ಉಪವರ್ಗಗಳು

ಹದೀಸ್‌ಗಳ ಪಟ್ಟಿ

ಅಲ್ಲಾಹು ಯಾರಿಗೆ ಒಳಿತನ್ನು ಬಯಸುತ್ತಾನೋ ಅವನಿಗೆ ಧಾರ್ಮಿಕ ವಿಷಯಗಳಲ್ಲಿ ಪಾಂಡಿತ್ಯವನ್ನು ನೀಡುತ್ತಾನೆ
عربي ಆಂಗ್ಲ ಉರ್ದು
ನಾನು ನಿಮ್ಮಿಂದ ಆಣೆ ಮಾಡಿಸಿದ್ದು ನಿಮ್ಮ ಮೇಲೆ ಅಪವಾದ ಹೊರಿಸುವುದಕ್ಕಲ್ಲ. ಬದಲಿಗೆ, ಸರ್ವಶಕ್ತನಾದ ಅಲ್ಲಾಹು ದೇವದೂತರ ಸಮ್ಮುಖದಲ್ಲಿ ನಿಮ್ಮ ಬಗ್ಗೆ ಹೇಳಿ ಹೆಮ್ಮೆಪಡುತ್ತಿದ್ದಾನೆಂದು ಜಿಬ್ರೀಲ್ ಬಂದು ನನಗೆ ತಿಳಿಸಿದರು
عربي ಆಂಗ್ಲ ಉರ್ದು
“ನಿಶ್ಚಯವಾಗಿಯೂ ಜ್ಞಾನ ಎತ್ತಲಾಗುವುದು, ಅಜ್ಞಾನ ಹೆಚ್ಚಾಗುವುದು, ವ್ಯಭಿಚಾರ ಹೆಚ್ಚಾಗುವುದು, ಮಧ್ಯಪಾನ ಹೆಚ್ಚಾಗುವುದು, ಪುರುಷರು ಕಡಿಮೆಯಾಗಿ ಮಹಿಳೆಯರು ಹೆಚ್ಚಾಗುವುದು, ಎಲ್ಲಿಯವರೆಗೆಂದರೆ ಐವತ್ತು ಮಹಿಳೆಯರನ್ನು ನೋಡಿಕೊಳ್ಳಲು ಒಬ್ಬ ಪುರುಷ ಮಾತ್ರವಿರುವುದು ಪ್ರಳಯದ ಚಿಹ್ನೆಗಳಾಗಿವೆ
عربي ಆಂಗ್ಲ ಉರ್ದು
ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ವಿಷಯವನ್ನು ಪ್ರಸ್ತಾಪಿಸುತ್ತಾ ಹೇಳಿದರು: "ಅದು ಜ್ಞಾನವು ಹೊರಟುಹೋಗುವ ಸಮಯದಲ್ಲಾಗಿದೆ
عربي ಆಂಗ್ಲ ಉರ್ದು
ವಿದ್ವಾಂಸರ ನಡುವೆ ಮೆರೆಯಲು, ಅಥವಾ ಅವಿವೇಕಿಗಳೊಡನೆ ತರ್ಕಿಸಲು, ಅಥವಾ ಸಭೆಗಳಲ್ಲಿ ಶ್ರೇಷ್ಠ ಸ್ಥಾನಮಾನ ಪಡೆಯಲು ಜ್ಞಾನವನ್ನು ಕಲಿಯಬೇಡಿ
عربي ಆಂಗ್ಲ ಉರ್ದು
ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ನಂತರ ಆ ಹತ್ತು ವಚನಗಳಲ್ಲಿರುವ ಜ್ಞಾನ ಮತ್ತು ಕರ್ಮವನ್ನು ಕಲಿತುಕೊಳ್ಳದೆ ಅವರು ಮುಂದಿನ ಹತ್ತು ವಚನಗಳಿಗೆ ಹೋಗುತ್ತಿರಲಿಲ್ಲ
عربي ಆಂಗ್ಲ ಉರ್ದು
ಓ ಅಬೂ ಮುಂದಿರ್! ನಿಮ್ಮ ಕೈಯಲ್ಲಿರುವ ಅಲ್ಲಾಹನ ಗ್ರಂಥದಲ್ಲಿ ಅತಿ ಶ್ರೇಷ್ಠವಾದ ವಚನ ಯಾವುದೆಂದು ನಿಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಲಾ ಇಲಾಹ ಇಲ್ಲಾ ಹುವಲ್ ಹಯ್ಯುಲ್ ಕಯ್ಯೂಮ್ (ಆಯತುಲ್ ಕುರ್ಸಿ) [ಬಕರ: 255]". ಆಗ ಅವರು ನನ್ನ ಎದೆಗೆ ತಟ್ಟುತ್ತಾ ಹೇಳಿದರು: "ಅಲ್ಲಾಹನಾಣೆ! ಓ ಅಬೂ ಮುಂದಿರ್, ಜ್ಞಾನವು ನಿಮಗೆ ಸಂತೋಷವನ್ನು ದಯಪಾಲಿಸಲಿ
عربي ಆಂಗ್ಲ ಉರ್ದು
ಒಬ್ಬ ವ್ಯಕ್ತಿ ಅಸುನೀಗಿದರೆ ಅವನ ಕರ್ಮಗಳೆಲ್ಲವೂ ಮುಕ್ತಾಯವಾಗುತ್ತವೆ. ಆದರೆ ಮೂರು ವಿಷಯಗಳು ಇದಕ್ಕೆ ಹೊರತಾಗಿವೆ. ನಡೆಯುತ್ತಿರುವ ದಾನ-ಧರ್ಮಗಳು, ಪ್ರಯೋಜನಪಡೆಯಲಾಗುತ್ತಿರುವ ಜ್ಞಾನಗಳು ಮತ್ತು ಅವನಿಗಾಗಿ ಪ್ರಾರ್ಥಿಸುವ ಅವನ ನೀತಿವಂತ ಮಕ್ಕಳು
عربي ಆಂಗ್ಲ ಉರ್ದು
ಯಾರು ಒಬ್ಬ ಸತ್ಯವಿಶ್ವಾಸಿಯಿಂದ ಇಹಲೋಕದ ಕಷ್ಟಗಳಲ್ಲಿ ಒಂದು ಕಷ್ಟವನ್ನು ನಿವಾರಿಸುತ್ತಾನೋ, ಅಲ್ಲಾಹು ಪುನರುತ್ಥಾನದ ದಿನದ ಕಷ್ಟಗಳಲ್ಲಿ ಒಂದು ಕಷ್ಟವನ್ನು ಅವನಿಂದ ನಿವಾರಿಸುತ್ತಾನೆ
عربي ಆಂಗ್ಲ ಉರ್ದು
ನಮ್ಮಿಂದ ಏನನ್ನಾದರೂ ಕೇಳಿ ಅದನ್ನು ಕೇಳಿದಂತೆಯೇ ತಲುಪಿಸಿದ ವ್ಯಕ್ತಿಯ ಮುಖವನ್ನು ಅಲ್ಲಾಹು ಪ್ರಕಾಶಮಾನವಾಗಿಡಲಿ. ಏಕೆಂದರೆ ಕೆಲವೊಮ್ಮೆ ತಲುಪಿಸುವವನು ಕೇಳಿದವನಿಗಿಂತ ಹೆಚ್ಚು ಗ್ರಹಿಸುವ ಶಕ್ತಿಯನ್ನು ಹೊಂದಿರಬಹುದು
عربي ಆಂಗ್ಲ ಉರ್ದು