+ -

عن ابنِ عُمَرَ رضي الله عنهما قال: قال رسولُ الله صلَّى الله عليه وسلم:
«مَن تَشَبَّهَ بِقَوْمٍ فَهُوَ مِنْهُمْ».

[حسن] - [رواه أبو داود وأحمد] - [سنن أبي داود: 4031]
المزيــد ...

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಒಂದು ಜನಸಮೂಹವನ್ನು ಅನುಕರಿಸುತ್ತಾರೋ ಅವರು ಅವರಲ್ಲಿ ಸೇರುತ್ತಾರೆ."

[حسن] - [رواه أبو داود وأحمد] - [سنن أبي داود - 4031]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸತ್ಯನಿಷೇಧಿಗಳು, ದುಷ್ಕರ್ಮಿಗಳು ಅಥವಾ ಸಜ್ಜನರನ್ನು ಅನುಕರಿಸುವವರು—ಅಂದರೆ ವಿಶೇಷವಾಗಿ ಅವರಲ್ಲಿರುವ ಯಾವುದಾದರೂ ನಂಬಿಕೆ, ಆರಾಧನೆ ಅಥವಾ ಸಂಪ್ರದಾಯವನ್ನು ಅನುಕರಿಸುವವರು ಅವರಲ್ಲಿ ಸೇರುತ್ತಾರೆ. ಏಕೆಂದರೆ ಬಾಹ್ಯವಾಗಿ ಅವರನ್ನು ಅನುಕರಿಸುವುದು ಅಂತರಂಗದಲ್ಲೂ ಅವರನ್ನು ಅನುಕರಿಸಲು ಕಾರಣವಾಗುತ್ತದೆ. ನಿಸ್ಸಂದೇಹವಾಗಿಯೂ, ಒಂದು ಜನಸಮೂಹವನ್ನು ಅನುಕರಿಸಲು ಅವರ ಬಗ್ಗೆ ಮೆಚ್ಚುಗೆಯನ್ನು ಹೊಂದಿರುವುದೇ ಕಾರಣವಾಗಿದೆ. ಇದು ಅವರನ್ನು ಪ್ರೀತಿಸಲು, ಅತಿಯಾಗಿ ಗೌರವಿಸಲು ಮತ್ತು ಅವರ ಕಡೆಗೆ ಆಕರ್ಷಿತರಾಗಲು ಕಾರಣವಾಗಬಹುದು. ಇದು ಅವರನ್ನು ಆಂತರಿಕವಾಗಿಯೂ ಮತ್ತು ಅವರು ಮಾಡುವ ಆರಾಧನೆಗಳಲ್ಲಿಯೂ ಅವನ್ನು ಅನುಕರಿಸಲು ಕಾರಣವಾಗಬಹುದು.ಅಲ್ಲಾಹು ಕಾಪಾಡಲಿ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಬರ್ಮೀ ಥಾಯ್ ಜರ್ಮನ್ ಜಪಾನೀ ಪಶ್ತೋ الأسامية الألبانية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الطاجيكية الكينياروندا الرومانية المجرية التشيكية الموري المالاجاشية الفولانية الأورومو الولوف البلغارية الأذربيجانية الأوزبكية الأوكرانية الجورجية المقدونية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಸತ್ಯನಿಷೇಧಿಗಳನ್ನು ಮತ್ತು ದುಷ್ಕರ್ಮಿಗಳನ್ನು ಅನುಕರಿಸಬಾರದೆಂದು ಈ ಹದೀಸ್ ಎಚ್ಚರಿಸುತ್ತದೆ.
  2. ಸಜ್ಜನರನ್ನು ಅನುಕರಿಸಲು ಮತ್ತು ಅವರ ಮಾದರಿಯನ್ನು ಸ್ವೀಕರಿಸಲು ಈ ಹದೀಸ್ ಒತ್ತಾಯಿಸುತ್ತದೆ.
  3. ಬಾಹ್ಯ ಅನುಕರಣೆಯು ಆಂತರಿಕ ಪ್ರೀತಿಗೆ ಕಾರಣವಾಗುತ್ತದೆ.
  4. ಮನುಷ್ಯನ ಪಾಪ ಮತ್ತು ಶಿಕ್ಷೆಯು ಅವನು ಮಾಡುವ ಅನುಕರಣೆಯ ವಿಧ ಮತ್ತು ತೀವ್ರತೆಗೆ ಅನುಗುಣವಾಗಿರುತ್ತದೆ.
  5. ಸತ್ಯನಿಷೇಧಿಗಳ ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಅನುಕರಿಸುವುದನ್ನು ಈ ಹದೀಸ್ ವಿರೋಧಿಸುತ್ತದೆ. ಆದರೆ ಅವರ ಧರ್ಮಕ್ಕೆ ಸೀಮಿತವಲ್ಲದ ಇತರ ಕಾರ್ಯಗಳನ್ನು ಕಲಿಯುವುದು—ಉದಾಹರಣೆಗೆ, ಕರಕುಶಲ ತರಬೇತಿ—ಈ ವಿರೋಧದಲ್ಲಿ ಒಳಪಡುವುದಿಲ್ಲ.
ಇನ್ನಷ್ಟು