+ -

عَنْ أَبِي سَعِيدٍ الْخُدْرِيِّ قَالَ: خَرَجَ مُعَاوِيَةُ عَلَى حَلْقَةٍ فِي الْمَسْجِدِ، فَقَالَ: مَا أَجْلَسَكُمْ؟ قَالُوا: جَلَسْنَا نَذْكُرُ اللهَ، قَالَ آللَّهِ مَا أَجْلَسَكُمْ إِلَّا ذَاكَ؟ قَالُوا: وَاللهِ مَا أَجْلَسَنَا إِلَّا ذَاكَ، قَالَ: أَمَا إِنِّي لَمْ أَسْتَحْلِفْكُمْ تُهْمَةً لَكُمْ، وَمَا كَانَ أَحَدٌ بِمَنْزِلَتِي مِنْ رَسُولِ اللهِ صَلَّى اللهُ عَلَيْهِ وَسَلَّمَ أَقَلَّ عَنْهُ حَدِيثًا مِنِّي:
وَإِنَّ رَسُولَ اللهِ صَلَّى اللهُ عَلَيْهِ وَسَلَّمَ خَرَجَ عَلَى حَلْقَةٍ مِنْ أَصْحَابِهِ، فَقَالَ: «مَا أَجْلَسَكُمْ؟» قَالُوا: جَلَسْنَا نَذْكُرُ اللهَ وَنَحْمَدُهُ عَلَى مَا هَدَانَا لِلْإِسْلَامِ، وَمَنَّ بِهِ عَلَيْنَا، قَالَ: «آللَّهِ مَا أَجْلَسَكُمْ إِلَّا ذَاكَ؟» قَالُوا: وَاللهِ مَا أَجْلَسَنَا إِلَّا ذَاكَ، قَالَ: «أَمَا إِنِّي لَمْ أَسْتَحْلِفْكُمْ تُهْمَةً لَكُمْ، وَلَكِنَّهُ أَتَانِي جِبْرِيلُ فَأَخْبَرَنِي أَنَّ اللهَ عَزَّ وَجَلَّ يُبَاهِي بِكُمُ الْمَلَائِكَةَ».

[صحيح] - [رواه مسلم] - [صحيح مسلم: 2701]
المزيــد ...

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಮಸೀದಿಯಲ್ಲಿ ವೃತ್ತಾಕಾರದಲ್ಲಿ ಕುಳಿತಿರುವ ಜನರ ಬಳಿಗೆ ಹೋಗಿ ಮುಆವಿಯಾ ಕೇಳಿದರು: "ನೀವು ಇಲ್ಲಿ ಕುಳಿತುಕೊಳ್ಳಲು ಕಾರಣವೇನು?" ಅವರು ಉತ್ತರಿಸಿದರು: "ನಾವು ಅಲ್ಲಾಹನನ್ನು ಸ್ಮರಿಸಲು ಕುಳಿತಿದ್ದೇವೆ." ಅವರು ಕೇಳಿದರು: "ಅಲ್ಲಾಹನಾಣೆಗೂ ನೀವು ಇಲ್ಲಿ ಕುಳಿತುಕೊಳ್ಳಲು ಇದಲ್ಲದೆ ಬೇರೇನಾದರೂ ಕಾರಣವಿದೆಯೇ?" ಅವರು ಉತ್ತರಿಸಿದರು: "ಅಲ್ಲಾಹನಾಣೆಗೂ ನಾವು ಇಲ್ಲಿ ಕುಳಿತುಕೊಳ್ಳಲು ಇದಲ್ಲದೆ ಬೇರೆ ಕಾರಣವಿಲ್ಲ." ಅವರು ಹೇಳಿದರು: "ನಾನು ನಿಮ್ಮಿಂದ ಆಣೆ ಮಾಡಿಸಿದ್ದು ನಿಮ್ಮ ಮೇಲೆ ಅಪವಾದ ಹೊರಿಸುವುದಕ್ಕಲ್ಲ. ನನಗಿಂತ ಕಡಿಮೆ ಹದೀಸ್ ವರದಿ ಮಾಡದವರಲ್ಲಿ ಯಾರೂ ಕೂಡ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ನನಗಿರುವಷ್ಟು ಸ್ಥಾನಮಾನವನ್ನು ಹೊಂದಿಲ್ಲ.
ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವೃತ್ತಾಕಾರದಲ್ಲಿ ಕುಳಿತಿರುವ ಅವರ ಸಹಚರರ ಬಳಿಗೆ ಹೋಗಿ ಕೇಳಿದರು: "ನೀವು ಇಲ್ಲಿ ಕುಳಿತುಕೊಳ್ಳಲು ಕಾರಣವೇನು?" ಅವರು ಉತ್ತರಿಸಿದರು: "ನಾವು ಅಲ್ಲಾಹನನ್ನು ಸ್ಮರಿಸಲು ಮತ್ತು ಅವನು ನಮಗೆ ಸನ್ಮಾರ್ಗ ತೋರಿಸಿದ್ದಕ್ಕಾಗಿ ಹಾಗೂ ನಮಗೆ ಉಪಕಾರ ಮಾಡಿದ್ದಕ್ಕಾಗಿ ಅವನನ್ನು ಸ್ತುತಿಸಲು ಕುಳಿತಿದ್ದೇವೆ." ಅವರು ಕೇಳಿದರು: "ಅಲ್ಲಾಹನಾಣೆಗೂ ನೀವು ಇಲ್ಲಿ ಕುಳಿತುಕೊಳ್ಳಲು ಇದಲ್ಲದೆ ಬೇರೇನಾದರೂ ಕಾರಣವಿದೆಯೇ?" ಅವರು ಉತ್ತರಿಸಿದರು: "ಅಲ್ಲಾಹನಾಣೆಗೂ ನಾವು ಇಲ್ಲಿ ಕುಳಿತುಕೊಳ್ಳಲು ಇದಲ್ಲದೆ ಬೇರೆ ಕಾರಣವಿಲ್ಲ." ಅವರು ಹೇಳಿದರು: "ನಾನು ನಿಮ್ಮಿಂದ ಆಣೆ ಮಾಡಿಸಿದ್ದು ನಿಮ್ಮ ಮೇಲೆ ಅಪವಾದ ಹೊರಿಸುವುದಕ್ಕಲ್ಲ. ಬದಲಿಗೆ, ಸರ್ವಶಕ್ತನಾದ ಅಲ್ಲಾಹು ದೇವದೂತರ ಸಮ್ಮುಖದಲ್ಲಿ ನಿಮ್ಮ ಬಗ್ಗೆ ಹೇಳಿ ಹೆಮ್ಮೆಪಡುತ್ತಿದ್ದಾನೆಂದು ಜಿಬ್ರೀಲ್ ಬಂದು ನನಗೆ ತಿಳಿಸಿದರು."

[صحيح] - [رواه مسلم] - [صحيح مسلم - 2701]

ವಿವರಣೆ

ಒಮ್ಮೆ ಮುಆವಿಯಾ ಬಿನ್ ಅಬೂ ಸುಫ್ಯಾನ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಮಸೀದಿಯಲ್ಲಿ ವೃತ್ತಾಕಾರದಲ್ಲಿ ಕುಳಿತಿರುವ ಜನರ ಬಳಿಗೆ ಹೋಗಿ, ಅವರು ಒಟ್ಟಾಗಿ ಕುಳಿತುಕೊಳ್ಳಲು ಕಾರಣವೇನೆಂದು ವಿಚಾರಿಸಿದರು. ಅವರು ಉತ್ತರಿಸಿದರು: "ಅಲ್ಲಾಹನನ್ನು ಸ್ಮರಿಸಲು." ಅಲ್ಲಾಹನನ್ನು ಸ್ಮರಿಸುವ ಉದ್ದೇಶದಿಂದ ಮಾತ್ರ ಅವರು ಅಲ್ಲಿ ಕುಳಿತುಕೊಂಡಿದ್ದಾರೆ ಮತ್ತು ಒಟ್ಟುಗೂಡಿದ್ದಾರೆ ಎಂದು ಖಾತ್ರಿಪಡಿಸಲು ಮುಆವಿಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರೊಡನೆ ಆಣೆ ಮಾಡಲು ವಿನಂತಿಸಿದರು. ಅವರು ಆಣೆ ಮಾಡಿದರು. ನಂತರ ಅವರು ಹೇಳಿದರು: "ನಿಮ್ಮ ಮೇಲಿನ ಅಪವಾದದಿಂದ ಅಥವಾ ನಿಮ್ಮ ಪ್ರಾಮಾಣಿಕತೆಯಲ್ಲಿ ಸಂಶಯವಿರುವುದರಿಂದ ನಾನು ನಿಮ್ಮಿಂದ ಆಣೆ ಮಾಡಿಸಿಲ್ಲ." ನಂತರ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ತನಗಿರುವ ಸ್ಥಾನಮಾನವನ್ನು ಮತ್ತು ತನಗಿಂತಲೂ ಹೆಚ್ಚು ಆಪ್ತರು ಯಾರೂ ಇಲ್ಲವೆಂಬುದನ್ನು ತಿಳಿಸಿದರು. ಏಕೆಂದರೆ, ಅವರ ಸಹೋದರಿ ಉಮ್ಮು ಹಬೀಬ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿಯಾಗಿದ್ದರು. ಅದೇ ರೀತಿ ಅವರು ದೇವವಾಣಿಯ ಬರಹಗಾರರಲ್ಲಿ ಒಬ್ಬರಾಗಿದ್ದರು. ಇದರ ಹೊರತಾಗಿಯೂ ಅವರು ಅತಿ ಕಡಿಮೆ ಹದೀಸ್ ವರದಿ ಮಾಡಿದವರಾಗಿದ್ದರು. ನಂತರ ಅವರು, ಒಂದಿನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮನೆಯಿಂದ ಹೊರಟು ಬಂದಾಗ ಅವರ ಸಹಚರರು ಮಸೀದಿಯಲ್ಲಿ ಅಲ್ಲಾಹನನ್ನು ಸ್ಮರಿಸಲು ಮತ್ತು ಅವನು ಅವರಿಗೆ ಸನ್ಮಾರ್ಗ ತೋರಿಸಿದ್ದಕ್ಕಾಗಿ ಹಾಗೂ ಉಪಕಾರ ಮಾಡಿದ್ದಕ್ಕಾಗಿ ಅವನನ್ನು ಸ್ತುತಿಸಲು ಕುಳಿತಿರುವುದನ್ನು ಕಂಡರೆಂದು ಹೇಳಿದರು. ಮುಆವಿಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಮ್ಮ ಸಹಚರರೊಡನೆ ಮಾಡಿದಂತೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಸಹಚರರೊಡನೆ ಕಾರಣವನ್ನು ವಿಚಾರಿಸಿದರು ಮತ್ತು ಆಣೆ ಮಾಡಲು ಕೇಳಿಕೊಂಡರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾನು ಹೀಗೆ ವಿಚಾರಿಸಲು ಮತ್ತು ಆಣೆ ಮಾಡಿಸಲು ಕಾರಣವೇನೆಂದು ತಿಳಿಸುತ್ತಾ ಹೇಳಿದರು: ಅದೇನೆಂದರೆ, ಅವರ ಬಳಿಗೆ ದೇವದೂತ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಬಂದು, ಸರ್ವಶಕ್ತನಾದ ಅಲ್ಲಾಹು ದೇವದೂತರ ಸಮ್ಮುಖದಲ್ಲಿ ನಿಮ್ಮ ಬಗ್ಗೆ ಹೇಳಿ ಹೆಮ್ಮೆಪಡುತ್ತಿದ್ದಾನೆ, ನಿಮ್ಮ ಶ್ರೇಷ್ಠತೆಯನ್ನು ಅವರ ಮುಂದೆ ಸಾರುತ್ತಿದ್ದಾನೆ, ನಿಮ್ಮ ಉತ್ತಮ ಕರ್ಮವನ್ನು ಅವರಿಗೆ ತೋರಿಸುತ್ತಿದ್ದಾನೆ ಮತ್ತು ನಿಮ್ಮನ್ನು ಅವರ ಮುಂದೆ ಹೊಗಳುತ್ತಿದ್ದಾನೆಂದು ತಿಳಿಸಿದರು.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الدرية الصربية الصومالية الكينياروندا الرومانية المالاجاشية الأورومو
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಮುಆವಿಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ಮತ್ತು ಜ್ಞಾನವನ್ನು ತಲುಪಿಸುವ ವಿಷಯದಲ್ಲಿ ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸಲು ಅವರಿಗಿದ್ದ ಉತ್ಸಾಹವನ್ನು ತಿಳಿಸಲಾಗಿದೆ.
  2. ವಿಷಯದ ಪ್ರಾಮುಖ್ಯತೆಯ ಕಡೆಗೆ ಗಮನ ಸೆಳೆಯುವುದಕ್ಕಾಗಿ ಅಪವಾದ ಹೊರಿಸದೆ ಆಣೆ ಮಾಡಲು ವಿನಂತಿಸುವುದಕ್ಕೆ ಅನುಮತಿಯಿದೆ.
  3. ದೇವಸ್ಮರಣೆ ಮತ್ತು ಜ್ಞಾನ ಸಭೆಗಳ ಶ್ರೇಷ್ಠತೆಯನ್ನು ಮತ್ತು ಅಲ್ಲಾಹು ಅದನ್ನು ಇಷ್ಟಪಡುತ್ತಾನೆ ಹಾಗೂ ದೇವದೂತರ ಸಮ್ಮುಖದಲ್ಲಿ ಅದನ್ನು ಹೇಳಿ ಹೆಮ್ಮೆಪಡುತ್ತಾನೆಂದು ತಿಳಿಸಲಾಗಿದೆ.
ಇನ್ನಷ್ಟು