عَنْ هِشَامِ بْنِ حَكِيمِ بْنِ حِزَامٍ رَضيَ اللهُ عنهما أَنَّهُ مَرَّ عَلَى أُنَاسٍ مِنَ الْأَنْبَاطِ بِالشَّامِ، قَدْ أُقِيمُوا فِي الشَّمْسِ، فَقَالَ: مَا شَأْنُهُمْ؟ قَالُوا: حُبِسُوا فِي الْجِزْيَةِ، فَقَالَ هِشَامٌ: أَشْهَدُ لَسَمِعْتُ رَسُولَ اللهِ صَلَّى اللهُ عَلَيْهِ وَسَلَّمَ يَقُولُ:
«إِنَّ اللهَ يُعَذِّبُ الَّذِينَ يُعَذِّبُونَ النَّاسَ فِي الدُّنْيَا».
[صحيح] - [رواه مسلم] - [صحيح مسلم: 2613]
المزيــد ...
ಹಿಶಾಮ್ ಇಬ್ನ್ ಹಕೀಮ್ ಇಬ್ನ್ ಹಿಝಾಮ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಶಾಮ್ (ಸಿರಿಯಾ) ನಲ್ಲಿ 'ಅನ್ಬಾತ್' (ಜನಾಂಗದವರು) ಗಳ ಒಂದು ಗುಂಪಿನ ಬಳಿ ಹಾದುಹೋದರು. ಅವರನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು. ಅವರು (ಹಿಶಾಮ್) ಕೇಳಿದರು: "ಇವರ ವಿಷಯವೇನು?". ಜನರು ಹೇಳಿದರು: "ಅವರನ್ನು 'ಜಿಝ್ಯಾ' (ತೆರಿಗೆ) ಗಾಗಿ ತಡೆಹಿಡಿಯಲಾಗಿದೆ". ಆಗ ಹಿಶಾಮ್ ಹೇಳಿದರು: "ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದನ್ನು ಖಂಡಿತವಾಗಿಯೂ ಕೇಳಿದ್ದೇನೆ ಎಂದು ನಾನು ಸಾಕ್ಷಿ ನುಡಿಯುತ್ತೇನೆ:
'ಖಂಡಿತವಾಗಿಯೂ ಇಹಲೋಕದಲ್ಲಿ ಜನರನ್ನು ಶಿಕ್ಷಿಸುವವರನ್ನು ಅಲ್ಲಾಹು ಶಿಕ್ಷಿಸುತ್ತಾನೆ' ".
[صحيح] - [رواه مسلم] - [صحيح مسلم - 2613]
ಹಿಶಾಮ್ ಇಬ್ನ್ ಹಕೀಮ್ ಇಬ್ನ್ ಹಿಝಾಮ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು ಶಾಮ್‌ನಲ್ಲಿ ಅಜಮ್ (ಅರಬ್ಬರಲ್ಲದ) ರೈತರ ಬಳಿ ಹಾದುಹೋದರು. ಅವರನ್ನು ಬಿಸಿಲಿನ ತಾಪದಲ್ಲಿ ನಿಲ್ಲಿಸಲಾಗಿತ್ತು. ಅವರು ಅವರ ಪರಿಸ್ಥಿತಿಯ ಬಗ್ಗೆ ಕೇಳಿದರು. ಆಗ ಅವರಿಗೆ, ಅವರು (ಜಿಝ್ಯಾ) ಪಾವತಿಸಲು ಸಮರ್ಥರಾಗಿದ್ದರೂ ಅದನ್ನು ಪಾವತಿಸದ ಕಾರಣಕ್ಕಾಗಿ ಅವರಿಗೆ ಹಾಗೆ ಮಾಡಲಾಗಿದೆ ಎಂದು ತಿಳಿಸಲಾಯಿತು. ಆಗ ಹಿಶಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದನ್ನು ಖಂಡಿತವಾಗಿಯೂ ಕೇಳಿದ್ದೇನೆ ಎಂದು ನಾನು ಸಾಕ್ಷಿ ನುಡಿಯುತ್ತೇನೆ: ಇಹಲೋಕದಲ್ಲಿ ಜನರನ್ನು ಅನ್ಯಾಯವಾಗಿ, ಯಾವುದೇ (ಶರೀಅತ್ ಸಮ್ಮತ) ಹಕ್ಕಿಲ್ಲದೆ ಶಿಕ್ಷಿಸುವವರನ್ನು ಅಲ್ಲಾಹು ಶಿಕ್ಷಿಸುತ್ತಾನೆ.