عن جابرٍ رضي الله عنه قال: سمعت النبي صلى الله عليه وسلم يقول:
«إِنَّ بَيْنَ الرَّجُلِ وَبَيْنَ الشِّرْكِ وَالْكُفْرِ تَرْكَ الصَّلَاةِ».
[صحيح] - [رواه مسلم] - [صحيح مسلم: 82]
المزيــد ...
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
"ಒಬ್ಬ ವ್ಯಕ್ತಿ ಮತ್ತು ಶಿರ್ಕ್ (ದೇವಸಹಭಾಗಿತ್ವ) ಹಾಗೂ ಕುಫ್ರ್ (ಸತ್ಯನಿಷೇಧ) ನ ನಡುವಿನ ಅಂತರವು ನಮಾಝನ್ನು ತೊರೆಯುವುದಾಗಿದೆ."
[صحيح] - [رواه مسلم] - [صحيح مسلم - 82]
ಕಡ್ಡಾಯ ನಮಾಝ್‌ಗಳನ್ನು ತೊರೆಯುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ್ದಾರೆ ಮತ್ತು ನಮಾಝನ್ನು ತೊರೆಯುವುದು ಶಿರ್ಕ್ ಮತ್ತು ಕುಫ್ರ್‌ನಲ್ಲಿ ಒಳಪಡುವುದಕ್ಕೆ ಬಹಳ ಹತ್ತಿರದಲ್ಲಿದೆಯೆಂದು ತಿಳಿಸಿದ್ದಾರೆ. ನಮಾಝ್ ಇಸ್ಲಾಮ್ ಧರ್ಮದ ಎರಡನೆ ಸ್ಥಂಭವಾಗಿದ್ದು, ಅದಕ್ಕೆ ಇಸ್ಲಾಮಿನಲ್ಲಿ ಶ್ರೇಷ್ಠ ಸ್ಥಾನಮಾನವಿದೆ. ನಮಾಝ್ ಕಡ್ಡಾಯವೆಂಬುದನ್ನು ನಿಷೇಧಿಸುತ್ತಾ ಯಾರು ಅದನ್ನು ತೊರೆಯುತ್ತಾರೋ ಅವರು ಮುಸ್ಲಿಮರ ಒಮ್ಮತಾಭಿಪ್ರಾಯದ ಪ್ರಕಾರ ಸತ್ಯನಿಷೇಧಿಗಳಾಗಿದ್ದಾರೆ. ಆದರೆ ಯಾರಾದರೂ ಅಸಡ್ಡೆ ಅಥವಾ ಸೋಮಾರಿತನದ ಕಾರಣದಿಂದ ನಮಾಝ್ ಮಾಡುವುದನ್ನು ಪೂರ್ಣವಾಗಿ ಬಿಟ್ಟುಬಿಟ್ಟರೆ ಅವರು ಕೂಡ ಸತ್ಯನಿಷೇಧಿಗಳಾಗಿದ್ದಾರೆ. ಈ ವಿಷಯದಲ್ಲಿ ಸಹಾಬಿಗಳಲ್ಲಿ ಒಮ್ಮತಾಭಿಪ್ರಾಯವಿದೆಯೆಂದು ವರದಿಯಾಗಿದೆ. ಕೆಲವೊಮ್ಮೆ ನಮಾಝ್ ಮಾಡುವ ಮತ್ತು ಕೆಲವೊಮ್ಮೆ ನಮಾಝ್ ತೊರೆಯುವ ಜನರು ಈ ಉಗ್ರ ಎಚ್ಚರಿಕೆಗೆ ಒಳಗಾಗುವ ಅಪಾಯದಲ್ಲಿದ್ದಾರೆ.