عَنْ أَبِي بَكْرٍ الصِّدِّيقَ رَضيَ اللهُ عنه قَالَ:
نَظَرْتُ إِلَى أَقْدَامِ الْمُشْرِكِينَ عَلَى رُءُوسِنَا وَنَحْنُ فِي الْغَارِ، فَقُلْتُ: يَا رَسُولَ اللهِ لَوْ أَنَّ أَحَدَهُمْ نَظَرَ إِلَى قَدَمَيْهِ أَبْصَرَنَا تَحْتَ قَدَمَيْهِ، فَقَالَ: «يَا أَبَا بَكْرٍ، مَا ظَنُّكَ بِاثْنَيْنِ اللهُ ثَالِثُهُمَا».
[صحيح] - [متفق عليه] - [صحيح مسلم: 2381]
المزيــد ...
ಅಬೂ ಬಕರ್ ಸಿದ್ದೀಖ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ನಾವು ಗುಹೆಯಲ್ಲಿದ್ದಾಗ (ಹಿಜ್ರದ ಸಂದರ್ಭದಲ್ಲಿ), ಬಹುದೇವಾರಾಧಕರ ಪಾದಗಳು ನಮ್ಮ ತಲೆಗಳ ಮೇಲ್ಭಾಗದಲ್ಲಿರುವುದನ್ನು ನಾನು ನೋಡಿದೆನು. ನಾನು ಹೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ಅವರಲ್ಲೊಬ್ಬನು ತನ್ನ ಪಾದಗಳ ಕಡೆಗೆ ನೋಡಿದರೆ, ಅವನು ನಮ್ಮನ್ನು ತನ್ನ ಪಾದಗಳ ಕೆಳಭಾಗದಲ್ಲಿ ಕಾಣುವನು". ಆಗ ಅವರು (ಪ್ರವಾದಿ) ಹೇಳಿದರು: "ಓ ಅಬೂ ಬಕರ್, ಅಲ್ಲಾಹು ಅವರ ಮೂರನೆಯವನಾಗಿರುವ ಇಬ್ಬರ ಬಗ್ಗೆ ನಿನ್ನ ಭಾವನೆ ಏನು?"
[صحيح] - [متفق عليه] - [صحيح مسلم - 2381]
ಸತ್ಯವಿಶ್ವಾಸಿಗಳ ಸರದಾರರಾದ ಅಬೂ ಬಕರ್ ಸಿದ್ದೀಖ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಹಿಜ್ರದ ಸಮಯದಲ್ಲಿ ಹೇಳಿದರು: ಬಹುದೇವಾರಾಧಕರು ನಮ್ಮ ಮೇಲ್ಭಾಗದಲ್ಲಿ, 'ಸೌರ್' ಗುಹೆಯ ಮೇಲೆ ನಿಂತಿದ್ದರು, ಮತ್ತು ನಾವು ಗುಹೆಯ ಒಳಗಿದ್ದೆವು. ಆಗ ನಾನು ಅವರ ಪಾದಗಳನ್ನು ನೋಡಿದೆನು. ನಾನು ಹೇಳಿದೆನು: ಓ ಅಲ್ಲಾಹನ ಸಂದೇಶವಾಹಕರೇ, ಅವರಲ್ಲೊಬ್ಬನು ತನ್ನ ಪಾದಗಳ ಕಡೆಗೆ ನೋಡಿದರೆ, ಅವನು ನಮ್ಮನ್ನು ತನ್ನ ಪಾದಗಳ ಕೆಳಭಾಗದಲ್ಲಿ ಕಾಣುವನು. ಆಗ ಅವರು (ಪ್ರವಾದಿ) ಹೇಳಿದರು: ಓ ಅಬೂ ಬಕರ್, ವಿಜಯ, ಸಹಾಯ, ರಕ್ಷಣೆ ಮತ್ತು ಸರಿಯಾದ ಮಾರ್ಗದರ್ಶನದೊಂದಿಗೆ ಅಲ್ಲಾಹು ಮೂರನೆಯವನಾಗಿರುವ ಇಬ್ಬರ ಬಗ್ಗೆ ನಿನ್ನ ಭಾವನೆಯೇನು?!