عَنْ عُمَرَ بْنِ الْخَطَّابِ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إِنَّ اللهَ عَزَّ وَجَلَّ يَنْهَاكُمْ أَنْ تَحْلِفُوا بِآبَائِكُمْ»، قَالَ عُمَرُ: فَوَاللهِ مَا حَلَفْتُ بِهَا مُنْذُ سَمِعْتُ رَسُولَ اللهِ صَلَّى اللهُ عَلَيْهِ وَسَلَّمَ نَهَى عَنْهَا ذَاكِرًا وَلَا آثِرًا.
[صحيح] - [متفق عليه] - [صحيح مسلم: 1646]
المزيــد ...
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಶ್ಚಯವಾಗಿಯೂ ನಿಮ್ಮ ತಂದೆಯರ ಮೇಲೆ ಆಣೆ ಮಾಡುವುದನ್ನು ಸರ್ವಶಕ್ತನಾದ ಅಲ್ಲಾಹು ನಿಮಗೆ ವಿರೋಧಿಸುತ್ತಾನೆ." ಉಮರ್ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ಹೇಳುವುದನ್ನು ಕೇಳಿದ ನಂತರ ನಾನು ಉದ್ದೇಶಪೂರ್ವಕವಾಗಿ ಅಥವಾ ಇತರರ ಮಾತನ್ನು ಉಲ್ಲೇಖಿಸಿ ಅವರ ಮೇಲೆ ಆಣೆ ಮಾಡಿಲ್ಲ."
[صحيح] - [متفق عليه] - [صحيح مسلم - 1646]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ತಂದೆಯರ ಮೇಲೆ ಆಣೆ ಮಾಡುವುದನ್ನು ಸರ್ವಶಕ್ತನಾದ ಅಲ್ಲಾಹು ನಿಮಗೆ ವಿರೋಧಿಸುತ್ತಾನೆ. ಆದ್ದರಿಂದ, ಆಣೆ ಮಾಡಲು ಉದ್ದೇಶಿಸುವವರು ಅಲ್ಲಾಹನ ಮೇಲೆ ಮಾತ್ರ ಆಣೆ ಮಾಡಬೇಕು. ಇತರರ ಮೇಲೆ ಆಣೆ ಮಾಡಬಾರದು. ನಂತರ ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುವುದೇನೆಂದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ವಿರೋಧಿಸುವುದನ್ನು ಕೇಳಿದ ನಂತರ, ಅವರು ಉದ್ದೇಶಪೂರ್ವಕವಾಗಿ ಅಥವಾ ಇತರರು ಅಲ್ಲಾಹೇತರರ ಮೇಲೆ ಆಣೆ ಮಾಡುವುದನ್ನು ಉಲ್ಲೇಖಿಸಿ ಅವರ ಮೇಲೆ ಆಣೆ ಮಾಡಿಲ್ಲ.