ವರ್ಗ: The Creed . Names and Rulings . Disbelief .
+ -

عَنْ أَبِي ذَرٍّ رَضِيَ اللَّهُ عَنْهُ أَنَّهُ سَمِعَ النَّبِيَّ صَلَّى اللهُ عَلَيْهِ وَسَلَّمَ يَقُولُ:
«لاَ يَرْمِي رَجُلٌ رَجُلًا بِالفُسُوقِ، وَلاَ يَرْمِيهِ بِالكُفْرِ، إِلَّا ارْتَدَّتْ عَلَيْهِ، إِنْ لَمْ يَكُنْ صَاحِبُهُ كَذَلِكَ».

[صحيح] - [متفق عليه] - [صحيح البخاري: 6045]
المزيــد ...

ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಯಾವುದೇ ಮನುಷ್ಯನು ಇನ್ನೊಬ್ಬನನ್ನು ಫಾಸಿಕ್ (ದುಷ್ಕರ್ಮಿ) ಎಂದು ಆರೋಪಿಸಬಾರದು, ಅಥವಾ ಸತ್ಯನಿಷೇಧಿಯೆಂದು ಆರೋಪಿಸಬಾರದು. ಏಕೆಂದರೆ, ಆ ವ್ಯಕ್ತಿ ಅವನು ಹೇಳಿದಂತೆ ಇಲ್ಲದಿದ್ದರೆ, ಅದು ಹೇಳಿದವನಿಗೆ ಮರಳುತ್ತದೆ."

[صحيح] - [متفق عليه] - [صحيح البخاري - 6045]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಸುವುದೇನೆಂದರೆ, ಯಾರಾದರೂ ಇನ್ನೊಬ್ಬ ವ್ಯಕ್ತಿಯನ್ನು "ನೀನು ದುಷ್ಕರ್ಮಿ" ಅಥವಾ "ನೀನು ಸತ್ಯನಿಷೇಧಿ" ಎಂದು ಹೇಳಿದಾಗ, ಆತ ಇವನು ಹೇಳಿದಂತೆ ಇಲ್ಲದಿದ್ದರೆ, ಇವನು ಹೇಳಿದ್ದಕ್ಕೆ ಇವನೇ ಅರ್ಹನಾಗುತ್ತಾನೆ, ಮತ್ತು ಇವನು ಹೇಳಿದ್ದು ಇವನಿಗೇ ಮರಳುತ್ತದೆ. ಇನ್ನು ಆತ ಇವನು ಹೇಳಿದಂತೆ ಇದ್ದರೆ, ಇವನು ಹೇಳಿದ್ದು ಇವನಿಗೆ ಮರಳುವುದಿಲ್ಲ. ಏಕೆಂದರೆ ಇವನು ಹೇಳಿದ್ದು ಸತ್ಯವಾಗಿತ್ತು.

ಹದೀಸಿನ ಪ್ರಯೋಜನಗಳು

  1. ಸ್ಪಷ್ಟ ಧಾರ್ಮಿಕ ಪುರಾವೆಯಿಲ್ಲದೆ ಜನರ ಮೇಲೆ ಸತ್ಯನಿಷೇಧ (ಕುಫ್ರ್) ಅಥವಾ ದುಷ್ಕರ್ಮ (ಫಿಸ್ಕ್) ಆರೋಪಿಸುವುದನ್ನು ನಿಷೇಧಿಸಲಾಗಿದೆ.
  2. ಜನರ ಬಗ್ಗೆ ತೀರ್ಪು ನೀಡುವ ಮೊದಲು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.
  3. ಇಬ್ನ್ ದಕೀಕುಲ್ ಈದ್ ಹೇಳಿದರು: "ಒಬ್ಬ ಮುಸಲ್ಮಾನನ್ನು ಸತ್ಯನಿಷೇಧಿ ಎಂದು ಅನ್ಯಾಯವಾಗಿ ಘೋಷಿಸುವವರಿಗೆ, ಇದು ಗಂಭೀರ ಎಚ್ಚರಿಕೆಯಾಗಿದೆ. ಇದು ಆರೋಪದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ."
  4. ಇಬ್ನ್ ಹಜರ್ ಅಸ್ಕಲಾನಿ ಹೇಳಿದರು: "ಆದರೆ, ಒಬ್ಬನನ್ನು ನೀನು ದುಷ್ಕರ್ಮಿ ಎಂದು ಆರೋಪಿಸುವುದರಿಂದ ಅವನು ದುಷ್ಕರ್ಮಿ ಅಥವಾ ಸತ್ಯನಿಷೇಧಿಯಾಗುವುದಿಲ್ಲ ಎಂಬುದು ಅವನು ಒಂದು ದೃಷ್ಟಿಯಿಂದ ಪಾಪಿಯಾಗುವುದಿಲ್ಲ ಎಂದರ್ಥವಲ್ಲ. ಬದಲಿಗೆ ಈ ವಿಷಯವನ್ನು ವಿವರಿಸಬೇಕಾಗುತ್ತದೆ: ಒಬ್ಬ ವ್ಯಕ್ತಿಯ ತಪ್ಪುಗಳನ್ನು ತಿಳಿಸಿಕೊಟ್ಟು ಅವನಿಗೆ ಅಥವಾ ಇತರರಿಗೆ ಬುದ್ಧಿವಾದ ಹೇಳುವುದಾದರೆ ಅದಕ್ಕೆ ಅನುಮತಿಯಿದೆ. ಆದರೆ ಒಬ್ಬ ವ್ಯಕ್ತಿಯನ್ನು ಅವಮಾನಿಸಲು, ಅವನ ತಪ್ಪನ್ನು ಬಹಿರಂಗಗೊಳಿಸಲು ಮತ್ತು ಅವನಿಗೆ ತೊಂದರೆ ನೀಡುವುದನ್ನು ಮಾತ್ರ ಉದ್ದೇಶಿಸಿದ್ದರೆ, ಅದಕ್ಕೆ ಅನುಮತಿಯಿಲ್ಲ. ಏಕೆಂದರೆ ಬುದ್ಧಿವಾದ ಹೇಳುವಾಗ, ದೋಷಗಳನ್ನು (ಇತರರಿಗೆ ತಿಳಿಯದಂತೆ) ಮರೆಮಾಚಬೇಕು, ತಿಳುವಳಿಕೆ ನೀಡಬೇಕು ಮತ್ತು ಉತ್ತಮ ಉಪದೇಶ ನೀಡಬೇಕು. ಮೃದುವಾಗಿ ಅದನ್ನು ಮಾಡಲು ಸಾಧ್ಯವಿದ್ದರೆ ಹಿಂಸಾತ್ಮಕವಾಗಿ ಅದನ್ನು ಮಾಡಬಾರದು. ಏಕೆಂದರೆ ಅದು ತಪ್ಪಾದ ಕೆಲಸದಲ್ಲಿ ಮುಂದುವರಿಯಲು ಮತ್ತು ಪಟ್ಟುಹಿಡಿಯಲು ಕಾರಣವಾಗಬಹುದು. ಜನರಲ್ಲಿ ಹೆಚ್ಚಿನವರ ಸ್ವಭಾವದಲ್ಲಿ ಈ ಅಂಶವನ್ನು ಕಾಣಬಹುದು. ವಿಶೇಷವಾಗಿ ಬುದ್ಧಿವಾದ ಹೇಳುವವನು ಬುದ್ಧಿವಾದ ಸ್ವೀಕರಿಸುವವನಿಗಿಂತ ಕೆಳಗಿನ ಸ್ಥಾನದಲ್ಲಿದ್ದರೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية النيبالية الدرية الرومانية المجرية الموري الولوف الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು