عَنِ ابْنِ عُمَرَ رَضيَ اللهُ عنهما قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إِذَا جَمَعَ اللهُ الْأَوَّلِينَ وَالْآخِرِينَ يَوْمَ الْقِيَامَةِ يُرْفَعُ لِكُلِّ غَادِرٍ لِوَاءٌ، فَقِيلَ: هَذِهِ غَدْرَةُ فُلَانِ بْنِ فُلَانٍ».
[صحيح] - [متفق عليه] - [صحيح مسلم: 1735]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಪುನರುತ್ಥಾನ ದಿನದಂದು ಅಲ್ಲಾಹು ಮೊದಲಿನವರು ಮತ್ತು ನಂತರದವರನ್ನು (ಎಲ್ಲರನ್ನೂ) ಒಟ್ಟುಗೂಡಿಸಿದಾಗ, ಪ್ರತಿಯೊಬ್ಬ ವಿಶ್ವಾಸದ್ರೋಹಿಗಾಗಿ ಒಂದು ಪ್ರತ್ಯೇಕ ಧ್ವಜ ಏರಿಸಲಾಗುವುದು. ಆಗ ಹೇಳಲಾಗುವುದು: 'ಇದು ಇಂಥಿಂತವನ ಮಗನ ವಿಶ್ವಾಸದ್ರೋಹ'."
[صحيح] - [متفق عليه] - [صحيح مسلم - 1735]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಪುನರುತ್ಥಾನ ದಿನದಂದು ಅಲ್ಲಾಹು ಮೊದಲಿನವರು ಮತ್ತು ನಂತರದವರನ್ನು ವಿಚಾರಣೆಗಾಗಿ ಒಟ್ಟುಗೂಡಿಸಿದಾಗ, ಅಲ್ಲಾಹನೊಂದಿಗೆ ಅಥವಾ ಜನರೊಂದಿಗೆ ತಾನು ಪೂರೈಸಬೇಕಾಗಿದ್ದ ಕರಾರನ್ನು ಪೂರೈಸದ ಪ್ರತಿಯೊಬ್ಬ ವಿಶ್ವಾಸದ್ರೋಹಿಗೂ, ಅವನ ವಿಶ್ವಾಸದ್ರೋಹವನ್ನು ಬಹಿರಂಗಪಡಿಸುವ ಒಂದು ಚಿಹ್ನೆಯನ್ನು (ಧ್ವಜವನ್ನು) ಸ್ಥಾಪಿಸಲಾಗುವುದು. ಅಂದು ಅವನ ಬಗ್ಗೆ ಹೀಗೆ ಕೂಗಿ ಹೇಳಲಾಗುವುದು: ಇದು ಇಂಥವನ ಮಗ ಇಂಥವನು ಮಾಡಿದ ವಿಶ್ವಾಸದ್ರೋಹ. ಇದು ಮಹ್ಶರ್ (ಒಟ್ಟುಗೂಡುವ ಸ್ಥಳ) ನಲ್ಲಿ ಸೇರಿದ ಜನರ ಮುಂದೆ ಅವನ ಕೆಟ್ಟ ಕೃತ್ಯವನ್ನು ಪ್ರಕಟಪಡಿಸುವುದಕ್ಕಾಗಿದೆ.