عَنْ جَابِرٍ رضي الله عنه قَالَ: سَمِعْتُ النَّبِيَّ صَلَّى اللهُ عَلَيْهِ وَسَلَّمَ يَقُولُ:
«إِنَّ الشَّيْطَانَ قَدْ أَيِسَ أَنْ يَعْبُدَهُ الْمُصَلُّونَ فِي جَزِيرَةِ الْعَرَبِ، وَلَكِنْ فِي التَّحْرِيشِ بَيْنَهُمْ».
[صحيح] - [رواه مسلم] - [صحيح مسلم: 2812]
المزيــد ...
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ನಿಶ್ಚಯವಾಗಿಯೂ, ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ವಾಸಿಸುವ ನಮಾಝ್ ಮಾಡುವವರು (ಮುಸ್ಲಿಮರು) ತನ್ನನ್ನು ಆರಾಧಿಸುವರು ಎಂಬ ಬಗ್ಗೆ ಶೈತಾನನು ನಿರಾಶನಾಗಿದ್ದಾನೆ. ಆದರೆ, ಅವರ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವೆನು ಎಂಬುದರ ಬಗ್ಗೆ ಅವನು ನಿರಾಶನಾಗಿಲ್ಲ."
[صحيح] - [رواه مسلم] - [صحيح مسلم - 2812]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ವಾಸಿಸುವ ನಮಾಝ್ ಮಾಡುವ ಸತ್ಯವಿಶ್ವಾಸಿಗಳು ತನ್ನನ್ನು ಆರಾಧಿಸಲು ಮತ್ತು ವಿಗ್ರಹಗಳಿಗೆ ಸಾಷ್ಟಾಂಗ ಮಾಡಲು ಮರಳಿ ಬರುವರೆಂಬ ಬಗ್ಗೆ ಇಬ್ಲೀಸನು ನಿರಾಶನಾಗಿದ್ದಾನೆ. ಆದರೆ, ಆವನು ನಿರೀಕ್ಷೆಯನ್ನು ಕಳೆದುಕೊಂಡಿಲ್ಲ. ವಿವಾದಗಳು, ದ್ವೇಷ, ಯುದ್ಧಗಳು, ಗೊಂದಲಗಳು ಮುಂತಾದವುಗಳ ಮೂಲಕ ಅವರ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವುದರಲ್ಲಿ ಅವನು ತನ್ನ ಪ್ರಯತ್ನ, ಶ್ರಮ ಮತ್ತು ಹೋರಾಟವನ್ನು ಕೈಬಿಟ್ಟಿಲ್ಲ.