عَنْ أَبِي هُرَيْرَةَ رضي الله عنه أَنَّ رَسُولَ اللهِ صلى الله عليه وسلم قَالَ:
«إِذَا مَاتَ الْإِنْسَانُ انْقَطَعَ عَنْهُ عَمَلُهُ إِلَّا مِنْ ثَلَاثَةٍ: إِلَّا مِنْ صَدَقَةٍ جَارِيَةٍ، أَوْ عِلْمٍ يُنْتَفَعُ بِهِ، أَوْ وَلَدٍ صَالِحٍ يَدْعُو لَهُ».
[صحيح] - [رواه مسلم] - [صحيح مسلم: 1631]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಬ್ಬ ವ್ಯಕ್ತಿ ಅಸುನೀಗಿದರೆ ಅವನ ಕರ್ಮಗಳೆಲ್ಲವೂ ಮುಕ್ತಾಯವಾಗುತ್ತವೆ. ಆದರೆ ಮೂರು ವಿಷಯಗಳು ಇದಕ್ಕೆ ಹೊರತಾಗಿವೆ. ನಡೆಯುತ್ತಿರುವ ದಾನ-ಧರ್ಮಗಳು, ಪ್ರಯೋಜನಪಡೆಯಲಾಗುತ್ತಿರುವ ಜ್ಞಾನಗಳು ಮತ್ತು ಅವನಿಗಾಗಿ ಪ್ರಾರ್ಥಿಸುವ ಅವನ ನೀತಿವಂತ ಮಕ್ಕಳು."
[صحيح] - [رواه مسلم] - [صحيح مسلم - 1631]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮರಣಹೊಂದಿದ ವ್ಯಕ್ತಿಯ ಕರ್ಮಗಳು ಅವನ ಮರಣದೊಂದಿಗೆ ಮುಕ್ತಾಯವಾಗುತ್ತವೆ. ಮರಣಾನಂತರ ಅವನ ಹೆಸರಲ್ಲಿ ಯಾವುದೇ ಸತ್ಕರ್ಮಗಳನ್ನು ದಾಖಲಿಸಲಾಗುವುದಿಲ್ಲ. ಆದರೆ, ಈ ಮೂರು ವಿಷಯಗಳು ಇದಕ್ಕೆ ಹೊರತಾಗಿವೆ. ಏಕೆಂದರೆ, ಇವು ಸಂಭವಿಸಲು ಅವನು ಕಾರಣಕರ್ತನಾಗಿದ್ದನು.
ಒಂದು: ನಿರಂತರ ಮತ್ತು ಶಾಶ್ವತವಾಗಿ ಪ್ರತಿಫಲ ನೀಡುತ್ತಿರುವ ದಾನಧರ್ಮಗಳು. ಉದಾಹರಣೆಗೆ, ವಕ್ಫ್, ಮಸೀದಿ ನಿರ್ಮಾಣ, ಬಾವಿ ತೋಡುವುದು ಇತ್ಯಾದಿ.
ಎರಡು: ಜನರು ಪ್ರಯೋಜನ ಪಡೆಯುತ್ತಿರುವ ಜ್ಞಾನ. ಉದಾಹರಣೆಗೆ, ಜ್ಞಾನದ ಪುಸ್ತಕಗಳನ್ನು ಬರೆಯುವುದು, ಜ್ಞಾನವನ್ನು ಇತರರಿಗೆ ಕಲಿಸಿಕೊಡುವುದು, ಮತ್ತು ಇವನ ಮರಣಾನಂತರ ಅವರು ಅದನ್ನು ಇತರರಿಗೆ ಕಲಿಸಿಕೊಡುವುದು ಇತ್ಯಾದಿ.
ಮೂರು: ತನ್ನ ಮಾತಾಪಿತರಿಗಾಗಿ ಪ್ರಾರ್ಥಿಸುತ್ತಿರುವ ಸತ್ಯವಿಶ್ವಾಸಿಗಳಾದ ನೀತಿವಂತ ಮಕ್ಕಳು.