عن أبي موسى الأشعري رضي الله عنه عن النبي صلى الله عليه وسلم قال:
«مَنْ حَمَلَ عَلَيْنَا السِّلَاحَ فَلَيْسَ مِنَّا».
[صحيح] - [متفق عليه] - [صحيح البخاري: 7071]
المزيــد ...
ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಮ್ಮ ವಿರುದ್ಧ ಆಯುಧ ಎತ್ತಿದವನು ನಮ್ಮಲ್ಲಿ ಸೇರಿದವನಲ್ಲ."
[صحيح] - [متفق عليه] - [صحيح البخاري - 7071]
ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸುವುದೇನೆಂದರೆ, ಮುಸಲ್ಮಾನರನ್ನು ಹೆದರಿಸಲು, ಅಥವಾ ದೋಚಲು, ಅವರ ವಿರುದ್ಧ ಆಯುಧ ಎತ್ತುವವರು, ಯಾರು ಅನ್ಯಾಯವಾಗಿ ಇಂತಹ ಕೃತ್ಯಗಳನ್ನು ಮಾಡುತ್ತಾರೋ ಅವರು ಮಹಾ ಅಪರಾಧವನ್ನು ಮತ್ತು ಮಹಾ ಪಾಪವನ್ನು ಮಾಡುತ್ತಿದ್ದಾರೆ. ಅವರು ಈ ಉಗ್ರ ಎಚ್ಚರಿಕೆಗೆ ಅರ್ಹರಾಗುತ್ತಾರೆ.