عَنْ يحيى بنِ عُمَارةَ المَازِنِيِّ قَالَ:
شَهِدْتُ عَمْرَو بْنَ أَبِي حَسَنٍ سَأَلَ عَبْدَ اللَّهِ بْنَ زَيْدٍ، عَنْ وُضُوءِ النَّبِيِّ صَلَّى اللهُ عَلَيْهِ وَسَلَّمَ فَدَعَا بِتَوْرٍ مِنْ مَاءٍ، فَتَوَضَّأَ لَهُمْ وُضُوءَ النَّبِيِّ صَلَّى اللهُ عَلَيْهِ وَسَلَّمَ، فَأَكْفَأَ عَلَى يَدِهِ مِنَ التَّوْرِ، فَغَسَلَ يَدَيْهِ ثَلاَثًا، ثُمَّ أَدْخَلَ يَدَهُ فِي التَّوْرِ، فَمَضْمَضَ وَاسْتَنْشَقَ وَاسْتَنْثَرَ، ثَلاَثَ غَرَفَاتٍ، ثُمَّ أَدْخَلَ يَدَهُ فَغَسَلَ وَجْهَهُ ثَلاَثًا، ثُمَّ غَسَلَ يَدَيْهِ مَرَّتَيْنِ إِلَى المِرْفَقَيْنِ، ثُمَّ أَدْخَلَ يَدَهُ فَمَسَحَ رَأْسَهُ، فَأَقْبَلَ بِهِمَا وَأَدْبَرَ مَرَّةً وَاحِدَةً، ثُمَّ غَسَلَ رِجْلَيْهِ إِلَى الكَعْبَيْنِ.
[صحيح] - [متفق عليه] - [صحيح البخاري: 186]
المزيــد ...
ಯಹ್ಯಾ ಬಿನ್ ಉಮಾರ ಮಾಝಿನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ಅಮ್ರ್ ಬಿನ್ ಅಬೂ ಹಸನ್ ಅಬ್ದುಲ್ಲಾ ಬಿನ್ ಝೈದ್‌ರೊಂದಿಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ (ಅಂಗಸ್ನಾನ) ಬಗ್ಗೆ ವಿಚಾರಿಸುವುದನ್ನು ನೋಡಿದೆ. ಆಗ ಅಬ್ದುಲ್ಲಾ ಬಿನ್ ಝೈದ್ ನೀರಿನ ಪಾತ್ರೆಯನ್ನು ತರಿಸಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂ ನಿರ್ವಹಿಸಿದಂತೆ ವುದೂ ನಿರ್ವಹಿಸಿ ತೋರಿಸಿದರು. ಅವರು ಪಾತ್ರೆಯಿಂದ ತನ್ನ ಕೈಗಳಿಗೆ ನೀರನ್ನು ಸುರಿದು ಅವುಗಳನ್ನು ಮೂರು ಬಾರಿ ತೊಳೆದರು. ನಂತರ ತಮ್ಮ ಕೈಯನ್ನು ಪಾತ್ರೆಗೆ ತೂರಿಸಿ, ಬಾಯಿ ಮುಕ್ಕಳಿಸಿದರು, ನೀರನ್ನು ಮೂಗಿಗೆ ರಭಸದಿಂದ ಎಳೆದು ಹೊರಬಿಟ್ಟರು. ಅವರು ಇದನ್ನು ಮೂರು ಬಾರಿ ಮಾಡಿದರು. ನಂತರ ಕೈಯನ್ನು ಪಾತ್ರೆಗೆ ತೂರಿಸಿ ಮೂರು ಬಾರಿ ಮುಖವನ್ನು ತೊಳೆದರು. ನಂತರ ಎರಡು ಬಾರಿ ಕೈಗಳನ್ನು ಮೊಣಕೈಗಳ ತನಕ ತೊಳೆದರು. ನಂತರ ಕೈಯನ್ನು ನೀರಿಗೆ ತೂರಿಸಿ ತಲೆಯನ್ನು ಮುಂದಿನಿಂದ ಹಿಂದಕ್ಕೆ ಮತ್ತು ಹಿಂದಿನಿಂದ ಮುಂದಕ್ಕೆ ಒಂದು ಬಾರಿ ಸವರಿದರು. ನಂತರ ಹರಡುಗಂಟುಗಳ ತನಕ ಕಾಲುಗಳನ್ನು ತೊಳೆದರು.
[صحيح] - [متفق عليه] - [صحيح البخاري - 186]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಗೆ ವುದೂ (ಅಂಗಸ್ನಾನ) ನಿರ್ವಹಿಸಿದರೆಂದು ಅಬ್ದುಲ್ಲಾ ಬಿನ್ ಝೈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರಾಯೋಗಿಕವಾಗಿ ವಿವರಿಸಿದರು. ಅವರು ಒಂದು ಸಣ್ಣ ನೀರಿನ ಪಾತ್ರೆಯನ್ನು ತರಿಸಿದರು. ಅವರು ಮೊದಲು ಅಂಗೈಗಳನ್ನು ತೊಳೆಯುವ ಮೂಲಕ ಆರಂಭಿಸಿದರು. ನಂತರ ಪಾತ್ರೆಯನ್ನು ಬಗ್ಗಿಸಿ, ಸ್ವಲ್ಪ ನೀರನ್ನು ಅಂಗೈಗೆ ಸುರಿದು ಪಾತ್ರೆಯ ಹೊರಗೆ ಮೂರು ಬಾರಿ ತೊಳೆದರು. ನಂತರ ಕೈಯನ್ನು ಪಾತ್ರೆಯಲ್ಲಿ ತೂರಿಸಿದರು. ಅದರಿಂದ ಮೂರು ಬಾರಿ ನೀರನ್ನು ಹೊರತೆಗೆದು ಮೂರು ಬಾರಿ ಬಾಯಿ ಮುಕ್ಕಳಿಸಿದರು ಮತ್ತು ನೀರನ್ನು ಮೂಗಿನ ಒಳಗೆ ಎಳೆದು ಹೊರಬಿಟ್ಟರು. ನಂತರ ಪಾತ್ರೆಯಿಂದ ನೀರನ್ನು ತೆಗೆದು ಮುಖವನ್ನು ಮೂರು ಬಾರಿ ತೊಳೆದರು. ನಂತರ ಅದರಿಂದ ನೀರನ್ನು ತೆಗೆದು ಎರಡು ಕೈಗಳನ್ನು ಮೊಣಕೈಗಳ ತನಕ ಎರಡೆರಡು ಬಾರಿ ತೊಳೆದರು. ನಂತರ ಪಾತ್ರೆಯಲ್ಲಿ ಕೈ ತೂರಿಸಿ ಎರಡು ಕೈಗಳಿಂದ ತಲೆಯನ್ನು ಸವರಿದರು. ಸವರುವಾಗ ತಲೆಯ ಮುಂಭಾಗದಿಂದ ಆರಂಭಿಸಿ ಕತ್ತಿನ ಹಿಂಭಾಗದ ತುದಿ ತಲುಪುವ ತನಕ ಸವರಿದರು, ಮತ್ತು ಸವರಲು ಆರಂಭಿಸಿದ ಸ್ಥಳಕ್ಕೆ ತಲುಪುವ ತನಕ ಕೈಗಳನ್ನು ಹಾಗೆಯೇ ಮುಂಭಾಗಕ್ಕೆ ತಂದರು. ನಂತರ ಹರಡುಗಂಟುಗಳು ಸೇರಿದಂತೆ ಕಾಲುಗಳನ್ನು ತೊಳೆದರು.