عن أبي بكرة رضي الله عنه قال: قال النبي صلى الله عليه وسلم:
«أَلَا أُنَبِّئُكُمْ بِأَكْبَرِ الْكَبَائِرِ؟» ثَلَاثًا، قَالُوا: بَلَى يَا رَسُولَ اللهِ، قَالَ: «الْإِشْرَاكُ بِاللهِ، وَعُقُوقُ الْوَالِدَيْنِ» وَجَلَسَ وَكَانَ مُتَّكِئًا، فَقَالَ: «أَلَا وَقَوْلُ الزُّورِ»، قَالَ: فَمَا زَالَ يُكَرِّرُهَا حَتَّى قُلْنَا: لَيْتَهُ سَكَتَ.
[صحيح] - [متفق عليه] - [صحيح البخاري: 2654]
المزيــد ...
ಅಬೂ ಬಕ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಮಹಾಪಾಪಗಳಲ್ಲಿ ಅತಿದೊಡ್ಡ ಪಾಪದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?" ಅವರು ಇದನ್ನು ಮೂರು ಬಾರಿ ಪುನರುಚ್ಛರಿಸಿದರು. ಸಹಾಬಿಗಳು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ತಿಳಿಸಿಕೊಡಿ." ಅವರು ಹೇಳಿದರು: "ಅಲ್ಲಾಹನೊಡನೆ ಸಹಭಾಗಿತ್ವ ಮಾಡುವುದು ಮತ್ತು ತಂದೆ-ತಾಯಿಗೆ ಅವಿಧೇಯತೆ ತೋರುವುದು." ಒರಗಿ ಕುಳಿತಿದ್ದ ಅವರು ನೇರವಾಗಿ ಕುಳಿತು ಹೇಳಿದರು: "ಮತ್ತು ಸುಳ್ಳು ಹೇಳಿಕೆ ನೀಡುವುದು." "ಅವರು ಮೌನ ವಹಿಸಿದ್ದರೆ ಚೆನ್ನಾಗಿತ್ತು" ಎಂದು ನಾವು ಹೇಳುವ ತನಕ ಅವರು ಪುನರುಚ್ಛರಿಸುತ್ತಲೇ ಇದ್ದರು.
[صحيح] - [متفق عليه] - [صحيح البخاري - 2654]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಚರರಿಗೆ ಅತ್ಯಂತ ಘೋರವಾದ ಮಹಾಪಾಪಗಳ ಬಗ್ಗೆ ತಿಳಿಸುತ್ತಾ ಈ ಮೂರು ಪಾಪಗಳನ್ನು ಪ್ರಸ್ತಾಪಿಸುತ್ತಾರೆ:
1. ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದು: ಅಂದರೆ ಆರಾಧನೆಗಳಲ್ಲಿ ಸೇರಿದ ಯಾವುದಾದರೂ ಒಂದನ್ನು ಅಲ್ಲಾಹನ ಹೊರತಾದವರಿಗೆ ಅರ್ಪಿಸುವುದು, ಅಲ್ಲಾಹನ ಪ್ರಭುತ್ವದಲ್ಲಿ, ದೈವಿಕತೆಯಲ್ಲಿ ಮತ್ತು ಅವನ ಹೆಸರು ಹಾಗೂ ಗುಣಲಕ್ಷಣಗಳಲ್ಲಿ ಅವನ ಹೊರತಾದವರನ್ನು ಅವನೊಂದಿಗೆ ಸಮಾನಗೊಳಿಸುವುದು.
2. ಮಾತಾಪಿತರಿಗೆ ಅವಿಧೇಯತೆ ತೋರುವುದು: ಮಾತಾಪಿತರನ್ನು ನೋಯಿಸುವುದು, ಅದು ಮಾತಿನ ಮೂಲಕ ಅಥವಾ ವರ್ತನೆಯ ಮೂಲಕವಾದರೂ ಸಹ, ಮತ್ತು ಅವರೊಡನೆ ಉತ್ತಮ ರೀತಿಯಲ್ಲಿ ವರ್ತಿಸದಿರುವುದು ಅವಿಧೇಯತೆಗಳಾಗಿವೆ.
3. ಸುಳ್ಳು ಹೇಳಿಕೆ ನೀಡುವುದು (ಸುಳ್ಳು ಸಾಕ್ಷ್ಯ ಹೇಳುವುದು ಇದರಲ್ಲಿ ಒಳಪಡುತ್ತದೆ): ಒಬ್ಬ ವ್ಯಕ್ತಿಯ ಆಸ್ತಿಯನ್ನು ಕಬಳಿಸುವುದು, ಅಥವಾ ಅವನ ಮಾನವನ್ನು ಕೆಡಿಸುವುದು ಮುಂತಾದ ರೀತಿಯಲ್ಲಿ ಅವನ ಮೇಲೆ ಹಗೆ ತೀರಿಸಲು ನೀಡುವ ಸುಳ್ಳು ಮತ್ತು ಕಪೋಕಲ್ಪಿತ ಹೇಳಿಕೆಗಳೆಲ್ಲವೂ ಇದರಲ್ಲಿ ಒಳಪಡುತ್ತವೆ.
ಸುಳ್ಳು ಸಾಕ್ಷ್ಯ ಹೇಳುವುದರ ಬಗ್ಗೆ ಎಚ್ಚರಿಕೆಯನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುನರುಚ್ಛರಿಸುತ್ತಲೇ ಇದ್ದರು. ಇದು ಅದರ ಅಸಹ್ಯತೆ ಮತ್ತು ಸಮಾಜದ ಮೇಲೆ ಅದು ಬೀರುವ ದುಷ್ಪರಿಣಾಮದ ಬಗ್ಗೆ ಸೂಚಿಸುವುದಕ್ಕಾಗಿತ್ತು. ಅವರು ಇದನ್ನು ಎಲ್ಲಿಯ ತನಕ ಪುನರುಚ್ಛರಿಸುತ್ತಿದ್ದರೆಂದರೆ, ಸಹಾಬಿಗಳು ಅವರ ಮೇಲಿದ್ದ ಸಹಾನುಭೂತಿಯಿಂದ ಮತ್ತು ಅವರಿಗೆ ತೊಂದರೆಯಾಗುವುದನ್ನು ನೋಡಲಾಗದೆ, "ಅವರು ಇದನ್ನು ನಿಲ್ಲಿಸಿದ್ದರೆ ಎಷ್ಟು ಚೆನ್ನಾಗಿತ್ತು!" ಎಂದು ಹೇಳುವವರೆಗೆ.