عنْ ابنِ مَسْعُودٍ رَضيَ اللهُ عنهُ قَالَ:
كُنَّا مَعَ رَسُولِ اللَّهِ صَلَّى اللهُ عَلَيْهِ وَسَلَّمَ فِي سَفَرٍ، فَانْطَلَقَ لِحَاجَتِهِ، فَرَأَيْنَا حُمَّرَةً مَعَهَا فَرْخَانِ، فَأَخَذْنَا فَرْخَيْهَا، فَجَاءَتِ الْحُمَرَةُ فَجَعَلَتْ تَفْرِشُ، فَجَاءَ النَّبِيُّ صَلَّى اللهُ عَلَيْهِ وَسَلَّمَ فَقَالَ: «مَنْ فَجَعَ هَذِهِ بِوَلَدِهَا؟ رُدُّوا وَلَدَهَا إِلَيْهَا»، وَرَأَى قَرْيَةَ نَمْلٍ قَدْ حَرَّقْنَاهَا، فَقَالَ: «مَنْ حَرَّقَ هَذِهِ؟» قُلْنَا: نَحْنُ. قَالَ: «إِنَّهُ لَا يَنْبَغِي أَنْ يُعَذِّبَ بِالنَّارِ إِلَّا رَبُّ النَّارِ».

[صحيح] - [رواه أبو داود] - [سنن أبي داود: 2675]
المزيــد ...

ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
ನಾವು ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದೆವು. ಅವರು ತಮ್ಮ (ಮಲಮೂತ್ರ ವಿಸರ್ಜನೆಯ) ಅಗತ್ಯಕ್ಕಾಗಿ ಹೊರಟರು. ಆಗ ನಾವು ಒಂದು ಬಗೆಯ ಸಣ್ಣ ಹಕ್ಕಿಯನ್ನು ಅದರ ಎರಡು ಮರಿಗಳೊಂದಿಗೆ ಕಂಡೆವು. ನಾವು ಅದರ ಎರಡು ಮರಿಗಳನ್ನು ತೆಗೆದುಕೊಂಡೆವು. ಆಗ ಆ ತಾಯಿ ಹಕ್ಕಿ ಬಂದು (ಸಂಕಟದಿಂದ) ತನ್ನ ರೆಕ್ಕೆಗಳನ್ನು ಬಡಿಯಲಾರಂಭಿಸಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದು ಹೇಳಿದರು: "ಯಾರು ಇದರ ಮರಿಯನ್ನು (ತೆಗೆದುಕೊಳ್ಳುವ ಮೂಲಕ) ಇದಕ್ಕೆ ಸಂಕಟವನ್ನುಂಟುಮಾಡಿದ್ದು? ಅದರ ಮರಿಯನ್ನು ಅದಕ್ಕೆ ಹಿಂದಿರುಗಿಸಿರಿ". ನಾವು ಸುಟ್ಟಿದ್ದ ಒಂದು ಇರುವೆಗಳ ಗೂಡನ್ನು ಅವರು ಕಂಡರು. ಅವರು ಕೇಳಿದರು: "ಇದನ್ನು ಯಾರು ಸುಟ್ಟಿದ್ದು?". ನಾವು ಹೇಳಿದೆವು: "ನಾವು". ಅವರು ಹೇಳಿದರು: "ಖಂಡಿತವಾಗಿಯೂ, ಬೆಂಕಿಯ ಒಡೆಯನಲ್ಲದೆ (ಅಲ್ಲಾಹನಲ್ಲದೆ) ಬೇರೆ ಯಾರಿಗೂ ಬೆಂಕಿಯಿಂದ ಶಿಕ್ಷಿಸುವುದು ಉಚಿತವಲ್ಲ".

[صحيح] - [رواه أبو داود] - [سنن أبي داود - 2675]

ವಿವರಣೆ

ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಅಗತ್ಯವನ್ನು (ಮಲಮೂತ್ರ) ಪೂರೈಸಲು ಹೊರಟರು. ಆಗ ಅವರ ಸಹಾಬಿಗಳು ಒಂದು ಹಕ್ಕಿಯನ್ನು ಮತ್ತು ಅದರ ಎರಡು ಮರಿಗಳನ್ನು ಕಂಡರು. ಅವರು ಅವೆರಡನ್ನೂ ತೆಗೆದುಕೊಂಡರು. ಆಗ ತಾಯಿ ಹಕ್ಕಿ ತನ್ನ ಮರಿಗಳನ್ನು ಕಳೆದುಕೊಂಡ ಗಾಬರಿಯಿಂದ ತನ್ನ ರೆಕ್ಕೆಗಳನ್ನು ಹರಡಿ ಬಡಿಯಲಾರಂಭಿಸಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದು ಹೇಳಿದರು: ಅದರ ಮರಿಗಳನ್ನು ತೆಗೆದುಕೊಳ್ಳುವ ಮೂಲಕ ಯಾರು ಅದಕ್ಕೆ ಸಂಕಟ ಮತ್ತು ಗಾಬರಿಯನ್ನುಂಟುಮಾಡಿದ್ದು?! ನಂತರ ಅವರು ಅದನ್ನು ಅದಕ್ಕೆ ಹಿಂದಿರುಗಿಸಲು ಆದೇಶಿಸಿದರು. ನಂತರ ಅವರು ಬೆಂಕಿಯಿಂದ ಸುಡಲಾದ ಒಂದು ಇರುವೆ ಗೂಡನ್ನು ಕಂಡರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: ಇದನ್ನು ಯಾರು ಸುಟ್ಟಿದ್ದು? ಅವರ ಕೆಲವು ಸಹಾಬಿಗಳು ಹೇಳಿದರು: ನಾವು. ಆಗ ಅವರು (ಪ್ರವಾದಿ) ಹೇಳಿದರು: ಖಂಡಿತವಾಗಿಯೂ ಯಾವುದೇ ಜೀವಿಯನ್ನು ಬೆಂಕಿಯಿಂದ ಶಿಕ್ಷಿಸಲು ಯಾರಿಗೂ ಅನುಮತಿಯಿಲ್ಲ; ಅದನ್ನು ಸೃಷ್ಟಿಸಿದ ಅಲ್ಲಾಹನಿಗೆ ಹೊರತು.

ಹದೀಸಿನ ಪ್ರಯೋಜನಗಳು

  1. (ಮಲಮೂತ್ರ ವಿಸರ್ಜನೆಯ) ಅಗತ್ಯವನ್ನು ಪೂರೈಸಲು ಮರೆ ಮಾಡಿಕೊಳ್ಳುವುದನ್ನು ನಿಯಮಗೊಳಿಸಲಾಗಿದೆ.
  2. ಪ್ರಾಣಿಗಳಿಗೆ ಅವುಗಳ ಮರಿಗಳನ್ನು ತೆಗೆದುಕೊಳ್ಳುವ ಮೂಲಕ ಹಿಂಸೆ ನೀಡುವುದನ್ನು ನಿಷೇಧಿಸಲಾಗಿದೆ.
  3. ಇರುವೆಗಳು ಮತ್ತು ಕೀಟಗಳನ್ನು ಬೆಂಕಿಯಿಂದ ಸುಡುವುದನ್ನು ನಿಷೇಧಿಸಲಾಗಿದೆ.
  4. ಪ್ರಾಣಿಗಳೊಂದಿಗೆ ದಯೆ ಮತ್ತು ಕರುಣೆಯಿಂದ ವರ್ತಿಸಲು ಪ್ರೋತ್ಸಾಹಿಸಲಾಗಿದೆ, ಮತ್ತು ಈ ವಿಷಯದಲ್ಲಿ ಇಸ್ಲಾಂ ಮುಂಚೂಣಿಯಲ್ಲಿದೆ.
  5. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾಣಿಗಳ ಮೇಲಿನ ಕರುಣೆ ತೋರಿದ್ದನ್ನು ವಿವರಿಸಲಾಗಿದೆ.
  6. ಬೆಂಕಿಯಿಂದ ಶಿಕ್ಷಿಸುವ ಹಕ್ಕು ಒಡೆಯನಿಗೆ (ಅಲ್ಲಾಹನಿಗೆ) ಮಾತ್ರ ಮೀಸಲಾಗಿದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ