عَنْ ابنِ عُمَرَ رَضيَ اللهُ عنهما عَنْ رَسُولِ اللهِ صَلَّى اللهُ عَلَيْهِ وَسَلَّمَ قَالَ:
«مَنِ اقْتَنَى كَلْبًا إِلَّا كَلْبَ ضَارٍ أَوْ مَاشِيَةٍ نَقَصَ مِنْ عَمَلِهِ كُلَّ يَوْمٍ قِيرَاطَانِ»، قَالَ سَالِمٌ: وَكَانَ أَبُو هُرَيْرَةَ يَقُولُ: «أَوْ كَلْبَ حَرْثٍ»، وَكَانَ صَاحِبَ حَرْثٍ.
[صحيح] - [متفق عليه] - [صحيح مسلم: 1574]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಬೇಟೆಯಾಡುವ ಅಥವಾ ಜಾನುವಾರುಗಳನ್ನು ಕಾಯುವ ನಾಯಿಯನ್ನು ಹೊರತುಪಡಿಸಿ, ಬೇರೆ ಯಾವುದೇ ನಾಯಿಯನ್ನು ಯಾರಾದರೂ ಸಾಕುವುದಾದರೆ, ಅವನ ಪುಣ್ಯದಿಂದ ಪ್ರತಿದಿನ ಎರಡು ಕೀರಾತ್‌ಗಳಷ್ಟು ಕಡಿಮೆಯಾಗುತ್ತದೆ." ಸಾಲಿಂ ಹೇಳಿದರು: ಅಬು ಹುರೈರ "ಅಥವಾ ಕೃಷಿ ಭೂಮಿಯನ್ನು ಕಾಯುವ ನಾಯಿ" ಎಂದು ಕೂಡ ಹೇಳುತ್ತಿದ್ದರು. ಅವರು ಕೃಷಿ ಭೂಮಿಯನ್ನು ಹೊಂದಿದ್ದರು.
[صحيح] - [متفق عليه] - [صحيح مسلم - 1574]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಾಯಿಗಳನ್ನು ಸಾಕುವುದರ ವಿರುದ್ಧ ಎಚ್ಚರಿಸಿದ್ದಾರೆ. ಆದರೆ ಬೇಟೆಯಾಡುವುದು, ಅಥವಾ ಜಾನುವಾರು ಮತ್ತು ಬೆಳೆಗಳನ್ನು ಕಾಯುವುದು ಮುಂತಾದ ಅಗತ್ಯವಿದ್ದಾಗ ಅವುಗಳನ್ನು ಸಾಕಬಹುದು. ಇದಲ್ಲದ ಬೇರೆ ಯಾವುದೇ ಕಾರಣಕ್ಕಾಗಿ ನಾಯಿಯನ್ನು ಸಾಕುವವನು ತನ್ನ ಪುಣ್ಯದಿಂದ ಪ್ರತಿದಿನ ಎರಡು ಕೀರಾತ್‌ಗಳಷ್ಟು ಕಳೆದುಕೊಳ್ಳುತ್ತಾನೆ. ಕೀರಾತ್ ಎಂದರೆ ಅಲ್ಲಾಹುವಿನ ಕಡೆಯ ಒಂದು ನಿರ್ದಿಷ್ಟ ಪ್ರಮಾಣ.