عَنِ الْبَرَاءِ رَضيَ اللهُ عنه قَالَ:
مَا رَأَيْتُ مِنْ ذِي لِمَّةٍ أَحْسَنَ فِي حُلَّةٍ حَمْرَاءَ مِنْ رَسُولِ اللهِ صَلَّى اللهُ عَلَيْهِ وَسَلَّمَ، شَعْرُهُ يَضْرِبُ مَنْكِبَيْهِ، بَعِيدَ مَا بَيْنَ الْمَنْكِبَيْنِ، لَيْسَ بِالطَّوِيلِ وَلَا بِالْقَصِيرِ.

[صحيح] - [متفق عليه] - [صحيح مسلم: 2337]
المزيــد ...

ಬರಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
"ಭುಜದವರೆಗೆ ಕೇಶರಾಶಿಯುಳ್ಳ, ಕೆಂಪು 'ಹುಲ್ಲ' (ಉಡುಪು) ಧರಿಸಿದವರಲ್ಲಿ ಅಲ್ಲಾಹನ ಸಂದೇಶವಾಹಕರಿಗಿಂತ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚು ಸುಂದರವಾಗಿ ಕಾಣುವ ಯಾರನ್ನೂ ನಾನು ನೋಡಿಲ್ಲ. ಅವರ ಕೂದಲು ಅವರ ಭುಜಗಳನ್ನು ತಲುಪುತ್ತಿತ್ತು. ಅವರು ವಿಶಾಲವಾದ ಭುಜಗಳುಳ್ಳವರಾಗಿದ್ದರು. ಅವರು ಅತಿ ಎತ್ತರವೂ ಇರಲಿಲ್ಲ, ಅತಿ ಕುಳ್ಳಗೂ ಇರಲಿಲ್ಲ (ಮಧ್ಯಮ ಎತ್ತರದವರಾಗಿದ್ದರು)".

[صحيح] - [متفق عليه] - [صحيح مسلم - 2337]

ವಿವರಣೆ

ಬರಾಅ್ ಇಬ್ನ್ ಆಝಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಯಾರ ತಲೆಗೂದಲು ಉದ್ದವಾಗಿದ್ದು ಭುಜಗಳವರೆಗೆ ತಲುಪಿರುತ್ತದೆಯೋ, ಮತ್ತು ಕಪ್ಪು ಬಣ್ಣದ ಇಝಾರ್ (ಲುಂಗಿ) ಮತ್ತು ರಿದಾ (ಅಂಗಿ) ಧರಿಸಿರುತ್ತಾರೋ, ಅದರಲ್ಲಿ ಕೆಂಪು ಪಟ್ಟೆಗಳಿರುತ್ತವೆಯೋ, ಅಂತಹವರಲ್ಲಿ ಅಲ್ಲಾಹನ ಸಂದೇಶವಾಹಕರಿಗಿಂತ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚು ಸುಂದರವಾಗಿ ಕಾಣುವ ಯಾರನ್ನೂ ನಾನು ನೋಡಿಲ್ಲ. ಅವರ ಕೆಲವು ದೈಹಿಕ ಲಕ್ಷಣಗಳೇನೆಂದರೆ, ಅವರು ವಿಶಾಲವಾದ ಭುಜಗಳುಳ್ಳವರಾಗಿದ್ದರು, ವಿಶಾಲವಾದ ಎದೆಯುಳ್ಳವರಾಗಿದ್ದರು, ಮತ್ತು ಎತ್ತರ ಹಾಗೂ ಕುಳ್ಳಗಿನ ನಡುವೆ ಮಧ್ಯಮ ಎತ್ತರದವರಾಗಿದ್ದರು.

ಹದೀಸಿನ ಪ್ರಯೋಜನಗಳು

  1. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಾಹ್ಯ ಸೌಂದರ್ಯದ ಕೆಲವು ಲಕ್ಷಣಗಳನ್ನು ವಿವರಿಸಲಾಗಿದೆ – ಸುಂದರವಾದ ಕೂದಲು, ವಿಶಾಲವಾದ ಎದೆ, ಉತ್ತಮವಾದ ಎತ್ತರ, ಇತ್ಯಾದಿ.
  2. ಗೌರವಾನ್ವಿತ ಸಹಾಬಿಗಳಿಗೆ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲಿದ್ದ ಪ್ರೀತಿಯನ್ನು ವಿವರಿಸಲಾಗಿದೆ. ಎಷ್ಟರಮಟ್ಟಿಗೆ ಎಂದರೆ ಅವರು ತಮ್ಮ ನಂತರದವರಿಗೆ ಅವರ (ಪ್ರವಾದಿಯ) ದೈಹಿಕ ಮತ್ತು ನೈತಿಕ ಗುಣಲಕ್ಷಣಗಳನ್ನು ವಿವರಿಸಿಕೊಡುತ್ತಿದ್ದರು.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الصومالية الرومانية المجرية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು