ ನಡವಳಿಕೆಗಳನ್ನು ಗೇಣು-ಗೇಣಾಗಿ ಮತ್ತು ಮೊಳ-ಮೊಳವಾಗಿ ಹಿಂಬಾಲಿಸಲಿದ್ದೀರಿ. ಎಲ್ಲಿಯವರೆಗೆಂದರೆ, ಅವರೊಂದು ಓತಿಯ ಬಿಲದೊಳಗೆ ನುಸುಳಿದರೆ ನೀವು ಕೂಡ ಅವರನ್ನು ಹಿಂಬಾಲಿಸುವಿರಿ." ನಾವು ಕೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ಅವರು ಯಹೂದಿಗಳು ಮತ್ತು ಕ್ರೈಸ್ತರೇ?" ಅವರು ಉತ್ತರಿಸಿದರು: “ಅವರಲ್ಲದೆ ಇನ್ನಾರು?"
[صحيح] - [متفق عليه] - [صحيح مسلم - 2669]
ತಮ್ಮ ಕಾಲಾನಂತರ ತಮ್ಮ ಸಮುದಾಯದ ಕೆಲವರಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುತ್ತಿದ್ದಾರೆ. ಅದೇನೆಂದರೆ, ಅವರು ಯಹೂದಿಗಳು ಮತ್ತು ಕ್ರೈಸ್ತರ ವಿಶ್ವಾಸಗಳು, ಕರ್ಮಗಳು, ಆಚಾರಗಳು ಮತ್ತು ಸಂಪ್ರದಾಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಾಚೂತಪ್ಪದೆ ಗೇಣು-ಗೇಣಾಗಿ ಮತ್ತು ಮೊಳ-ಮೊಳವಾಗಿ ಹಿಂಬಾಲಿಸುವರು. ಎಲ್ಲಿಯವರೆಗೆಂದರೆ, ಅವರೊಂದು ಓತಿಯ ಬಿಲದೊಳಗೆ ನುಸುಳಿದರೆ ಇವರು ಕೂಡ ಅವರ ಹಿಂದೆ ಅದರೊಳಗೆ ನುಸುಳುವರು.