عن عائشةَ أمِّ المؤْمنِين رضي الله عنها قالت:
لَمْ يَكُنِ النَّبِيُّ صَلَّى اللهُ عَلَيْهِ وَسَلَّمَ عَلَى شَيْءٍ مِنَ النَّوَافِلِ أَشَدَّ مِنْهُ تَعَاهُدًا عَلَى رَكْعَتَيِ الفَجْرِ.

[صحيح] - [متفق عليه] - [صحيح البخاري: 1169]
المزيــد ...

ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್‌ನ ಎರಡು (ಐಚ್ಛಿಕ) ರಕ್‌ಅತ್‌ಗಳನ್ನು ನಿರ್ವಹಿಸಲು ತೋರುತ್ತಿದ್ದ ಕಾಳಜಿಯನ್ನು ಬೇರೆ ಯಾವುದೇ ಐಚ್ಛಿಕ ನಮಾಝ್‌ಗಳಲ್ಲಿ ತೋರುತ್ತಿರಲಿಲ್ಲ".

[صحيح] - [متفق عليه] - [صحيح البخاري - 1169]

ವಿವರಣೆ

ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ; ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್ ನಮಾಝ್‌ಗಿಂತ ಮುಂಚಿನ ಎರಡು ರಕ್‌ಅತ್‌ ರವಾತಿಬ್ ಸುನ್ನತ್ ನಮಾಝ್‌ ನಿರ್ವಹಿಸಲು ತೋರುತ್ತಿದ್ದ ಬದ್ಧತೆ, ಆಸಕ್ತಿ ಮತ್ತು ಕಾಳಜಿಯನ್ನು ಬೇರೆ ಯಾವುದೇ ಐಚ್ಛಿಕ ನಮಾಝ್‌ಗಳಲ್ಲಿ ತೋರುತ್ತಿರಲಿಲ್ಲ.

ಹದೀಸಿನ ಪ್ರಯೋಜನಗಳು

  1. ನವಾಫಿಲ್ (ಐಚ್ಛಿಕ) ನಮಾಝ್‌ಗಳು ಎಂದರೆ ಕಡ್ಡಾಯ ನಮಾಝ್‌ಗಳ ಹೊರತಾಗಿ ನಿರ್ವಹಿಸುವ ಇತರ ನಮಾಝ್‌ಗಳಾಗಿವೆ. ಇಲ್ಲಿ ಇದರ ಉದ್ದೇಶವು ಕಡ್ಡಾಯ ನಮಾಝ್‌ಗಳ ನಂತರ ನಿರ್ವಹಿಸುವ ರವಾತಿಬ್ ಸುನ್ನತ್ ನಮಾಝ್‌ಗಳಾಗಿವೆ.
  2. ರವಾತಿಬ್ ಸುನ್ನತ್ ನಮಾಝ್‌ಗಳು ಹೀಗಿವೆ: ಫಜ್ರ್‌ಗಿಂತ ಮೊದಲು ಎರಡು ರಕ್‌ಅತ್‌ಗಳು, ಝುಹ್ರ್‌ಗಿಂತ ಮೊದಲು ನಾಲ್ಕು ರಕ್‌ಅತ್‌ಗಳು ಮತ್ತು ನಂತರ ಎರಡು ರಕ್‌ಅತ್‌ಗಳು, ಮಗ್ರಿಬ್‌ನ ನಂತರ ಎರಡು ರಕ್‌ಅತ್‌ಗಳು, ಮತ್ತು ಇಶಾದ ನಂತರ ಎರಡು ರಕ್‌ಅತ್‌ಗಳು.
  3. ಫಜ್ರ್‌ನ ರವಾತಿಬ್ ನಮಾಝ್ ಅನ್ನು ಪ್ರಯಾಣದಲ್ಲಿರುವಾಗಲೂ ಮತ್ತು ಊರಿನಲ್ಲಿರುವಾಗಲೂ ಎರಡೂ ಸಂದರ್ಭಗಳಲ್ಲಿ ನಿರ್ವಹಿಸಬೇಕಾಗಿದೆ. ಆದರೆ, ಝುಹ್ರ್, ಮಗ್ರಿಬ್ ಮತ್ತು ಇಶಾದ ರವಾತಿಬ್ ನಮಾಝ್‌ಗಳನ್ನು ಸಾಮಾನ್ಯವಾಗಿ ಊರಿನಲ್ಲಿರುವಾಗ ಮಾತ್ರ ನಿರ್ವಹಿಸಲಾಗುತ್ತದೆ.
  4. ಫಜ್ರ್‌ನ ಎರಡು ರಕ್‌ಅತ್‌ಗಳನ್ನು ನಿರ್ವಹಿಸುವುದು ಪ್ರಬಲವಾದ ಅಪೇಕ್ಷಣೀಯವಾಗಿದೆ. ಆದ್ದರಿಂದ ಅವೆರಡನ್ನು ನಿರ್ಲಕ್ಷಿಸಬಾರದು.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ